ಪಾಟ್ನಾ: ಬಿಹಾರದಲ್ಲಿ ಸಿಬಿಐ ತಂಡವು ಅನೇಕ ಆರ್‌ಜೆಡಿ ನಾಯಕರ ನೆಲೆಗಳ ಮೇಲೆ ದಾಳಿ ನಡೆಸಿತು. ಬಿಹಾರದಲ್ಲಿ ಮಹಾಮೈತ್ರಿಕೂಟ ಸರ್ಕಾರ ರಚನೆಯಾದ ನಂತರ ಕೇಂದ್ರ ಸರ್ಕಾರ ಸೇಡಿನ ಮನೋಭಾವದಿಂದ ಕ್ರಮ ಕೈಗೊಳ್ಳುತ್ತಿದೆ ಎಂದು ಆರ್‌ಜೆಡಿ ಮುಖಂಡರು ಆರೋಪಿಸಿದ್ದಾರೆ. ಆದರೆ, ಸಿಬಿಐನ ವಿಶ್ವಾಸಾರ್ಹ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಈ ನಾಯಕರ ಮನೆಯಲ್ಲಿ ಸಾಕಷ್ಟು ಆಸ್ತಿ ಪತ್ತೆಯಾಗಿದೆಯಂತೆ. ಬೇನಾಮಿ ಪತ್ರಗಳು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆಯಂತೆ. ಸದ್ಯ ಈ ಬಗ್ಗೆ ಸಿಬಿಐನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
200ಕ್ಕೂ ಹೆಚ್ಚು ಭೂ ದಾಖಲೆ ವಶ: ಮೂಲಗಳ ಪ್ರಕಾರ ಆರ್‌ಜೆಡಿ ಮುಖಂಡರ ಮನೆಗಳ ಮೇಲೆ ನಡೆಸಿದ ದಾಳಿಯಲ್ಲಿ 200ಕ್ಕೂ ಹೆಚ್ಚು ಭೂ ದಾಖಲೆಗಳು ಪತ್ತೆಯಾಗಿವೆ. ಇದಲ್ಲದೇ 20 ಕೆಜಿಗೂ ಹೆಚ್ಚು ಚಿನ್ನಾಭರಣ ಪತ್ತೆಯಾಗಿದೆ. ಅಷ್ಟೇ ಅಲ್ಲ, ದೆಹಲಿಯ ಗುರ್‌ಗಾಂವ್‌ನಲ್ಲಿ ನಿರ್ಮಾಣವಾಗುತ್ತಿರುವ ಮಾಲ್‌ನ ಕಾಗದವನ್ನು ಆರ್‌ಜೆಡಿಯ ಎಂಎಲ್‌ಸಿ ಸುನೀಲ್ ಕುಮಾರ್ ಸಿಂಗ್ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ನಗದು ಕೂಡ ಪತ್ತೆಯಾಗಿದೆ.
ಆರ್‌ಜೆಡಿ ನಾಯಕರ ಮೇಲೆ ಸಿಬಿಐ ದಾಳಿ: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ತಂಡವು ಪಾಟ್ನಾ, ಕತಿಹಾರ್ ಮತ್ತು ಮಧುಬನಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತು. ಆರ್‌ಜೆಡಿ ಎಂಎಲ್‌ಸಿ ಸುನೀಲ್ ಸಿಂಗ್, ಆರ್‌ಜೆಡಿ ಮಾಜಿ ಎಂಎಲ್‌ಸಿ ಸುಬೋಧ್ ರಾಯ್, ರಾಜ್ಯಸಭಾ ಸಂಸದರಾದ ಅಶ್ಫಾಕ್ ಕರೀಂ ಮತ್ತು ಫಯಾಜ್ ಅಹ್ಮದ್ ಸೇರಿದಂತೆ ಇತರ ಆರ್‌ಜೆಡಿ ನಾಯಕರ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಇದರೊಂದಿಗೆ ಗುರುಗ್ರಾಮದ ಸೆಕ್ಟರ್ 71ರಲ್ಲಿರುವ ಅರ್ಬನ್ ಕ್ಯೂಬಾಸ್ ಮಾಲ್ ಮೇಲೂ ಸಿಬಿಐ ಶೋಧ ನಡೆಸಿದೆ.
