ETV Bharat / bharat

ನಿಷೇಧ ವಲಯಕ್ಕೆ ನುಗ್ಗಿದ ಬೈಕ್​ಗೆ ಕಾರು ಡಿಕ್ಕಿ: ಹೈದರಾಬಾದ್‌ನಲ್ಲಿ ಟೆಕ್ಕಿ ಸಾವು, ಇಬ್ಬರಿಗೆ ಗಾಯ

ದಾರಿ ತಪ್ಪಿದ ಮೂವರು ಯುವಕರು ಬೈಕ್ ಚಾಲನೆ ನಿರ್ಬಂಧಿಸಿದ ರಸ್ತೆಯಲ್ಲಿ ಸಾಗಿ ಅಪಘಾತಕ್ಕೀಡಾಗಿದ್ದಾರೆ. ಅಪಘಾತದಲ್ಲಿ ಓರ್ವ ಸಾಫ್ಟವೇರ್ ಎಂಜಿನಿಯರ್ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

author img

By

Published : May 15, 2023, 12:22 PM IST

Techie dies in accident in Hyderabad
Techie dies in accident in Hyderabad

ಹೈದರಾಬಾದ್ : ದಾರಿ ತಪ್ಪಿದ ಕಾರಣದಿಂದ ಗೂಗಲ್ ಮ್ಯಾಪ್‌ನಲ್ಲಿ ತಾವು ಹೋಗಬೇಕಾದ ಸ್ಥಳವನ್ನು ಹುಡುಕಲು ಪ್ರಯತ್ನಿಸುತ್ತಿರುವಾಗ ರಸ್ತೆ ಅಪಘಾತ ಸಂಭವಿಸಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅವರ ಇಬ್ಬರು ಸ್ನೇಹಿತರು ಗಾಯಗೊಂಡಿದ್ದಾರೆ. ಈ ದುರಂತ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಪಿವಿಎನ್‌ಆರ್ ಎಕ್ಸ್‌ಪ್ರೆಸ್‌ವೇಯಲ್ಲಿ ತಮ್ಮ ಮೋಟರ್‌ಬೈಕ್‌ನಲ್ಲಿ ಸಾಗುತ್ತಿದ್ದ ಮೂವರಿಗೆ ತಾವು ತಪ್ಪು ದಿಕ್ಕಿನಲ್ಲಿ ಹೋಗುತ್ತಿರುವುದು ಅರಿವಾಗಿದೆ. ಆಗ ಗೂಗಲ್ ಮ್ಯಾಪ್​​ನಲ್ಲಿ ಸರಿಯಾದ ಮಾರ್ಗ ಹುಡುಕುತ್ತಿರುವಾಗಲೇ ಅಪಘಾತ ನಡೆದಿದೆ.

ಶನಿವಾರ ಮತ್ತು ರವಿವಾರದ ಮಧ್ಯದ ರಾತ್ರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಎಂಎಚ್​ವಿಎನ್​ಎಸ್​ ಚರಣ್ (22) ಎಂದು ಗುರುತಿಸಲಾಗಿದೆ. ಪೋಚಾರಮ್​ನಲ್ಲಿನ ಪ್ರಖ್ಯಾತ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಚರಣ್ ತನ್ನ ಇಬ್ಬರು ಸ್ನೇಹಿತರನ್ನು ಹಿಂದೆ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದರು. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯವರಾದ ಚರಣ್ ಹೈದರಾಬಾದ್​ನ ಹೊರವಲಯದಲ್ಲಿ ವಾಸವಾಗಿದ್ದರು. ವೀಕೆಂಡ್​ ಮೋಜು ಮಸ್ತಿಗಾಗಿ 9 ಜನ ಸ್ನೇಹಿತರೊಂದಿಗೆ ಮೂರು ಬೈಕ್​ಗಳಲ್ಲಿ ಹೈದರಾಬಾದ್ ನಗರದೊಳಗೆ ಬಂದಿದ್ದರು.

