ನವದೆಹಲಿ: ಕೇಂದ್ರ ಸರ್ಕಾರ ಈವರೆಗೆ 21 ಕೋಟಿ ಡೋಸ್ಗೂ ಹೆಚ್ಚು ಕೋವಿಡ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಭಾರತ ಸರ್ಕಾರವು ಇಲ್ಲಿಯವರೆಗೆ ಉಚಿತವಾಗಿ ಮತ್ತು ರಾಜ್ಯಗಳ ಖರೀದಿ ಮೂಲಕ 21,07,31,130 ಡೋಸ್ ಅನ್ನು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವಿತರಿಸಿದ ಡೋಸ್ಗಳಲ್ಲಿ 19,09,60,575 ಡೋಸ್ಗಳು ಬಳಕೆಯಾಗಿವೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಕೋವಿಡ್ ರೋಗಿಗಳು ಮತ್ತು ಸಂಬಂಧಿಗಳಿಗೆ ಸಂಕಲ್ಪ ಸೇವಾ ಪ್ರತಿಷ್ಠಾನದ ಸೇವೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇನ್ನೂ ಸುಮಾರು 2 ಕೋಟಿ (1,97,70,555) ಕೋವಿಡ್ ಲಸಿಕೆ ಡೋಸ್ಗಳಿವೆ ಎಂದು ಮಾಹಿತಿ ನೀಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದಲ್ಲದೇ ಮುಂದಿನ ಮೂರು ದಿನಗಳಲ್ಲಿ ಸುಮಾರು 26 ಲಕ್ಷ ಕೋವಿಡ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.