ಗೋರಖ್‌ಪುರ(ಉತ್ತರ ಪ್ರದೇಶ): ದಟ್ಟವಾಗಿ ಕವಿದಿದ್ದ ಮಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣದೇ ಬಸ್ ಹಾಗೂ ಸ್ಕಾರ್ಪಿಯೋ ನಡುವಿನ ಭೀಕರ ಅಪಘಾತದಲ್ಲಿ ಸ್ಕಾರ್ಪಿಯೋದಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಗೋರಖ್‌ಪುರ ಗಗಹಾ ಹತಾ ಬಜಾರ್ ಬಳಿ ಈ ಘಟನೆ ನಡೆದಿದೆ.
ಸ್ಥಳಕ್ಕಾಗಮಿಸಿದ ಗಗಹಾ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಕಾರ್ಪಿಯೋ ಸವಾರರು ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಯಮರಾಜನ ಅಟ್ಟಹಾಸ: ತಾಯಿ, ಮಗಳು, ಮೊಮ್ಮಗಳು ಸಾವು!