ETV Bharat / bharat

ಲಖಿಂಪುರ ಖೇರಿ ಹಿಂಸೆ: ಕೇಂದ್ರ ಸಚಿವರ ಪುತ್ರ ಸೇರಿ 14 ಆರೋಪಿಗಳ ವಿರುದ್ಧ ದೋಷಾರೋಪಣೆ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 14 ಜನರ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ.

charges-framed-against-ashish-mishra-including-14-accused-in-lakhimpur-violence-case
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ಕೇಂದ್ರ ಸಚಿವರ ಪುತ್ರ ಸೇರಿ 14 ಆರೋಪಿಗಳ ವಿರುದ್ಧ ದೋಷಾರೋಪಣೆ
author img

By

Published : Dec 6, 2022, 10:23 PM IST

Updated : Dec 6, 2022, 10:50 PM IST

ಲಖಿಂಪುರ ಖೇರಿ (ಉತ್ತರ ಪ್ರದೇಶ): ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 14 ಮಂದಿಯ ವಿರುದ್ಧ ನ್ಯಾಯಾಲಯ ದೋಷಾರೋಪಣೆ ಹೊರಿಸಿದೆ. ಇದರಲ್ಲಿ 13 ಆರೋಪಿಗಳ ವಿರುದ್ಧ ಕೊಲೆ, ದಂಗೆ ಸೇರಿ ವಿವಿಧ ಗಂಭೀರ ಸ್ವರೂಪದ ಐಪಿಸಿ ಸೆಕ್ಷನ್‌ಗಳಡಿ ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ, ಸಹಚರರಾದ ಅಂಕಿತ್ ದಾಸ್, ತಾಲಿಫ್ ಅಲಿಯಾಸ್ ಕಾಳೆ, ಸುಮಿತ್ ಜೈಸ್ವಾಲ್, ಸತ್ಯಂ ತ್ರಿಪಾಠಿ, ಆಶಿಶ್ ಪಾಂಡೆ, ಶಿಶುಪಾಲ್, ಉಲ್ಲಾಸ್ ಕುಮಾರ್, ಲವಕುಶ್ ರಾಣಾ, ಶೇಖರ್ ಭಾರತಿ, ರಿಂಕು ರಾಣಾ, ಧರ್ಮೇಂದ್ರ ಬಂಜಾರಾ ಸೇರಿದಂತೆ 13 ಆರೋಪಿಗಳ ಹೆಸರು ದೋಷಾರೋಪಣೆಯಲ್ಲಿವೆ. ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಸೇರಿದಂತೆ ಎಲ್ಲರನ್ನೂ ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಮತ್ತೊಬ್ಬ ಆರೋಪಿ ವೀರೇಂದ್ರ ಶುಕ್ಲಾ ಜಾಮೀನಿನ ಮೇಲೆ ಹೊರಗಿದ್ದಾರೆ.

ಕೇಂದ್ರ ಸರ್ಕಾರ ರೂಪಿಸಿದ್ದ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ಸಂದರ್ಭದಲ್ಲಿ 2021ರ ಅಕ್ಟೋಬರ್​ 3ರಂದು ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರ ಗ್ರಾಮಕ್ಕೆ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಭೇಟಿ ವಿರೋಧಿಸಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಲಾಗಿತ್ತು. ಇದರಲ್ಲಿ ಎಂಟು ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: ಕಲ್ಲಿದ್ದಲು ಗಣಿ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದ್ದಕ್ಕೆ ರೈತನಿಗೆ ಬಿತ್ತು ದಂಡ!

Last Updated : Dec 6, 2022, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.