ETV Bharat / bharat

6 ವರ್ಷದ ಹಿಂದೆ ಕಾಪ್ಟರ್‌ ಪತನವಾದ್ರೂ ರಾವತ್‌ 'ಮೃತ್ಯುಂಜಯ'.. ಈಗ ವಿಧಿಗೇ ಗೆಲುವಾಯ್ತು.. - ಹೆಲಿಕಾಪ್ಟರ್​ನಿಂದ ಹಾರಿ ಜೀವ ಉಳಿಸಿಕೊಂಡಿದ್ದ ರಾವತ್​

ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಭಾರತೀಯ ಮೂರು ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್​) ಜನರಲ್​ ಬಿಪಿನ್​ ರಾವತ್​​ ಈ ಹಿಂದೆ ಇದೇ ತೆರನಾದ ಅವಘಡದಲ್ಲಿ ಬದುಕುಳಿದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ..

bipin rawat
ಈಗ ವಿಧಿಗೇ ಗೆಲುವಾಯ್ತು..
author img

By

Published : Dec 8, 2021, 8:06 PM IST

Updated : Dec 8, 2021, 8:31 PM IST

ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಭಾರತೀಯ ಮೂರು ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್​) ಜನರಲ್​ ಬಿಪಿನ್​ ರಾವತ್​​ ಈ ಹಿಂದೆ ಇದೇ ತೆರನಾದ ಕಾಪ್ಟರ್‌ ಪತನವಾದರೂ ಬದುಕುಳಿದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

2015ರಲ್ಲಿ ಬಿಪಿನ್​ ರಾವತ್​ ಅವರು ಲೆಫ್ಟಿನೆಂಟ್​ ಜನರಲ್​ ಆಗಿದ್ದ ಅವಧಿಯಲ್ಲಿ ಚಾಪರ್​ ಹೆಲಿಕಾಪ್ಟರ್​ನಲ್ಲಿ ನಾಗಾಲ್ಯಾಂಡ್​ನ ದಿಮಾಪುರ್​ ಜಿಲ್ಲೆಯ ರಬ್ಗಾಪಹರ್​ ಹೆಲಿಪ್ಯಾಡ್​ನಿಂದ ಪ್ರಯಾಣ ಬೆಳೆಸಿದ್ದರು. ಈ ವೇಳೆ ಹೆಲಿಕಾಪ್ಟರ್​ ಹಾರಾಟ ಶುರು ಮಾಡಿದ ಕೆಲವೇ ಸೆಕೆಂಡುಗಳಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿತ್ತು.

ಸೇನಾ ಸಮವಸ್ತ್ರದಲ್ಲಿ ಬಿಪಿನ್​ ರಾವತ್​
ಸೇನಾ ಸಮವಸ್ತ್ರದಲ್ಲಿ ಬಿಪಿನ್​ ರಾವತ್​

ಈ ವೇಳೆ ಹೆಲಿಕಾಪ್ಟರ್​ನಲ್ಲಿದ್ದ ಬಿಪಿನ್​ ರಾವತ್​ ಮತ್ತು ಮೂವರು ಸೇನಾ ಸಿಬ್ಬಂದಿ ಹೆಲಿಕಾಪ್ಟರ್​ ಭೂಮಿಗೆ ಅಪ್ಪಳಿಸುವ ಮುನ್ನವೇ 20 ಅಡಿ ಎತ್ತರದಿಂದ ಹಾರಿ ಗಾಯಗೊಂಡರೂ ಪ್ರಾಣ ಉಳಿಸಿಕೊಂಡಿದ್ದರು.

ಇದನ್ನೂ ಓದಿ: ಭಾರತೀಯ ಸೇನಾಪಡೆಯಲ್ಲಿ ಹೊಸ ಅಧ್ಯಾಯ ಬರೆದ ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್

ಇದೀಗ ತಮಿಳುನಾಡಿನಲ್ಲಿ ನಡೆದ ದುರಂತದಲ್ಲಿ ಇದೇ ಚಾಪರ್​ ಹೆಲಿಕಾಪ್ಟರ್​ನಲ್ಲಿ ತೆರಳುತ್ತಿದ್ದ ಬಿಪಿನ್​ ರಾವತ್​ ಅವರು ದುರಂತ ಅಂತ್ಯ ಕಂಡಿದ್ದಾರೆ.

ಬಿಪಿನ್​ ರಾವತ್​ರ ಸಾಹಸಗಳು

  • ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್​ ರಾವತ್​ ಅವರು ಈಶಾನ್ಯ ಭಾಗದಲ್ಲಿ ಉಂಟಾಗಿದ್ದ ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದರು.
  • ತಂಟೆಕೋರ ಚೀನಾ ಸೇನೆ ಪದೇಪದೆ ಗಡಿ ದಾಟಿ ಬಂದು ಉಪಟಳ ಮೆರೆದಾಗ ತಕ್ಕ ಪ್ರತ್ಯುತ್ತರ ನೀಡಿ ಚೀನಾಗೆ ಬುದ್ಧಿ ಕಲಿಸಿದ್ದರು.
  • 2015ರಲ್ಲಿ ಮ್ಯಾನ್ಮಾರ್​ನಲ್ಲಿ ನಡೆದ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು ಬಿಪಿನ್‌ ರಾವತ್.
  • 2016ರಲ್ಲಿ ಉರಿ ಬೇಸ್​ ಕ್ಯಾಂಪ್​ ಮೇಲೆ ಭಯೋತ್ಪಾದಕ ದಾಳಿಯ ನಂತರ ರೂಪಿಸಿದ ಸರ್ಜಿಕಲ್​ ಸ್ಟ್ರೈಕ್​ಗಳ ಯೋಜನೆಯ ಭಾಗವಾಗಿದ್ದರು.
  • ಪಾಕಿಸ್ತಾನದ ಪ್ರದೇಶಗಳ ಮೇಲೆ ಭಾರತದ ಪಡೆಗಳು ನುಗ್ಗಿ ದಾಳಿ ನಡೆಸಿದಾಗ ರಾವತ್​ ನವದೆಹಲಿಯ ಸೌತ್​ ಬ್ಲಾಕ್​ನಿಂದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದರು.

Last Updated : Dec 8, 2021, 8:31 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.