ನವದೆಹಲಿ: ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಪತ್ರ ಬರೆದಿದ್ದಾರೆ.
ಯಾವುದೇ ಪರೀಕ್ಷಾ ಕೇಂದ್ರದಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾದರೆ ಸರ್ಕಾರ ಮತ್ತು ಸಿಬಿಎಸ್‌ಇ ಮಂಡಳಿಯು ಜವಾಬ್ದಾರರಾಗಿರುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಹಲವಾರು ಮಕ್ಕಳು ಒಂದೆಡೆ ಸೇರುತ್ತಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮಾರಣಾಂತಿಕ ಕಾಯಿಲೆಯ ಭೀತಿಯಡಿಯಲ್ಲಿ ಪರೀಕ್ಷೆಗಳನ್ನು ನೀಡುವುದರಿಂದ ಮಕ್ಕಳಿಗೆ ಅನಗತ್ಯ ಆತಂಕ ಉಂಟಾಗುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮೇ 4ರಿಂದ ಜೂನ್ 11ರವರೆಗೆ ಸಿಬಿಎಸ್‌ಇ 10,12ನೇ ತರಗತಿ ಪರೀಕ್ಷೆ
ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಗಳು ಮೇ 4 ರಿಂದ ಜೂನ್ 7 ರವರೆಗೆ ಮತ್ತು 12 ನೇ ತರಗತಿಯ ಪರೀಕ್ಷೆಗಳು ಮೇ 4 ಮತ್ತು ಜೂನ್ 15 ರ ನಡುವೆ ನಡೆಯಲಿವೆ.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಶೇಕಡಾ 40-50 ರಷ್ಟು ಹೆಚ್ಚಿಸಲಾಗಿದೆ ಎಂದು ಸಿಬಿಎಸ್‌ಇ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ ವೇಳೆಗೆ ಇನ್ನೂ 5 ಕೋವಿಡ್ ಲಸಿಕೆಗಳು ಭಾರತದಲ್ಲಿ ಲಭ್ಯ!