ನವದೆಹಲಿ: ಕೇಂದ್ರವು ಸೋಮವಾರ ಗೆಜೆಟ್ ಅಧಿಸೂಚನೆಯ ಮೂಲಕ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ತಿದ್ದುಪಡಿ ಮಾಡಿದೆ. ರಾಜ್ಯಗಳ ವಿಧಾನಸಭೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ 15 ಹೆಚ್ಚುವರಿ ದಿನಗಳವರೆಗೆ ಅವುಗಳ ಮಾರಾಟ ನಡೆಸಲು ಅವಕಾಶ ನೀಡಿದೆ.
ಈ ಮೊದಲು ತಿದ್ದುಪಡಿಯಲ್ಲಿ, ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ ಕೇಂದ್ರವು 30 ದಿನಗಳ ಹೆಚ್ಚುವರಿ ಅವಧಿವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಚುನಾವಣಾ ಬಾಂಡ್ ತಿದ್ದುಪಡಿ ಯೋಜನೆ 2022ರ ಅನುಸಾರ, ಚುನಾವಣೆ ಹೊಂದಿರುವ ರಾಜ್ಯಗಳಲ್ಲಿ ಬಾಂಡ್ ಮಾರಾಟಕ್ಕೆ ಹೆಚ್ಚುವರಿ 15 ದಿನಗಳ ಅವಧಿಯನ್ನು ಅನುಮೋದಿಸಲಾಗಿದೆ.
ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗೆ ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ ಚುನಾವಣಾ ಬಾಂಡ್ ಮಾರಾಟಕ್ಕೆ ಹೆಚ್ಚುವರಿಯಾಗಿ 15 ದಿನಗಳ ಸಮಯವನ್ನು ನಿರ್ದಿಷ್ಟಪಡಿಸಲಾಗಿದೆ ಎಂದು ಗೆಜೆಟ್ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಸರ್ಕಾರದ ನಿಯಮ ಅನುಸಾರ ಈ ಬಾಂಡ್ಗಳನ್ನು ವರ್ಷದಲ್ಲಿ ನಾಲ್ಕು ಬಾರಿ ಮಾರಾಟ ಮಾಡಲಾಗುವುದು. ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ನಲ್ಲಿ 10 ದಿನಗಳವರೆಗೆ ಮಾರಾಟ ಮಾಡಲಾಗುತ್ತದೆ. ಈ ಚುನಾವಣಾ ಬಾಂಡ್ಗಳು ದಾನಿಗಳಿಂದ ಹಣವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಈ ವೇಳೆ ಅವರ ಗುರುತನ್ನು ಅನಾಮಧೇಯವಾಗಿ ಇರಿಸಲಾಗುವುದು. ಅವುಗಳನ್ನು ಸಾವಿರ, 10 ಸಾವಿರ, ಒಂದು ಲಕ್ಷ, 10 ಲಕ್ಷ ಮತ್ತು 1 ಕೋಟಿಗೆ ದ್ವಿಗುಣಗೊಳಿಸಿ ಮಾರಾಟ ಮಾಡಬಹುದು.
ಇದನ್ನೂ ಓದಿ: 17ವರ್ಷ ಮೇಲ್ಪಟ್ಟವರಿಗೆ ಚುನಾವಣಾ ಆಯೋಗದಿಂದ ಗುಡ್ ನ್ಯೂಸ್