ETV Bharat / bharat

ನಿಮ್ಮ ಮಕ್ಕಳನ್ನು COVID​ನಿಂದ ರಕ್ಷಿಸುವುದು ಹೇಗೆ?

author img

By

Published : Jul 27, 2021, 10:28 AM IST

ಕೋವಿಡ್​ ಮೂರನೇ ಅಲೆ ಶೀಘ್ರದಲ್ಲೇ ಬರಲಿದ್ದು, ಹೆಚ್ಚಾಗಿ ಮಕ್ಕಳಿಗೆ ಬರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ, ನಿಮ್ಮ ಮಕ್ಕಳನ್ನು ಕೋವಿಡ್​ನಿಂದ ರಕ್ಷಿಸುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಮಕ್ಕಳಿಗೆ ಕೋವಿಡ್
ಮಕ್ಕಳಿಗೆ ಕೋವಿಡ್

ಮಕ್ಕಳಿಗೆ ಕೋವಿಡ್​ ಬಾರದಂತೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಅಮೆರಿಕ ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿತ್ತು. ಇದರಲ್ಲಿ, 2019-20 ರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚುಚ್ಚುಮದ್ದು (Influence Shots)ಪಡೆಯುತ್ತಿದ್ದ ಮಕ್ಕಳು ಕೋವಿಡ್​ಗೆ ತುತ್ತಾಗುವ ಸಾಧ್ಯತೆ ಕಡಿಮೆಯಿದೆ ಎಂದು ವರದಿ ಹೇಳಿತ್ತು.

ಭಾರತದ ಮಕ್ಕಳ ವೈದ್ಯರು, ಇನ್ಫ್ಲುಯೆನ್ಸ್​ಗಳನ್ನು ನೀಡುವುದರಿಂದ ಮಕ್ಕಳಿಗೆ ಕೋವಿಡ್​ ಬರುವ ಸಾಧ್ಯತೆ ಕಡಿಮೆಯಿದೆ. ಹಾಗಾಗಿ ನಿಮ್ಮ ಮಕ್ಕಳಿಗೂ ಇನ್ಫ್ಲುಯೆನ್ಸ್​ ಚುಚ್ಚುಮದ್ದನ್ನು ಕೊಡಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಈ ಕುರಿತು ಈ ಟಿವಿ ಭಾರತದ ಸುಖೀಭವ ತಂಡ ಮಕ್ಕಳ ವೈದ್ಯೆ ಡಾ.ಸೊನಾಲಿ ನವಲೆ ಪುರಂದರೆ ಜತೆಗೆ ಮಾತನಾಡಿದೆ.

ಇನ್ಫ್ಲುಯೆನ್ಸ್​ ಚುಚ್ಚುಮದ್ದು​ ಕೋವಿಡ್​ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಬಹಳ ಮುಖ್ಯ ಎಂದು ಡಾ.ಸೊನಾಲಿ ಅಭಿಪ್ರಾಯ ಪಟ್ಟಿದ್ದಾರೆ. ಮಳೆಗಾಲವಾಗಿರುವುದರಿಂದ ಮಕ್ಕಳಿಗೆ ಶೀತ, ಕೆಮ್ಮು, ಜ್ವರ, ಉಸಿರಾಟದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆ, ಮಕ್ಕಳಿಗೆ ಇನ್ಫ್ಲುಯೆನ್ಸ್​ ಚುಚ್ಚುಮದ್ದು ನೀಡುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ವೈರಸ್​ ಬರುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ ಎಂದಿದ್ದಾರೆ.

ಇಂಡಿಯನ್ ಅಕಾಡೆಮಿ ಫಾರ್ ಪೀಡಿಯಾಟ್ರಿಕ್ಸ್ ಸಹ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಇನ್ಫ್ಲುಯೆನ್ಸ್ ಡೀಸ್​ ನೀಡಬೇಕೆಂದು ಶಿಫಾರಸು ಮಾಡಿದೆ. ಸದ್ಯ ಮಾರ್ಕೆಟ್​ನಲ್ಲಿ ಮಕ್ಕಳಿಗೆ ಕೋವಿಡ್​ ಲಸಿಕೆ ಲಭ್ಯವಿಲ್ಲ ಅನ್ನೋದು ಎಲ್ಲರಿಗೂ ತಿಳಿದಿದೆ. ಮಕ್ಕಳಿಗೆ ವ್ಯಾಕ್ಸಿನ್​ ಲಭಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿದ್ದು, ಸೆಪ್ಟೆಂಬರ್- ಅಕ್ಟೋಬರ್​ನಲ್ಲಿ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ.