ಸಂಸದ ನಿವಾಸದ ಮೇಲೆ ಸಿಬಿಐ ದಾಳಿ: ಮಧುಬನಿಯಲ್ಲಿ ಬುಧವಾರ ಬೆಳಗ್ಗೆ ಆರ್‌ಜೆಡಿಯ ರಾಜ್ಯಸಭಾ ಸಂಸದ ಡಾ.ಫಯಾಜ್ ಅಹಮದ್ ನಿವಾಸದ ಮೇಲೆ ಸಿಬಿಐ ತಂಡ ದಾಳಿ ನಡೆಸಿತು. ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬುಧವಾರ ಮುಂಜಾನೆ 4 ಗಂಟೆಗೆ ಸಿಬಿಐ ತಂಡ ಆಗಮಿಸಿತ್ತು. ದಾಳಿ ವೇಳೆ ಹಲವು ಪ್ರಮುಖ ದಾಖಲೆಗಳು ಹಾಗೂ ಸಾಕಷ್ಟು ಹಣ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಈ ಬಗ್ಗೆ ಸಿಬಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಅರ್ಬನ್ ಕ್ಯೂಬಾಸ್ ಮಾಲ್ ಮೇಲೆ ಸಿಬಿಐ ರೇಡ್: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ರ ಗುರುಗ್ರಾಮ್‌ನಲ್ಲಿರುವ ಅರ್ಬನ್ ಕ್ಯೂಬ್ಸ್ ಮಾಲ್‌ನ ಮೇಲೂ ಸಿಬಿಐ ಬುಧವಾರ ದಾಳಿ ನಡೆಸಿದೆ. ಮಾಹಿತಿ ಪ್ರಕಾರ, ತೇಜಸ್ವಿ ಯಾದವ್ ಈ ಮಾಲ್‌ನಲ್ಲಿ ಪಾಲು ಹೊಂದಿದ್ದಾರೆ ಎನ್ನಲಾಗ್ತಿದೆ. ಉದ್ಯೋಗದ ಬದಲು ಭೂಮಿ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಲಾಲು ಯಾದವ್ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಉದ್ಯೋಗದ ಬದಲು ಹಲವೆಡೆ ಭೂಮಿ ಬರೆದುಕೊಟ್ಟಿದ್ದರು ಎಂಬ ಆರೋಪವಿದೆ. ತೇಜಸ್ವಿ ಯಾದವ್ ಹೆಸರಿಗೆ ಹಲವು ಜಮೀನುಗಳನ್ನು ಬರೆಯಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಆಗ ತೇಜಸ್ವಿ ಅಪ್ರಾಪ್ತ ವಯಸ್ಸಿನವನಾಗಿದ್ದನು ಎಂದು ತಿಳಿದು ಬಂದಿದೆ.
ಆರ್‌ಜೆಡಿ ಎಂಎಲ್‌ಸಿ ಸುನೀಲ್ ಕುಮಾರ್ ಮನೆ ಮೇಲೆ ದಾಳಿ: ಆರ್‌ಜೆಡಿ ನಾಯಕ ಸುನೀಲ್ ಕುಮಾರ್ ಸಿಂಗ್ ಅವರ ಮನೆಯ ಮೇಲೂ ಸಿಬಿಐ ದಾಳಿ ನಡೆಸಿದೆ. ಸುನೀಲ್ ಕುಮಾರ್ ಸಿಂಗ್ ಪಕ್ಷದ ಖಜಾಂಚಿಯೂ ಹೌದು. ಸುನೀಲ್ ಕುಮಾರ್ ಸಿಂಗ್ ಕೂಡ ಲಾಲು ಕುಟುಂಬದ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಸುನಿಲ್ ಸಿಂಗ್ ವಾಸವಿರುವ ರೆಡ್ ಜೆಡಿ ಮಹಿಳಾ ಕಾಲೇಜು ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಸಿಬಿಐ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಕೊಂಡಿದೆ.
ಎಂಎಲ್‌ಸಿ ಮನೆಯಿಂದ ನಗದು ಮತ್ತು ಭೂ ದಾಖಲೆ ವಶ: ಮನೆಯಲ್ಲಿ ಸಿಬಿಐ ಶೋಧ ನಡೆಸಿದಾಗ ಕೆಲ ಭೂ ದಾಖಲೆ ಸೇರಿದಂತೆ ಕೇವಲ 2,59,640 ರೂಪಾಯಿ ನಗದು ಸಿಕ್ಕಿದೆ. ಸುಮಾರು 13 ಗಂಟೆಗಳ ಕಾಲ ತಂಡ ಶೋಧ ನಡೆಸಿತು. ರಾಜ್ಯದಲ್ಲಿ ಮಹಾಮೈತ್ರಿಕೂಟ ಸರ್ಕಾರ ರಚನೆಯಾದಾಗಿನಿಂದ ಬಿಜೆಪಿಗೆ ಈ ರೀತಿ ಮಾಡುತ್ತಿದೆ ಎಂದು ಸುನೀಲ್ ಸಿಂಗ್ ಹೇಳಿದ್ದಾರೆ.
ಓದಿ: ಅಕ್ರಮ ಗಣಿಗಾರಿಕೆ ಪ್ರಕರಣ.. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆಪ್ತ ಬಂಧನ