ETV Bharat / bharat

ಕೆಲಸ ಕೊಡಿಸುವುದಾಗಿ ವಂಚನೆ: ಕಾಸಿಲ್ಲದೆ 1200 ಕಿ.ಮೀ. ನಡೆದುಕೊಂಡೇ ಮನೆ ತಲುಪಿದ ಕಾರ್ಮಿಕ! - ಜಾರ್ಖಂಡ್​ನ ಧನ್ಬಾದ್

ದೆಹಲಿಯಲ್ಲಿ ಕೆಲಸ ಕೊಡಿಸುವುದಾಗಿ ಏಜೆಂಟರ್ ಒಬ್ಬ ​​ವಂಚಿಸಿದ್ದು, ತನ್ನ ಜೇಬಿನಲ್ಲಿದ್ದ ಬಿಡಿಗಾಸನ್ನೂ ಕಳೆದುಕೊಂಡ ಕಾರ್ಮಿಕ 1200 ಕಿ.ಮೀ. ದೂರ ನಡೆದುಕೊಂಡೇ ಊರು ಸೇರಿಕೊಂಡಿದ್ದಾನೆ.

labourer
ಕಾಸಿಲ್ಲದೆ 1200 ಕಿ.ಮೀ ನಡೆದು ಮನೆ ತಲುಪಿದ ಕಾರ್ಮಿಕ
author img

By

Published : Mar 12, 2021, 2:44 PM IST

ಧನ್ಬಾದ್ (ಜಾರ್ಖಂಡ್): ಕೆಲಸ ಸಿಗದೆ ಮೋಸ ಹೋದ ಕಾರ್ಮಿಕನೋರ್ವ ಕಾಲ್ನಡಿಗೆಯಲ್ಲೇ ದೆಹಲಿಯಿಂದ ಜಾರ್ಖಂಡ್​ಗೆ 1200 ಕಿ.ಮೀ. ದೂರ ಕ್ರಮಿಸಿ ತನ್ನ ಮನೆ ತಲುಪಿದ್ದಾನೆ.

ಜಾರ್ಖಂಡ್​ನ ಧನ್ಬಾದ್ ಮೂಲದ ಬರ್ಜೋಮ್ ಬಮ್ದಾ ಪಹಾದಿಯಾ ಎಂಬ ಕಾರ್ಮಿಕನಿಗೆ ದೆಹಲಿಯಲ್ಲಿ ಕೆಲಸ ಕೊಡಿಸುವುದಾಗಿ ಏಜೆಂಟರ್ ಒಬ್ಬ ​​ವಂಚಿಸಿದ್ದಾನೆ. ತನ್ನ ಜೇಬಿನಲ್ಲಿದ್ದ ಬಿಡಿಗಾಸನ್ನೂ ಕಳೆದುಕೊಂಡ ಪಹಾದಿಯಾ, ನಡೆದುಕೊಂಡೇ ಊರು ತಲುಪಲು ನಿರ್ಧರಿಸಿದ.

ಇದನ್ನೂ ಓದಿ: ತಮಿಳುನಾಡು ಕದನ: ತಾವು ಕಣಕ್ಕಿಳಿಯುವ ಕ್ಷೇತ್ರ ಬಹಿರಂಗ ಪಡಿಸಿದ ಕಮಲ್ ಹಾಸನ್​

ಹಗಲು ರಾತ್ರಿಯೆನ್ನದೇ ನಡೆಯುತ್ತಾ 1200 ಕಿ.ಮೀ. ದೂರ ಕ್ರಮಿಸಿದ್ದಾನೆ. ಪ್ರಯಾಣದ ಆಂತಿಮ ಘಟ್ಟದಲ್ಲಿ ಈತನನ್ನು ಗಮನಿಸಿ, ವಿಚಾರಿಸಿದ ಕೆಲ ಬ್ಯಾಂಕ್​​ ನೌಕರರು ಬಸ್​ ಹತ್ತಿಸಿ ಊರಿಗೆ ಕಳುಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.