ETV Bharat / bharat

ರಾಜ್ಯದ ಉದ್ಯಮಿಗಳಿಗೆ ಕೆಟಿಆರ್‌ ಗಾಳ.. ಟ್ವೀಟ್‌ ಮೂಲಕವೇ ಡಿಕೆಶಿ ತಿರುಗೇಟು.. ಅಶ್ವತ್ಥ್ ನಾರಾಯಣ ಹೀಗಂದರು.. - ಬೆಂಗಳೂರಿನಿಂದ ಹೈದರಾಬಾದ್‌ಗೆ ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಎಂಬ ತೆಲಂಗಾಣ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್

ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಈಗ ಹೊರ ರಾಜ್ಯದಲ್ಲೂ ಚರ್ಚೆಯಾಗುತ್ತಿದೆ. ಉದ್ಯಮಿಯೊಬ್ಬರು ಮಾಡಿದ ಟ್ವೀಟ್​ಗೆ ಈಗ ತೆಲಂಗಾಣ ಹಾಗೂ ಕರ್ನಾಟಕ ರಾಜಕಾರಣಿಗಳ ನಡುವೆ ವಾಕ್​ ಸಮರ ನಡೆಯುತ್ತಿದೆ..

ರಾಜ್ಯದ ಉದ್ಯಮಿಗಳಿಗೆ ಕೆಟಿಆರ್‌ ಗಾಳ
ರಾಜ್ಯದ ಉದ್ಯಮಿಗಳಿಗೆ ಕೆಟಿಆರ್‌ ಗಾಳ
author img

By

Published : Apr 4, 2022, 3:53 PM IST

Updated : Apr 4, 2022, 4:04 PM IST

ಹೈದರಾಬಾದ್ ​: ಬೆಂಗಳೂರಿನಿಂದ ಹೈದರಾಬಾದ್‌ಗೆ ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಎಂಬ ತೆಲಂಗಾಣ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ ಅವರ ಹೇಳಿಕೆಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಸವಾಲನ್ನು ಸ್ವೀಕಾರ ಮಾಡಿದ್ದಾರೆ.

ಡಿಕೆಶಿ ಹಾಗೂ ಕೆಟಿಆರ್​ನಡುವಿನ ಟ್ವೀಟ್​ : ನನ್ನ ಸ್ನೇಹಿತರಾದ ಕೆ.ಟಿ. ರಾಮರಾವ್​ ಅವರೇ.. ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. 2023ರ ಅಂತ್ಯದ ವೇಳೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ನಾವು ಬೆಂಗಳೂರಿನ ಕೀರ್ತಿಯನ್ನು ಹೆಚ್ಚಿಸಿ ಭಾರತದ ಅತ್ಯುತ್ತಮ ನಗರವಾಗಿ ಮರುಸ್ಥಾಪಿಸುತ್ತೇವೆ ಎಂದು ಶಿವಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡುರುವ ಕೆಟಿಆರ್​, ಡಿಯರ್ ಡಿಕೆ ಶಿವಕುಮಾರ್ ಅಣ್ಣ.. ನನಗೆ ಕರ್ನಾಟಕ ರಾಜಕೀಯದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಯಾರು ಗೆಲ್ಲುತ್ತಾರೆ ಎನ್ನುವುದು ತಿಳಿದಿಲ್ಲ. ಆದರೆ, ನಿಮ್ಮ ಚಾಲೆಂಜ್ ಸ್ವೀಕರಿಸುವೆ. ಬೆಂಗಳೂರು, ಹೈದ್ರಾಬಾದ್ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಲಿ.. ಯುವಕರಿಗೆ ಉದ್ಯೋಗ, ಉತ್ತಮ ಸೌಹಾರ್ದ ಸಂಬಂಧ ಏರ್ಪಡಲಿ. ಮೂಲಸೌಕರ್ಯ, IT, BT ಕಡೆ ಗಮನ ಇರಲಿ, ಹಲಾಲ್, ಹಿಜಾಬ್ ಕಡೆ ಗಮನಹರಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಇಲ್ಲಿಂದ ಆರಂಭ : ಈ ಹಿಂದೆ ಬೆಂಗಳೂರಿನ ಉದ್ಯಮಿ ರವೀಶ್ ನರೇಶ್ ಅವರು ಕೋರಮಂಗಲದ ಹೆಚ್​ಎಸ್​ಆರ್​ನಲ್ಲಿ​​ (ಭಾರತದ ಸಿಲಿಕಾನ್ ವ್ಯಾಲಿ) ಸ್ಟಾರ್ಟ್‌ಅಪ್‌ಗಳು ಈಗಾಗಲೇ ಶತಕೋಟಿ ಡಾಲರ್ ತೆರಿಗೆಯನ್ನು ಉತ್ಪಾದಿಸುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನಮ್ಮಲ್ಲಿ ಹದಗೆಟ್ಟ ರಸ್ತೆಗಳು, ಬಹುತೇಕ ದಿನನಿತ್ಯದ ವಿದ್ಯುತ್ ಕಡಿತ, ಕಳಪೆ ಗುಣಮಟ್ಟದ ನೀರು ಸರಬರಾಜು, ಬಳಸಲಾಗದ ಕಾಲುದಾರಿಗಳು ಇವೆ. ಭಾರತದ ಸಿಲಿಕಾನ್ ವ್ಯಾಲಿಗಿಂತ ಅನೇಕ ಗ್ರಾಮೀಣ ಪ್ರದೇಶಗಳು ಈಗ ಉತ್ತಮ ಮೂಲಸೌಕರ್ಯ ಹೊಂದಿವೆ. ಹಾಗೆ ವಿಮಾನ ನಿಲ್ದಾಣಕ್ಕೆ 3 ಗಂಟೆಗಳ ದೂರ ಸಂಚಾರ ದಟ್ಟಣೆಯಲ್ಲೇ ಕ್ರಮಿಸಬೇಕುಎಂದು ಹೇಳಿಕೆ ನೀಡಿದ್ದರು.