ವ್ಯಾಕ್ಸಿನೇಷನ್​ ಯಾಕೆ ಮುಖ್ಯ?

ಇನ್ಫ್ಲುಯೆನ್ಸ್​ ಚುಚ್ಚುಮದ್ದು ಕೋವಿಡ್ ವಿರುದ್ಧ ಸ್ವಲ್ಪಮಟ್ಟಿಗೆ ಕೆಲಸ ಮಾಡಬಹುದು. ಆದರೆ, ಕೋವಿಡ್​ ವಿರುದ್ಧ ಸಂಪೂರ್ಣ ಕೆಲಸ ಮಾಡಲ್ಲ ಎಂದು ಸೊನಾಲಿ ಸ್ಪಷ್ಟಪಡಿಸಿದ್ದಾರೆ. ಮಕ್ಕಳಲ್ಲಿ ಕೋವಿಡ್​ ಪರೀಕ್ಷೆ ಮಾಡಲು ಹಾಗೂ ರಾಷ್ಟ್ರದ ಸನ್ನದ್ಧತೆಯನ್ನು ಬಲಪಡಿಸಲು ರಾಷ್ಟ್ರೀಯ ತಜ್ಞರ ಗುಂಪನ್ನು ರಚಿಸಲಾಗಿದೆ.

12 ರಿಂದ 18 ವರ್ಷಗಳ ನಡುವಿನ ಮಕ್ಕಳ ಸಂಖ್ಯೆ ಅಂದಾಜು 14 ಕೋಟಿಯಿದೆ. ಇದಕ್ಕಾಗಿ ನಮಗೆ 25-26 ಕೋಟಿ ಡೋಸ್​ಗಳು ಬೇಕಾಗುತ್ತವೆ. ಈಗಾಗಲೇ ನಮ್ಮಲ್ಲಿ ಭಾರತ್​ ಬಯೋಟೆಕ್​ನ ಕೋವ್ಯಾಕ್ಸಿನ್​ ಜತೆಗೆ ಕ್ಯಾಡಿಲಾ ಕೂಡ ಲಭ್ಯವಿದೆ. ಈ ಎರಡನ್ನೂ ಮಕ್ಕಳ ಮೇಲೆ ಪರೀಕ್ಷಿಸಲಾಗುತ್ತಿದೆ.

ಕೋವಿಡ್​ ಮಾರ್ಗಸೂಚಿ ಅನುಸರಿಸುವುದನ್ನ ಕಲಿಸಬೇಕು

ಮಕ್ಕಳಿಗೆ ಪೋಷಕರೇ ರೋಲ್​ ಮಾಡೆಲ್​. ನೀವು ಸ್ವಚ್ಛತೆ ಪಾಲಿಸಿದರೆ ಮಕ್ಕಳೂ ಪಾಲಿಸುತ್ತಾರೆ. ಅನೇಕ ಮಕ್ಕಳು ಸ್ವಯಂಪ್ರೇರಿತವಾಗಿ ಮಾಸ್ಕ್​ ಧರಿಸುವುದನ್ನು ನೋಡಿದರೆ ಖುಷಿಯಾಗುತ್ತದೆ. ಆಗಾಗ ಮಾಸ್ಕ್​ ತೊಳೆಯದಿದ್ದರೆ, ಚರ್ಮ ಸಂಬಂಧಿ ಕಾಯಿಲೆಗಳು ಬರಬಹುದು. ಹಾಗಾಗಿ ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿ ಅನುಸರಿಸಿ. ಮಕ್ಕಳಲ್ಲೂ ಸ್ವಚ್ಛತೆ ಕಾಪಾಡಿ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕೊಂಚ ಇಳಿಕೆಯಾದ ಕೊರೊನಾ: ಕಳೆದ 24 ಗಂಟೆಯಲ್ಲಿ 29,689 ಕೇಸ್​ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.