ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಆರೋಪಿ ಅಫ್ತಾಬ್‌ನ ಧ್ವನಿ ಮಾದರಿಯನ್ನು ಇಂದು ಸಿಬಿಐನ ಸಿಎಫ್‌ಎಸ್‌ಎಲ್ ತಂಡ ಸಂಗ್ರಹಿಸಿದೆ. ಇದಕ್ಕೂ ಮುನ್ನ ಡಿಸೆಂಬರ್ 23ರಂದು ಸಾಕೇತ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಧ್ವನಿ ಮಾದರಿ ತೆಗೆದುಕೊಳ್ಳಲು ಪೊಲೀಸರು ಅನುಮತಿ ಕೋರಿದ್ದು, ನ್ಯಾಯಾಲಯ ಒಪ್ಪಿಗೆ ನೀಡಿತ್ತು. ಜೊತೆಗೆ, ಆರೋಪಿಯ ನ್ಯಾಯಾಂಗ ಬಂಧನವನ್ನು ಜನವರಿ 6 ರವರೆಗೆ ವಿಸ್ತರಿಸಿತ್ತು.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ದೆಹಲಿ ಪೊಲೀಸರ ತಂಡವೊಂದು ತಿಹಾರ್ ಜೈಲಿನಿಂದ ಅಫ್ತಾಬ್ನನ್ನು ಸಿಬಿಐ ಕಚೇರಿಗೆ ಕರೆತಂದಿದೆ. ಬಳಿಕ ಆತನ ಧ್ವನಿ ಮಾದರಿಗಳನ್ನು ಐಎಫ್‌ಎಸ್‌ಎಲ್ ಲ್ಯಾಬ್‌ನಲ್ಲಿ ಸುಮಾರು 3 ಗಂಟೆಗಳ ಕಾಲ ದಾಖಲಿಸಿಕೊಳ್ಳಲಾಯಿತು. ಪೊಲೀಸ್ ಮೂಲಗಳ ಪ್ರಕಾರ, ಅಫ್ತಾಬ್‌ನ ಮೊಬೈಲ್‌ನಿಂದ ಸಂದೇಶಗಳು ಮತ್ತು ರೆಕಾರ್ಡಿಂಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಶ್ರದ್ಧಾರೊಂದಿಗೆ ಜಗಳ ಮತ್ತು ಆಕೆಯ ಸ್ನೇಹಿತರೊಂದಿಗಿನ ಸಂಭಾಷಣೆಯ ಸಂದೇಶಗಳಿವೆ.
ಇಂದು ಸಂಗ್ರಹಿಸಿದ ಧ್ವನಿ ಮಾದರಿಯ ಹೊಂದಾಣಿಕೆಯನ್ನು ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿ: ಶ್ರೀನಗರ: ಯುವತಿ ಮೇಲೆ ಆ್ಯಸಿಡ್ ಎರಚಿದ ಆರೋಪಿಗಳ ಹೇಳಿಕೆ ದಾಖಲು