ನವದೆಹಲಿ: ಭಾನುವಾರ ಇಹಲೋಕ ತ್ಯಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ರಾಜ್ಯಸಭೆ ಅಧಿವೇಶನದಲ್ಲಿ ಮೌನಾಚರಣೆ ಮೂಲಕ ಸದಸ್ಯರು ನಮನ ಸಲ್ಲಿಸಿದರು.
ಇಂದು ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಮೊದಲು ಖ್ಯಾತ ಗಾಯಕಿಗೆ ನಮನ ಸಲ್ಲಿಸಲಾಯಿತು. ಬಳಿಕ ಅವರಿಗೆ ಗೌರವ ನೀಡಲು ಸದಸವನ್ನು 1 ಗಂಟೆಯ ಕಾಲ ಮುಂದೂಡಿದ್ದೇವೆ ಎಂದು ರಾಜ್ಯಸಭೆ ಚೇರ್ಮನ್ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಗಾಯಕಿ ನಿಧನಕ್ಕೆ ಇಡೀ ದೇಶಕ್ಕೆ ಕಂಬನಿ ಮಿಡಿದಿದ್ದು, ಈಗಾಗಲೇ ದೇಶದಲ್ಲಿ ಎರಡು ದಿನ ಶೋಕಾಚರಣೆ ಕೂಡ ಘೋಷಣೆ ಮಾಡಲಾಗಿದೆ. ಹಾಗೆಯೇ ಇಂದು ಬಾಂಬೆ ಹೈಕೋರ್ಟ್ ಮತ್ತು ಸೆಷೆನ್ಸ್ ಕೋರ್ಟ್ಗಳು ರಜೆ ಘೋಷಿಸಿ ಗೌರವ ನಮನ ಸಲ್ಲಿಸಿವೆ.
(ಇದನ್ನು ಓದಿ: ಕಾಶಿಯಲ್ಲಿ ಗಾನಕೋಗಿಲೆ ಲತಾ ಮಂಗೇಶ್ಕರ್ಗೆ ದೀಪ ನಮನ)