ಔರಂಗಾಬಾದ್ : ಕೊರೊನಾ ಜನರಲ್ಲಿ ಒಂದಷ್ಟು ಮಾನವೀಯ ಮೌಲ್ಯವನ್ನು ಬೆಳೆಸಿದರೆ, ಮತ್ತೊಂದಷ್ಟು ಅಸಹಾಯಕ ಮಸ್ಥಿತಿಗಳನ್ನು ಸೃಷ್ಠಿಸಿದೆ. ಇದರ ನಡುವೆ ಇಲ್ಲೊಂದು ಪತ್ರ ಹಾಗೂ ವಯಸ್ಸಾದ ಮಹಿಳೆ ಓದುಗರ ಕಣ್ಣಲ್ಲಿ ಕಣ್ಣೀರು ಬರಿಸುತ್ತದೆ.
ಔರಂಗಾಬಾದ್‌ನ ವ್ಯಕ್ತಿಯೋರ್ವ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದು, ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳ ಕುಟುಂಬವನ್ನು ಪೋಷಿಸುವುದು ಅವನಿಗೆ ಕಷ್ಟವಾಗಿದೆಯಂತೆ. ಇದಕ್ಕಾಗಿ ಆತ . "ನನ್ನ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ನೀವು ದಯವಿಟ್ಟು ಅವಳನ್ನು ನೋಡಿಕೊಳ್ಳಿ" ಎಂದು ಪತ್ರವೊಂದನ್ನು ಬರೆದು . ಹೆತ್ತವಳನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದಾನೆ.
ಈ ಹೃದಯ ವಿದ್ರಾವಕ ಘಟನೆ ಮಾತೋಶ್ರಿ ವೃದ್ಧಾಶ್ರಮದಲ್ಲಿ ಜರುಗಿದೆ. ಔರಂಗಾಬಾದ್‌ನ ಪೈಥಾನ್ ರಸ್ತೆಯಲ್ಲಿರುವ 'ಮಾತೋಶ್ರಿ ಓಲ್ಡ್ ಏಜ್ ಹೋಮ್' ನ ವ್ಯವಸ್ಥಾಪಕ ಸಾಗರ್ ಪಾಗೋರ್ ಅವರಿಗೆ ಈ 64 ವರ್ಷದ ವೃದ್ಧೆ ಮನವಿ ಮಾಡಿದ್ದಾಳೆ.
ನಿಯಮಗಳ ಪ್ರಕಾರ, ಸಂಬಂಧಿಕರು ಅಥವಾ ಪೊಲೀಸರ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ. ಈ ಕಾರಣಕ್ಕೆ ವೃದ್ಧೆ ತನ್ನ ಮಗ ಬರೆದ ಪತ್ರದೊಂದಿಗೆ ಪುಂಡಾಲಿಕ್ ನಗರ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಪೊಲೀಸರ ಸಹಾಯದಿಂದ ವೃದ್ಧೆಯನ್ನು ಮಾತೋಶ್ರಿ ವೃದ್ಧಾಶ್ರಮಕ್ಕೆ ದಾಖಲಿಸಲಾಗಿದೆ.
ಕೆಲಸ ಕಳೆದುಕೊಂಡಿದ್ದ ಮಗ:
ಈ ವೃದ್ಧ ತಾಯಿಯ ಏಕೈಕ ಪುತ್ರ ಪುಣೆಯ ನ್ಯಾಯಾಲಯದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದನು. ಕೊರೊನಾದ ಕಾರಣ, ಯಾರಿಗೂ ನ್ಯಾಯಾಲಯಕ್ಕೆ ಪ್ರವೇಶವಿರಲಿಲ್ಲ, ಮತ್ತು ಪುಸ್ತಕ ಮಾರಾಟದ ವ್ಯವಹಾರವನ್ನು ಮುಚ್ಚಲಾಯಿತು. ಆರ್ಥಿಕ ಸಮಸ್ಯೆಗಳ ಜೊತೆಗೆ, ಈ ವೃದ್ಧೆ ಮತ್ತು ಈಕೆಯ ಸೊಸೆ ನಡುವೆ ಜಗಳ ಆರಂಭವಾಗಿದೆ. ಆದ್ದರಿಂದ ಈಕೆ ವೃದ್ಧಾಶ್ರಮಕ್ಕೆ ಹೋಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ.
ಇನ್ನು ಈ ವೃದ್ಧ ತಾಯಿಯ ಜೀವನವು ಹೋರಾಟಗಳಿಂದನೇ ಮುಂದುವರೆದುಕೊಂಡು ಬಂದಿದೆ. ಈಕೆಯು ಮಗ ಚಿಕ್ಕವನಿದ್ದಾಗಲೇ , ಈಕೆಯ ಪತಿ ಮರುಮದುವೆಯಾಗಿ ತನ್ನ ಎರಡನೇ ಹೆಂಡತಿಯೊಂದಿಗೆ ಬೇರೆ ಕಡೆ ತೆರಳಿದ್ದಾನೆ. ನಂತರ ಈಕೆ ಜೀವನ ಸಾಗಿಸಲು ಜನರ ಬಟ್ಟೆಗಳನ್ನು ಹೊಲಿಯಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು. ಈ ಎಲ್ಲಾ ಹೋರಾಟದ ಜೊತೆಗೆ ಒಬ್ಬನೇ ಮಗನನ್ನು ಬೆಳೆಸಿ , ಶಿಕ್ಷಣವನ್ನು ಪೂರ್ಣಗೊಳಿಸಿದಳು ಹಾಗೆ ಆತನಿಗೆ ವಿವಾಹವನ್ನೂ ಮಾಡಿಸಿದಳು.
ಅತ್ತೆ- ಸೊಸೆ ಜಗಳ :
ಮದುವೆಯ ನಂತರ ಸೊಸೆ ಜೊತೆಗೆ ವಾಗ್ವಾದದಿಂದಾಗಿ, ಮಗ ತಾಯಿಯನ್ನು ಪ್ರತ್ಯೇಕವಾಗಿ ಇರಿಸಿದ್ದನು. ಆದರೆ ಕೊರೊನಾ ಕಾರಣ, ಮಗನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಅವನು ತನ್ನ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೆ ಈ ಕಾರ್ಯ ಮಾಡಿದ್ದಾನೆ.
ನನ್ನ ಮಗ ಒಳ್ಳೆಯವ :
ಆಕೆ ನನ್ನ ಕೈಯಲ್ಲಿ ಪತ್ರವೊಂದನ್ನು ವೃದ್ಧಾಶ್ರಮಕ್ಕೆ ತಂದಿದ್ದರೂ ಕೂಡ, ನನ್ನ ಮಗ ಒಳ್ಳೆಯ ಮನುಷ್ಯ. ಅವನ ಸ್ಥಿತಿ ಕೆಟ್ಟದ್ದರಿಂದ ಅವನು ನಿರ್ಧಾರ ತೆಗೆದುಕೊಂಡನು ಎಂದು ಈ ಮಹಾ ತಾಯಿ ಹೇಳುತ್ತಾಳೆ. ಪರಿಸ್ಥಿತಿ ಸುಧಾರಿಸಿದರೆ ಅವನು ನನ್ನನ್ನು ಹಿಂದಕ್ಕೆ ಕರೆದೊಯ್ಯುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾಳೆ.