ಗುವಾಹಟಿ (ಅಸ್ಸೋಂ): ಪ್ರಾಬಲ್ಯ ಸ್ಥಾಪಿಸಲು ಮತ್ತು ಭಾರತವನ್ನು ಪಾಕಿಸ್ತಾನವನ್ನಾಗಿ ಮಾಡುವ ಉದ್ದೇಶದಿಂದ 1930 ರಿಂದಲೇ ದೇಶದಲ್ಲಿ ಮುಸ್ಲಿಂರ ಜನ ಸಂಖ್ಯೆ ಹೆಚ್ಚಿಸಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಗುವಾಹಟಿಯಲ್ಲಿ ಕಾರ್ಯಕ್ರಮವೊಮದರಲ್ಲಿ ಮಾತನಾಡಿದ ಭಾಗವತ್, ಪಂಜಾಬ್, ಸಿಂಧ್, ಅಸ್ಸೋಂ ಮತ್ತು ಬಂಗಾಳದಲ್ಲಿ ಈ ವ್ಯವಸ್ಥಿತ ಪ್ರಯತ್ನ ನಡೆದಿದ್ದು, ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಇನ್ನು ಜಾತ್ಯಾತೀತತೆ, ಸಾಮಾಜವಾದ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜಗತ್ತಿನಿಂದ ಭಾರತ ಕಲಿಯಬೇಕಿಲ್ಲ. ಏಕೆಂದ್ರೆ ಇವು ದೇಶದ ಸಂಪ್ರದಾಯ ಮತ್ತು ನಮ್ಮ ರಕ್ತದಲ್ಲೇ ಇವೆ ಎಂದು ಹೇಳಿದ್ದಾರೆ.
-
#WATCH | There has been an organised attempt to increase Muslim population since 1930, with a motive of establishing their dominance & make this country Pakistan. It was planned for Punjab, Sindh, Assam, & Bengal & it succeeded to a certain extent: RSS chief Mohan Bhagwat pic.twitter.com/dclOYBb7zh
— ANI (@ANI) July 21, 2021 " class="align-text-top noRightClick twitterSection" data="
">#WATCH | There has been an organised attempt to increase Muslim population since 1930, with a motive of establishing their dominance & make this country Pakistan. It was planned for Punjab, Sindh, Assam, & Bengal & it succeeded to a certain extent: RSS chief Mohan Bhagwat pic.twitter.com/dclOYBb7zh
— ANI (@ANI) July 21, 2021#WATCH | There has been an organised attempt to increase Muslim population since 1930, with a motive of establishing their dominance & make this country Pakistan. It was planned for Punjab, Sindh, Assam, & Bengal & it succeeded to a certain extent: RSS chief Mohan Bhagwat pic.twitter.com/dclOYBb7zh
— ANI (@ANI) July 21, 2021
ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳು ದೇಶದ ಜನರ ವಿರುದ್ಧವಾಗಿಲ್ಲ. ಜೊತೆಗೆ ದೇಶದ ಮುಸ್ಲಿಂರ ಮೇಲೂ ಇವು ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ವಿಭಜನೆ ಬಳಿಕ ದೇಶದ ಅಲ್ಪಸಂಖ್ಯಾತರನ್ನು ರಕ್ಷಿಸುತ್ತೇವೆ ಎಂದು ಭರವಸೆ ನೀಡಿದ್ದೆವು. ಹಾಗೆಯೇ ಇಂದಿಗೂ ಅದನ್ನು ಪಾಲಿಸುತ್ತಿದ್ದೇವೆ. ಆದ್ರೆ ಪಾಕಿಸ್ತಾನ ಅದನ್ನು ಪಾಲಿಸಿಲ್ಲ ಎಂದು ಭಾಗವತ್ ದೂರಿದರು.