ETV Bharat / bharat

Chandrayaan-3: ಜುಲೈ 13ರಂದು ಮಧ್ಯಾಹ್ನ 2.30ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ - Chandrayaan 3 Project

ಇಸ್ರೋ ಮತ್ತೊಂದು ವಿಕ್ರಮಕ್ಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಚಂದ್ರಯಾನ ಸರಣಿಯ ಮೂರನೇ ನೌಕೆಯನ್ನು ನಭಕ್ಕೆ ಹಾರಿಸಲಿದೆ.

ಚಂದ್ರಯಾನ-3
ಚಂದ್ರಯಾನ-3
author img

By

Published : Jun 28, 2023, 7:48 PM IST

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿಕೆ

ನವದೆಹಲಿ: ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಜುಲೈ 13ರಂದು ಮಧ್ಯಾಹ್ನ 2:30 ಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಘೋಷಿಸಿದೆ. ಇದು ಲ್ಯಾಂಡರ್ ಮತ್ತು ರೋವರ್ ಮಾದರಿಯನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯುವ ಮತ್ತು ರೋವರ್​ ಸಂಚರಿಸುವ ಸಾಮರ್ಥ್ಯ ಪ್ರದರ್ಶಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಜುಲೈ 13ರಂದು ಮುಹೂರ್ತ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿ.ಮೀವರೆಗೆ ಸಾಗಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್‌ ರಿಗೊಲಿತ್, ಅಲ್ಲಿಯ ಭೂಕಂಪನ ಅಧ್ಯಯನ ಮಾಡುವ ಲೂನಾರ್‌ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನವನ್ನು ನಡೆಸಲಾಗುವುದು ಎಂದು ಇಸ್ರೋ ಹೇಳಿದೆ.

ಪ್ರೊಪಲ್ಷನ್ ಮಾಡ್ಯೂಲ್ ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು 100 ಕಿ.ಮೀ ಚಂದ್ರನ ಕಕ್ಷೆಯವರೆಗೆ ಸಾಗಿಸುತ್ತದೆ. ಇದು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿಮೆಟ್ರಿಕ್ ಅಳತೆಗಳನ್ನು ಅಧ್ಯಯನ ಮಾಡಲು ವಾಸಯೋಗ್ಯ ಗ್ರಹ ಭೂಮಿಯ ಪೇಲೋಡ್‌ನ ಸ್ಪೆಕ್ಟ್ರೋ-ಪೋಲಾರಿಮೆಟ್ರಿಯನ್ನು ಹೊಂದಿದೆ.

ಪರೀಕ್ಷಾರ್ಥ ಪ್ರಯೋಗ : ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಇಸ್ರೋದ ಚಂದ್ರಯಾನದ ಮೂರನೇ ಆವೃತ್ತಿಯಾದ ಚಂದ್ರಯಾನ-3 ಯೋಜಿಸಿದಂತೆ ನಡೆದರೆ ಜುಲೈ 12 ರಿಂದ 19 ರ ನಡುವೆ ಉಡಾವಣೆಯಾಗಲಿದೆ. ಸದ್ಯಕ್ಕೆ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ಪರೀಕ್ಷಾರ್ಥ ಪ್ರಯೋಗಗಳು ನಡೆಯುತ್ತಿವೆ ಎಂದು ಕೊಟ್ಟಾಯಂ ಜಿಲ್ಲೆಯ ವೈಕಂನ ಕೊತ್ತವಾರ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಮತ್ತು ಬಾಹ್ಯಾಕಾಶ ಪ್ರದರ್ಶನ ಕಾರ್ಯಕ್ರಮದಲ್ಲಿ ಹೇಳಿದರು.

ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಕೇಂದ್ರವನ್ನು ಚಂದ್ರಯಾನ-3 ನೌಕೆ ಈಗಾಗಲೇ ತಲುಪಿದೆ. ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳಲಿದೆ. ಉಡಾವಣೆಗೆ ಎಲ್​ವಿಎಂ-3 ಬಳಸಲಾಗುವುದು. ಅದರ ಜೋಡಣೆ ನಡೆಯುತ್ತಿದೆ. ಜೋಡಣೆಯ ಎಲ್ಲಾ ಭಾಗಗಳು ಶ್ರೀಹರಿಕೋಟಾವನ್ನು ತಲುಪಿವೆ ಎಂದು ತಿಳಿಸಿದರು.

ಉಡಾವಣೆಯ ಸಮಯದಲ್ಲಿ ಯಾವುದೇ ತೊಂದರೆಗಳು ಉಂಟಾಗದಂತೆ ಚಂದ್ರಯಾನ-3 ರಲ್ಲಿ ಹಾರ್ಡ್‌ವೇರ್, ರಚನೆ, ಕಂಪ್ಯೂಟರ್‌ಗಳು, ಸಾಫ್ಟ್‌ವೇರ್ ಮತ್ತು ಸಂವೇದಕಗಳಲ್ಲಿ ಮಹತ್ತರ ಬದಲಾವಣೆ ಕಾರ್ಯ ನಡೆದಿದೆ. ಹೆಚ್ಚು ಇಂಧನವನ್ನೂ ಅದರಲ್ಲಿ ಅಳವಡಿಸಲಾಗಿದೆ. ನೌಕೆಯ ಲ್ಯಾಂಡಿಂಗ್ ಕಾಲುಗಳನ್ನು ಬಲಪಡಿಸಲಾಗಿದೆ. ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ದೊಡ್ಡ ಸೌರ ಫಲಕಗಳನ್ನು ಜೋಡಿಸಲಾಗಿದೆ. ನೌಕೆಯ ವೇಗವನ್ನು ಅಳೆಯಲು ಅಭಿವೃದ್ಧಿಪಡಿಸಿರುವ 'ಲೇಸರ್ ಡಾಪ್ಲರ್ ವೆಲೋಸಿಮೀಟರ್' ಉಪಕರಣವನ್ನೂ ಅದರಲ್ಲಿ ಅಳವಡಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

ಇದನ್ನೂ ಓದಿ: ನಾಸಾದ ಉಪಗ್ರಹದೊಂದಿಗೆ ಚಂದ್ರಯಾನ-2 ಉಪಗ್ರಹದ ಡಿಕ್ಕಿ ತಪ್ಪಿಸಿದ ಇಸ್ರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.