  • .@ktrtrs, my friend, I accept your challenge. By the end of 2023, with Congress back in power in Karnataka, we will restore the glory of Bengaluru as India’s best city. https://t.co/HFn8cQIlGS

    — DK Shivakumar (@DKShivakumar) April 4, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಲಂಕಾ ದಿವಾಳಿ, ಪಾಕ್​ನಲ್ಲಿ ರಾಜಕೀಯ ಬಿಕ್ಕಟ್ಟು.. ಪ್ರಧಾನಿ ಭೇಟಿ ಮಾಡಲಿರುವ ಜೈ ಶಂಕರ್​​​​

ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೆ.ಟಿ. ರಾಮರಾವ್, ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಹೈದರಾಬಾದ್‌ಗೆ ಬನ್ನಿ ಎಂದು ಉದ್ಯಮಿಗಳಿಗೆ ಕರೆ ನೀಡಿದ್ದಾರೆ. ನಾವು ಉತ್ತಮ ಭೌತಿಕ ಮೂಲಸೌಕರ್ಯ ಮತ್ತು ಸಮಾನವಾಗಿ ಉತ್ತಮ ಸಾಮಾಜಿಕ ಮೂಲಸೌಕರ್ಯವನ್ನು ಹೊಂದಿದ್ದೇವೆ ಎಂದು ಉಲ್ಲೇಖ ಮಾಡಿದ್ದಾರೆ.

ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾದದ್ದು ಮತ್ತು ನಗರದೊಳಗೆ ಮತ್ತು ಹೊರಗೆ ಹೋಗುವುದು ಸಹ ಸುಲಭವಾಗಿದೆ. ಮುಖ್ಯವಾಗಿ ನಮ್ಮ ಸರ್ಕಾರದ ಗಮನವು 3(3 i Mantra) ಪ್ರಮುಖ ವಿಷಯಗಳ ಆಧಾರದಲ್ಲಿ ಕೆಲಸ ಮಾಡುತ್ತದೆ. ಅದೇನೆಂದರೆ ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ ಎಂದಿದ್ದಾರೆ.

ಅಶ್ವತ್ಥ್​ ನಾರಾಯಣ್​ ಕಿಡಿ : ಇನ್ನು ಕೆಟಿಆರ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅಶ್ವತ್ಥ್‌ ನಾರಾಯಣ್, ಟ್ವೀಟ್​ ಅನ್ನು ಖಂಡಿಸಿದ್ದಾರೆ. ಟ್ವೀಟ್ ಉತ್ತಮ ಅಭಿರುಚಿಯಲ್ಲಿ ಇರಲಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಈ ವರ್ತನೆ ಇರಬಾರದು. ಒಬ್ಬರಿಗೊಬ್ಬರು ಕಾಲು ಎಳೆಯುವ ಪ್ರಯತ್ನ ಯಾವ ಸರ್ಕಾರಕ್ಕೂ ಸರಿ ಹೋಗುವುದಿಲ್ಲ. ನಾವು ಭಾರತೀಯರು, ನಾವು ಇಡೀ ಪ್ರಪಂಚದೊಂದಿಗೆ ಸ್ಪರ್ಧಿಸಬೇಕಾಗಿದೆ ಎಂದು ಹೇಳಿದ್ದಾರೆ.

ಡಿಕೆಶಿ ಹೇಳಿಕೆಗೂ ಆಕ್ರೋಶ ಹೊರ ಹಾಕಿ, ಅವರು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ. ಅವರಿಗೆ ಯಾವ ರೀತಿಯ ವಿಶ್ವಾಸಾರ್ಹತೆ ಇದೆ? ಅವರು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ. ವಿಮೋಚನೆ ಎಂದರೇನು ಎಂದು ಅವರಿಗೆ ತಿಳಿದಿಲ್ಲ. ಅವರು ಯಾವುದೇ ಉತ್ತಮ ಭವಿಷ್ಯವನ್ನು ನೀಡಲು ಸಾಧ್ಯವಿಲ್ಲ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

Last Updated : Apr 4, 2022, 4:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.