ಪ್ರಯಾಗ್‌ರಾಜ್: ಉಮೇಶ್ ಪಾಲ್ ಹತ್ಯೆ ಪ್ರಕರಣ ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ ಗುರುವಾರ ಮತ್ತೆ ಮಹತ್ವದ ಘಟನೆ ನಡೆದಿದೆ. ಹೌದು, ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರದ ತಂಡವು ಧುಮನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ರೂಪ್‌ಪುರ ಪ್ರದೇಶವನ್ನು ತಲುಪಿತ್ತು. ಸಫ್ದರ್ ಅಲಿ ಅವರ ಐಷಾರಾಮಿ ಎರಡು ಅಂತಸ್ತಿನ ಮನೆಯನ್ನು ಬುಲ್ಡೋಜರ್ನಿಂದ ಹೊಡೆದುರುಳಿಸಲಾಯಿತು. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಮತ್ತು ಕಾರ್ಟ್ರಿಜ್ಗಳನ್ನು ಒದಗಿಸಿದ್ದರು ಎಂಬ ಆರೋಪ ಸಫ್ದರ್ ಅಲಿ ಎಂದು ಮೂಲಗಳು ತಿಳಿಸಿವೆ. ನಂತರ ಶಸ್ತ್ರಾಸ್ತ್ರ ವ್ಯಾಪಾರಿ ಸಫ್ದರ್ ಅಲಿ ಅವರ ಮನೆಯನ್ನು ನೆಲಸಮ ಮಾಡಲಾಗಿದೆ.
ಮನೆಯನ್ನು ನೆಲಸಮಗೊಳಿಸಿದ ಬುಲ್ಡೋಜರ್: ನಗರದ ಜಾನ್ಸೆಂಗಂಜ್ ಪ್ರದೇಶದಲ್ಲಿ ಸಫ್ದರ್ ಅಲಿ ಅವರು ಶಸ್ತ್ರಾಸ್ತ್ರ ಮತ್ತು ಕಾರ್ಟ್ರಿಜ್ಗಳ ಅಂಗಡಿ ಹೊಂದಿದ್ದಾರೆ. ಎಸ್‌ಎಸ್‌ಎ ಗನ್ ಹೌಸ್‌ನ ಮಾಲೀಕ ಸಫ್ದರ್ ಅಲಿ ಅವರು ನಗರದ ಧುಮನ್‌ಗಂಜ್ ಪ್ರದೇಶದಲ್ಲಿ 250 ಚದರ ಗಜಗಳಿಗಿಂತ ಹೆಚ್ಚು ಜಾಗದಲ್ಲಿ ಎರಡು ಅಂತಸ್ತಿನ ಐಷಾರಾಮಿ ಮನೆಯನ್ನು ನಿರ್ಮಿಸಿದ್ದರು. ಇದರ ಬೆಲೆ 3 ಕೋಟಿಗೂ ಹೆಚ್ಚು ಎನ್ನಲಾಗಿದೆ. ಮತ್ತೊಂದೆಡೆ ನಕ್ಷೆ ಮಂಜೂರಾತಿ ಪಡೆಯದೇ ನಿಯಮಾವಳಿಗೆ ವಿರುದ್ಧವಾಗಿ ಮನೆಗಳನ್ನು ನಿರ್ಮಿಸಿರುವ ಕಾರಣ, ಬುಲ್ಡೋಜರ್ಗಳ ಮೂಲಕ ಮನೆ ನೆಲಸಮ ಮಾಡುವ ಕ್ರಮಕ್ಕೆ ಪಿಡಿಎ ತಂಡ ಮುಂದಾಗಿದೆ.
