ಹೈದರಾಬಾದ್: ಕೊಬ್ಬಿನಾಮ್ಲಗಳ ಆಧಾರದ ಮೇಲೆ ಆಹಾರದಲ್ಲಿನ ಬದಲಾವಣೆಯು 16 ವಾರಗಳ ಅವಧಿಯಲ್ಲಿ ರೋಗಿಗಳಲ್ಲಿ ತೀವ್ರವಾದ ತಲೆನೋವನ್ನು ಕಡಿಮೆಗೊಳಿಸಿದೆ ಎಂಬುದನ್ನು ಹೊಸ ಅಧ್ಯಯನವು ತೋರಿಸಿದೆ.
ಮೈಗ್ರೇನ್ ರೋಗಿಗಳಿಗೆ ಪೂರ್ಣ ಪರಿಹಾರ ನೀಡಲು ಅಸ್ತಿತ್ವದಲ್ಲಿರುವ ಚಿಕಿತ್ಸೆಗಳು ಸಾಕಾಗುವುದಿಲ್ಲ. ಬಿಎಂಜೆಯಲ್ಲಿ ಪ್ರಕಟವಾದ ಹೊಸ ಅಧ್ಯಯನವು ರೋಗಿಯು ಕಡಿಮೆ ಮೈಗ್ರೇನ್ ಮತ್ತು ತಲೆನೋವುಗಳನ್ನು ಅನುಭವಿಸಲು ತಮ್ಮ ಪ್ರಯತ್ನದಲ್ಲಿ ಬಳಸಬಹುದಾದ ಹೆಚ್ಚುವರಿ ಆಯ್ಕೆಯನ್ನು ತಿಳಿಸಿದೆ.
ಆಧುನಿಕ ಆಹಾರ ಪದ್ಧತಿಗಳಿಗೆ ಹೋಲಿಸಿದರೆ ನಮ್ಮ ಪೂರ್ವಜರು ವಿಭಿನ್ನ ಪ್ರಮಾಣದಲ್ಲಿ ಕೊಬ್ಬನ್ನು ತಿನ್ನುತ್ತಿದ್ದರು. ಆದರೆ ಇಂದು ನಾವು ಸೇವಿಸುವ ಚಿಪ್ಸ್ನಂತಹ ಸಂಸ್ಕರಿಸಿದ ಆಹಾರಗಳಿಗೆ ಜೋಳ, ಸೋಯಾಬೀನ್ ಮತ್ತು ಹತ್ತಿ ಬೀಜದಂತಹ ತೈಲಗಳನ್ನು ಸೇರಿಸುವುದರಿಂದ ನಮ್ಮ ದೇಹವು ಉತ್ಪಾದಿಸದ ಪಾಲಿಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ನಮ್ಮ ಆಹಾರದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಈ ಅಧ್ಯಯನದಲ್ಲಿ ಒಮೆಗಾ -6 (ಎನ್ -6) ಮತ್ತು ಒಮೆಗಾ -3 (ಎನ್ -3) ಪರೀಕ್ಷಿಸಲಾಗಿದೆ. ಇವೆರಡೂ ನಮ್ಮ ದೇಹದೊಳಗೆ ಪ್ರಮುಖ ಕಾರ್ಯಗಳನ್ನು ಹೊಂದಿವೆ. ಆದರೆ ಸಮತೋಲನದಲ್ಲಿರಬೇಕು. ಏಕೆಂದರೆ ಎನ್-3 ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೆ ಎನ್ -6 ನ ಕೆಲವು ಉತ್ಪನ್ನಗಳು ನೋವನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನವು ತೋರಿಸಿದೆ.
ವ್ಯಕ್ತಿಯ ಆಹಾರದಲ್ಲಿನ ಈ ಕೊಬ್ಬಿನಾಮ್ಲಗಳ ಪ್ರಮಾಣವು ತಲೆ ನೋವಿನ ಮೇಲೆ ಪರಿಣಾಮ ಬೀರಬಹುದೇ ಎಂದು ನೋಡಲು, ಪ್ರಸ್ತುತ ರೋಗನಿರ್ಣಯ ಮತ್ತು ಮೈಗ್ರೇನ್‌ಗೆ ಚಿಕಿತ್ಸೆ ಪಡೆಯುವ 182 ರೋಗಿಗಳ ಮೇಲೆ ಪ್ರಯೋಗ ನಡೆಸಲಾಯಿತು. ಎಂಡಿ, ನರವಿಜ್ಞಾನ ಮತ್ತು ಆಂತರಿಕ ಪ್ರಾಧ್ಯಾಪಕ ಡೌಗ್ ಮನ್ ನೇತೃತ್ವದಲ್ಲಿ ಯುಎನ್‌ಸಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಈ ಪ್ರಯೋಗ ನಡೆಯಿತು. ಅವರ ಪ್ರಸ್ತುತ ಚಿಕಿತ್ಸೆಗಳ ಜೊತೆಗೆ, ರೋಗಿಗಳು 16 ವಾರಗಳವರೆಗೆ ಮೂರು ಆಹಾರಕ್ರಮಗಳಲ್ಲಿ ಒಂದನ್ನು ಅನುಸರಿಸುತ್ತಾರೆ.
ಈ ಪ್ರಯೋಗದಲ್ಲಿ ಎನ್ -3 ನ ಹೆಚ್ಚಿದ ಮತ್ತು ಎನ್ -6 ಕೊಬ್ಬಿನಾಮ್ಲಗಳ ಕಡಿಮೆ ಆಹಾರವನ್ನು ಅನುಸರಿಸಿದವರು ದೊಡ್ಡ ಸುಧಾರಣೆಯನ್ನು ಅನುಭವಿಸಿದ್ದಾರೆ. ಕೆಲವು ಕೊಬ್ಬಿನಾಮ್ಲಗಳು ನೋವಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಜೀವ ರಾಸಾಯನಿಕ ಕಲ್ಪನೆಯು ವಿವಿಧ ರೀತಿಯ ದೀರ್ಘಕಾಲದ ನೋವಿಗೆ ಅನ್ವಯಿಸುತ್ತದೆ. ಇದೇ ತಂಡ ಇತರ ನೋವು ರೋಗಲಕ್ಷಣಗಳಲ್ಲಿ ಆಹಾರ ಮಾರ್ಪಾಡುಗಳನ್ನು ಪರೀಕ್ಷಿಸಲು ಹೊಸ ಅಧ್ಯಯನದಲ್ಲಿ ಕೆಲಸ ಮಾಡುತ್ತಿದ್ದಾರೆ.