ರಿವಾ: ನಗರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಎತ್ತುವೊಂದು ಏಕಾಏಕಿ ಮನೆಯ ಮೂರನೇ ಅಂತಸ್ತಿನಲ್ಲಿರುವ ಕೋಣೆಗೆ ನುಗ್ಗಿ ಬೆಡ್ ಮೇಲೆ ವಿಶ್ರಾಂತಿ ಪಡೆದಿರುವ ಘಟನೆ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದ್ದಕ್ಕಿದ್ದಂತೆ ಎತ್ತೊಂದು ನಗರದ ಖಂಡೇಲ್ವಾಲ್ ಕುಟುಂಬದ ಮನೆಗೆ ನುಗ್ಗಿದೆ. ಅಷ್ಟೇ ಅಲ್ಲದೇ ಮೆಟ್ಟಿಗಳ ಸಹಾಯದಿಂದ ಮೂರನೇ ಅಂತಸ್ತಿನ ಬೆಡ್ ರೂಂಗೆ ತೆರಳಿದೆ. ಇನ್ನು ಬೆಡ್ ರೂಂನಲ್ಲಿ ಎತ್ತು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡಿದ್ದು, ಬಳಿಕ ಬೆಡ್ ಮೇಲೆ ವಿಶ್ರಾಂತಿ ಪಡೆದಿದೆ.
ಎತ್ತು ಮನೆಗೆ ನುಗ್ಗಿ ಮೂರನೇ ಅಂತಸ್ತಿನ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ನೋಡಿದ ಖಂಡೇಲ್ವಾಲ್ ಕುಟುಂಬ ಭಯಭೀತಗೊಂಡಿತು. ಬಳಿಕ ಸ್ಥಳೀಯರ ಸಹಾಯದಿಂದ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಎತ್ತನ್ನು ಮನೆಯಿಂದ ಹೊರ ಹಾಕಲಾಯಿತು.
ಈ ಎಲ್ಲಾ ಘಟನೆಯನ್ನು ಕುಟುಂಬದ ಸದಸ್ಯರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದ್ದು, ನೆಟ್ಟಿಗರು ಅಚ್ಚರಿಗೊಳಗಾಗುತ್ತಿದ್ದಾರೆ.