ETV Bharat / bharat

ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್.. ಹೊಟ್ಟೆಯಲ್ಲಿದ್ದಿದ್ದು ₹9 ಕೋಟಿ ಮೌಲ್ಯದ ಹೆರಾಯಿನ್​! - swallowing the capsules

ಹೆರಾಯಿನ್​ ಕ್ಯಾಪ್ಸುಲ್​ ನುಂಗಿ ಸ್ಮಗ್ಲಿಂಗ್ ಮಾಡ್ತಿದ್ದ ವ್ಯಕ್ತಿಯೊಬ್ಬನ ಬಂಧನ ಮಾಡುವಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆತನ ಹೊಟ್ಟೆಯಲ್ಲಿ ಬರೋಬ್ಬರಿ 86 ಕ್ಯಾಪ್ಸುಲ್​​ಗಳಿದ್ದವು ಎಂದು ತಿಳಿದು ಬಂದಿದೆ.

ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್
ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್
author img

By

Published : Jul 21, 2022, 5:21 PM IST

ಚೆನ್ನೈ(ತಮಿಳುನಾಡು): ಗುಪ್ತಾಂಗ, ಒಳ ಉಡುಪು, ಗುದದ್ವಾರದಲ್ಲಿ ಡ್ರಗ್ಸ್​ ಇಟ್ಟುಕೊಂಡು ಸಾಗಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದರೆ, ಇದೀಗ ಕ್ಯಾಪ್ಸುಲ್​ ನುಂಗಿ​​ ಸ್ಮಗ್ಲಿಂಗ್​​ ಮಾಡುವ ಪ್ರಕರಣ ಬೆಳಕಿಗೆ ಬರಲು ಶುರುವಾಗಿವೆ. ಅಂತಹ ವ್ಯಕ್ತಿಯೊಬ್ಬನನ್ನು ಬಂಧನ ಮಾಡುವಲ್ಲಿ ಚೆನ್ನೈ ಕಸ್ಟಮ್ಸ್​​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ವಿಭಾಗದ ಏರ್​ ಇಂಟೆಲಿಜೆನ್ಸ್​ ಅಧಿಕಾರಿಗಳು ತಾಂಜಾನಿಯಾ ಪ್ರಜೆಯಿಂದ ಸುಮಾರು 9 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 1.266 ಕೆಜಿ ತೂಕದ ಹೆರಾಯಿನ್​ ಕ್ಯಾಪ್ಸುಲ್ ನುಂಗಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: 109 ಹೆರಾಯಿನ್ ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್​.. ಆರೋಪಿ ಬಲೆಗೆ ಬಿದ್ದಿದ್ದು ಹೀಗೆ!

ಇಥಿಯೋಪಿಯನ್​ ಏರ್​ಲೈನ್ಸ್​ ವಿಮಾನದಲ್ಲಿ ಉಗಾಂಡಾದಿಂದ ತಾಂಜೇನಿಯಾ ವ್ಯಕ್ತಿ ಜುಲೈ 14ರಂದು ಚೆನ್ನೈಗೆ ಆಗಮಿಸಿದ್ದರು. ಈ ವೇಳೆ, ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಹೆರಾಯಿನ್ ಕ್ಯಾಪ್ಸುಲ್​ ನುಂಗಿರುವುದು ತಿಳಿದು ಬಂದಿದೆ. ಕಳೆದ ಮೇ ತಿಂಗಳಲ್ಲಿ ಹೈದರಾಬಾದ್​​ನ ಶಂಶಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಇದೇ ರೀತಿಯಾಗಿ ಸಿಕ್ಕಿಬಿದ್ದಿದ್ದ. ಆರೋಪಿ ಹೊಟ್ಟೆಯಲ್ಲಿ 109 ಹೆರಾಯಿನ್​ ಕ್ಯಾಪ್ಸುಲ್​ ಇದ್ದವು.

  • Punjab | Custom officials of Amritsar International Airport seized gold weighing 933.2g (concealed in baggage) worth Rs 49.27 lakhs from an Indian national who arrived from Dubai. The pax was arrested under Section 104 of the Customs Act, 1962: Custom officials pic.twitter.com/D3PfnG7m4x

    — ANI (@ANI) July 21, 2022 " class="align-text-top noRightClick twitterSection" data=" ">

ಮತ್ತೊಂದು ಪ್ರಕರಣದಲ್ಲಿ ಪಂಜಾಬ್​ನ ಅಮೃತಸರ್​ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ 933.2 ಗ್ರಾಮ ಚಿನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ದುಬೈನಿಂದ ಭಾರತಕ್ಕೆ ಬಂದ ವ್ಯಕ್ತಿ ಬಳಿ ಇಷ್ಟೊಂದು ಚಿನ್ನ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.