ಪೊಲೀಸರ ಪ್ರಕಾರ, ಮೂವರು ಸ್ನೇಹಿತರು ಹೊಸ ಸೆಕ್ರೆಟರಿಯೇಟ್ ಮತ್ತು ಇತ್ತೀಚೆಗೆ ಸ್ಥಾಪಿಸಲಾದ ಅಂಬೇಡ್ಕರ್ ಪ್ರತಿಮೆಯನ್ನು ನೋಡಲು ತೆರಳಿದ್ದರು. ಟ್ಯಾಂಕ್ ಬಂಡ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಕೇಬಲ್ ಸೇತುವೆ ನೋಡಲು ನಿರ್ಧರಿಸಿದ್ದರು. ಆದರೆ ನಗರದಲ್ಲಿನ ರಸ್ತೆಗಳ ಪರಿಚಯವಿಲ್ಲದ ಕಾರಣದಿಂದ ಗೂಗಲ್ ಮ್ಯಾಪ್​ನಲ್ಲಿ ರೂಟ್​ ಹುಡುಕಾಡುತ್ತಿದ್ದರು.

ಈ ಸಂದರ್ಭದಲ್ಲಿ ಮೆಹದಿಪಟ್ನಂ ಕಡೆಗೆ ಬೈಕ್ ಚಲಾಯಿಸಿದ ಚರಣ್ ಪಿವಿಎನ್​ಆರ್ ಎಕ್ಸ್​ಪ್ರೆಸ್ ವೇ ಪ್ರವೇಶಿಸಿದ್ದರು. ಆದರೆ ಆ ಮಾರ್ಗದಲ್ಲಿ ಟೂ ವೀಲರ್​ಗಳ ಪ್ರವೇಶ ನಿರ್ಬಂಧಿಸಿರುವುದು ಅವರಿಗೆ ಗೊತ್ತಿರಲಿಲ್ಲ. ಹಾಗೆಯೇ ಎರಡ್ಮೂರು ಕಿಲೋಮೀಟರ್ ಸಾಗಿದ ನಂತರ ತಾವು ತಪ್ಪಾದ ದಿಕ್ಕಿನಲ್ಲಿ ಹೋಗುತ್ತಿರುವುದು ಅವರ ಅರಿವಿಗೆ ಬಂದಿದೆ. ಪಿಲ್ಲರ್ ಸಂಖ್ಯೆ 82ರ ಬಳಿ ಗಾಡಿ ನಿಧಾನಗೊಳಿಸಿದ ಚರಣ್ ರಸ್ತೆಯಿಂದ ಬದಿಗೆ ಹೋಗಲು ಯತ್ನಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ.

ಚರಣ್‌ಗೆ ಗಂಭೀರ ಗಾಯಗಳಾಗಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಭಾನುವಾರ ನಿಧನರಾದರು. ಆತನ ಇತರ ಇಬ್ಬರು ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಗರದ ಹೊರವಲಯದಲ್ಲಿರುವ ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕವನ್ನು ಒದಗಿಸಲು 11.6 ಕಿಮೀ ಉದ್ದದ PVNR ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಭಾರೀ ವಾಹನಗಳಿಗೆ ಪ್ರವೇಶವಿಲ್ಲ.

ಕಾಕಿನಾಡ ಬಳಿ ಅಪಘಾತ - ಏಳು ಮಹಿಳೆಯರ ಸಾವು: ಕಾಕಿನಾಡ ಜಿಲ್ಲೆಯಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಹಿಳೆಯರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಕಾಕಿನಾಡ ಜಿಲ್ಲೆಯ ತಲ್ಲರೇವು ಎಂಬಲ್ಲಿ ಬೈಪಾಸ್ ರಸ್ತೆಯಲ್ಲಿ ಅಕ್ವಾಕಲ್ಚರ್ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ 14 ಮಹಿಳೆಯರ ತಂಡವಿದ್ದ ಆಟೋ ರಿಕ್ಷಾಕ್ಕೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಇದನ್ನೂ ಒದಿ : ಯೂಟ್ಯೂಬ್ ವೀವ್ಸ್​​ಗಾಗಿ ವಿಮಾನ ಅಪಘಾತ ಮಾಡಿದವನಿಗೆ 20 ವರ್ಷ ಜೈಲು ಶಿಕ್ಷೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.