ಕೆಲವು ದಿನಗಳ ಹಿಂದೆ ನಡೆದಿತ್ತು ಎನ್‌ಕೌಂಟರ್: ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಮಕ್ಕಳನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಅವರ ಪತ್ನಿ ಶೈಸ್ತಾ ಪರ್ವೀನ್ ಅಲಹಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಂದಿನಿಂದ ತಮ್ಮ ಮಕ್ಕಳನ್ನು ಈವರೆಗೂ ಭೇಟಿ ಮಾಡಿಸಿಲ್ಲ ಎಂದು ದೂರಿದ್ದರು. ಶೈಸ್ತಾ ಪರ್ವೀನ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೋರ್ಟ್ ನಡೆಸಿತ್ತು. ಇನ್ನು, ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಪ್ರಯಾಗ್‌ರಾಜ್‌ನ ಧೂಮಂಗಂಜ್‌ನ ನೆಹರು ಪಾರ್ಕ್ ಪ್ರದೇಶದ ಬಳಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಆರೋಪಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಬಿಎಸ್‌ಪಿ ಶಾಸಕ ರಾಜುಲ್ ಪಾಲ್ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಉಮೇಶ್ ಪಾಲ್ನನ್ನು ಇತ್ತೀಚೆಗಷ್ಟೇ ಹತ್ಯ ಮಾಡಲಾಗಿತ್ತು. ಹತ್ಯೆಗೆ ಬಳಸಿದ್ದ ಕಾರನ್ನು ಅರ್ಬಾಜ್ ಎಂಬಾತ ಓಡಿಸುತ್ತಿದ್ದ. ಎನ್‌ಕೌಂಟರ್ ವೇಳೆ ಅರ್ಬಾಜ್ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ಪ್ರಯಾಗ್‌ರಾಜ್‌ನ ಧೂಮಂಗಂಜ್‌ನ ನೆಹರೂ ಪಾರ್ಕ್ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಆರೋಪಿ ಅರ್ಬಾಜ್ ಮೇಲೆ ಗುಂಡು ಹಾರಿಸಲಾಗಿತ್ತು. ಉಮೇಶ್ ಪಾಲ್ ಹತ್ಯೆಗೆ ಬಳಸಿದ ಕಾರನ್ನು ಈತನೇ ಓಡಿಸುತ್ತಿದ್ದ. ಈ ವೇಳೆ ಗುಂಡು ಹಾರಿಸಲಾಗಿದೆ" ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದರು. ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಅರ್ಬಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದ. ಸರ್ಕಾರ ಮತ್ತು ಪೊಲೀಸರು ಎಲ್ಲ ದುಷ್ಕರ್ಮಿಗಳು, ದರೋಡೆಕೋರರು ಮತ್ತು ಮಾಫಿಯಾ ವಿರುದ್ಧ ತೊಡೆತಟ್ಟಿದೆ. ಇವರಿಗೆ ಆಶ್ರಯ ನೀಡುವವರ ವಿರುದ್ಧವೂ ಶಿಸ್ತುಕ್ರಮವಾಗಲಿದೆ ಎಂದು ಹೇಳಿದ್ದರು.
ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನ ಸುಲೇಮ್ ಸರಾಯ್ ಪ್ರದೇಶದಲ್ಲಿ ಕ್ರಿಮಿನಲ್ ಉಮೇಶ್ ಪಾಲ್ ಮತ್ತು ಆತನ ಇಬ್ಬರು ಸಹಚರರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇವರಲ್ಲಿ ಓರ್ವ ಸಾವನ್ನಪ್ಪಿದ್ದ. ಉಮೇಶ್ ಮತ್ತು ಆತನ ಗನ್ನರ್‌ಗಳ ಮೇಲೆ ಹಲವಾರು ಸುತ್ತು ಗುಂಡು ಹಾರಿಸಲಾಗಿತ್ತು.
ಇದನ್ನೂ ಓದಿ: ಬಾರಾ ಹತ್ಯಾಕಾಂಡ: 31 ವರ್ಷದ ಬಳಿಕ ಆರೋಪಿ ಕಿರಾನಿ ಯಾದವ್ಗೆ ಜೀವಾವಧಿ ಶಿಕ್ಷೆ