ಜಲ್ಪೈಗುರಿ (ಪಶ್ಚಿಮ ಬಂಗಾಳ): ಕೇಂದ್ರ ಪಡೆಗಳನ್ನು ಕರೆತಂದು ರಾಜ್ಯ ಕೇಡರ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೇಂದ್ರವು ರಾಜ್ಯ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳವನ್ನು 'ಗಲಭೆ ಪೀಡಿತ' ಗುಜರಾತ್ ಆಗಿ ಪರಿವರ್ತಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
'ಕೇಂದ್ರ ಪಡೆಗಳನ್ನು ಕರೆತಂದು ರಾಜ್ಯ ಕೇಡರ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಅವರು ನಮ್ಮನ್ನು ಹೆದರಿಸಬಹುದು ಎಂದು ಭಾವಿಸಿದರೆ ಅವರದ್ದು ತಪ್ಪು ಕಲ್ಪನೆಯಾಗಲಿದೆ. ನಡ್ಡಾ ಅವರ ಬೆಂಗಾವಲು ವಾಹನಕ್ಕೆ ನಾವು ಹಾನಿ ಮಾಡಿಲ್ಲ ಎಂದು ಮಮತಾ ಇದೇ ವೇಳೆ ಮತ್ತೊಮ್ಮೆ ಸ್ಪಷ್ಟಪಡಿಸಿದರು.
'ಅವನ ಬೆಂಗಾವಲಿನೊಂದಿಗೆ ಅನೇಕ ಕಾರುಗಳು ಏಕೆ ಬಂದವು? ಶಿಕ್ಷೆಗೊಳಗಾದ ಅಪರಾಧಿಗಳು ಅವರೊಂದಿಗೆ ಏಕೆ ಬಂದಿದ್ದರು? ಇನ್ನು ಕಳೆದ ಬಾರಿ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸ ಮಾಡಿದ್ದ ದುಷ್ಕರ್ಮಿಗಳೂ ಅವರೊಂದಿಗೆ ಇದ್ದರು. ಅಂತಹ ಗೂಂಡಾಗಳು ಮುಕ್ತವಾಗಿ ತಿರುಗಾಡುವುದನ್ನು ನೋಡಿದಾಗ ಜನರು ಕೋಪಗೊಳ್ಳುತ್ತಾರೆ. ಸದ್ಯ ಬಂಗಾಳದಲ್ಲಿ ರಾಜ್ಯಪಾಲರ ಆಡಳಿತ ನಿಯಮ ಹೇರಲು ನಾನು ಮುಂದಾಗುತ್ತಿದ್ದೇನೆ' ಎಂದು ಅವರು ಹೇಳಿದರು.
ರಾಷ್ಟ್ರಗೀತೆ ಬದಲಾಯಿಸುವ ಕುರಿತು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಇತ್ತೀಚೆಗೆ ಪ್ರಧಾನಮಂತ್ರಿಗಳಿಗೆ ಬರೆದ ಪತ್ರವೊಂದನ್ನು ಉಲ್ಲೇಖಿಸಿದ ಅವರು, ಇಂತಹ 'ತಪ್ಪು ಆಲೋಚನೆ'ಯೊಂದಿಗೆ ಮುಂದೆ ಹೋದರೆ ರಾಜ್ಯದ ಜನರು ಪಕ್ಷಕ್ಕೆ ಸೂಕ್ತವಾದ ಉತ್ತರವನ್ನು ನೀಡುತ್ತಾರೆ' ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ನಿರಾಶ್ರಿತರ ವಸಾಹತುಗಳನ್ನು ಗುರುತಿಸಲಾಗಿದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ, ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಬ್ಯಾನರ್ಜಿ ಹೇಳಿದರು.