ETV Bharat / bharat

Online Nomination: ಪಂಚರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆನ್​ಲೈನ್ ನಾಮಿನೇಷನ್​ಗೆ ಅವಕಾಶ - covid effect on five states election

Five state election-2022 ರಾಜ್ಯಗಳ ಚುನಾವಣೆಗೆ ಕೇಂದ್ರ ಚುನಾವನಾ ಆಯೋಗದಿಂದ ಚುನಾವಣೆ ಘೋಷಣೆಯಾಗಿದ್ದು, ಆನ್​ಲೈನ್ ಮೂಲಕ ಅಭ್ಯರ್ಥಿಗಳು ನಾಮಿನೇಷನ್​ ಮಾಡಲು ಅವಕಾಶ ಕಲ್ಪಿಸಲಾಗಿದೆ.

Candidates will be given an option for online nomination: Election Commission
Online Nomination: ಪಂಚರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆನ್​ಲೈನ್ ನಾಮಿನೇಷನ್​ಗೆ ಅವಕಾಶ
author img

By

Published : Jan 8, 2022, 4:19 PM IST

Updated : Jan 8, 2022, 4:43 PM IST

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಬಹುನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ ಮಾಡಿದೆ. ಕೋವಿಡ್​ ಭೀತಿ ಹಿನ್ನೆಲೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆನ್​ಲೈನ್​ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

Roadshows Cancel for Election: ಕೋವಿಡ್ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಇದರ ಜೊತೆಗೆ ಅಭ್ಯರ್ಥಿಗಳು ಜನವರಿ 15ರವರೆಗೆ ಯಾವುದೇ ರೋಡ್‌ಶೋ, ಪಾದಯಾತ್ರೆಗಳು, ಸೈಕಲ್ ಅಥವಾ ಬೈಕ್ ಜಾಥಾಗಳು ಮತ್ತು ಮೆರವಣಿಗೆಗಳನ್ನು ನಡೆಸಬಾರದು ಎಂದು ಚುನಾವಣಾ ಆಯೋಗ ಹೇಳಿದ್ದು, ಜನವರಿ 15ರ ನಂತರ ಪರಿಸ್ಥಿತಿಗಳನ್ನ ಪರಿಶೀಲಿಸಿ, ಹೊಸ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಕಾನೂನು ಮತ್ತು ಸುವ್ಯವಸ್ಥೆ ಮತ್ತು ಇತರ ಪರಿಸ್ಥಿತಿಗಳನ್ನು ಅವಲೋಕಿಸಿ, ಚುನಾವಣೆ ನಡೆಯುವ ಎಲ್ಲಾ ರಾಜ್ಯಗಳಲ್ಲಿ ಸಾಕಷ್ಟು ಸಿಎಪಿಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

ಇದನ್ನೂ ಓದಿ: LIVE UPDATE: ಪಂಚರಾಜ್ಯ ಫೈಟ್.. ಫೆ. 10ರಿಂದ 7 ಹಂತದಲ್ಲಿ ಮತದಾನ, ಮಾರ್ಚ್​ 10ಕ್ಕೆ ರಿಸಲ್ಟ್​ ​

Last Updated : Jan 8, 2022, 4:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.