ETV Bharat / bharat

ಅರಣ್ಯದಲ್ಲಿ ಬಾಂಬ್ ಇಟ್ಟ ಕಿಡಿಗೇಡಿಗಳು​: ಮೇಯುವಾಗ ಎಮ್ಮೆ ಬಾಯಲ್ಲೇ ಸ್ಫೋಟ - ಬಾಂಬ್​ ಸ್ಪೋಟ

ಕಾಡಿನಲ್ಲಿ ಮೇಯುವಾಗ ಎಮ್ಮೆಯೊಂದು ಬಾಂಬ್​ ತಿಂದಿದ್ದು, ಬಾಯಲ್ಲೇ​ ಸ್ಫೋಟ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದೆ.

Buffalo Ate
ಗಾಯಗೊಂಡಿರುವ ಎಮ್ಮೆಯ ಹಳೆಯ ಪೋಟೋ
author img

By

Published : Oct 15, 2022, 10:34 PM IST

Updated : Oct 15, 2022, 11:02 PM IST

ಕೈಮೂರ್/ಬಿಹಾರ್​: ಮೇಯುವಾಗ ಎಮ್ಮೆಯ ಬಾಯಲ್ಲಿ ಬಾಂಬ್​ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೈಮೂರ್​ನ ಚೈನ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರಯ್ಯ ಅರಣ್ಯದಲ್ಲಿ ನಡೆದಿದೆ.

ಎಂದಿನಂತೆ ಮಾಲೀಕ ಅರಣ್ಯದಲ್ಲಿ ಎಮ್ಮೆಯನ್ನು ಮೇಯಲು ಬಿಟ್ಟಾಗ ಘಟನೆ ನಡೆದಿದೆ. ಅರಣ್ಯದಲ್ಲಿನ ಆನೆ, ಜಿಂಕೆ, ಸಾರಂಗ ದಂತಹ ಪ್ರಾಣಿಗಳನ್ನು ಕೊಂದು ಅವುಗಳ ಚರ್ಮ, ದಂತ ಮಾರುವ ಉದ್ದೇಶದಿಂದ ಕಿಡಿಗೇಡಿಗಳು ಹುಲ್ಲಿನಲ್ಲಿ ಬಾಂಬ್​​ ಅಡಗಿಸಿಟ್ಟಿದ್ದರು. ಮೇಯುವಾಗ ಎಮ್ಮೆ ಹುಲ್ಲಿನ ಜೊತೆ ಬಾಂಬ್​ನ್ನು ತಿಂದಿದ್ದು, ಆಗ ಅದು ಸ್ಫೋಟಗೊಂಡಿದೆ. ಬಾಂಬ್​ ಸ್ಪೋಟದಿಂದ ಎಮ್ಮೆಯ ಬಾಯಿ, ಹಲ್ಲು, ದವಡೆ ಸೀಳಿ ಹೋಗಿದೆ.

ಬಳಿಕ ಮಾಲೀಕ ಪಶು ವೈದ್ಯರನ್ನು ಕರೆಯಿಸಿ ಎಮ್ಮೆಗೆ ಚಿಕಿತ್ಸೆ ಕೊಡಿಸಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಕಿಡಿಗೇಡಿಗಳು ವನ್ಯಪ್ರಾಣಿ ಕೊಲ್ಲಲು ಇಟ್ಟಿದ್ದ ಬಾಂಬ್​​ ಸ್ಪೋಟಗೊಂಡು ಎಮ್ಮೆಗೆ ತೀವ್ರ ಗಾಯವಾಗಿದ್ದು, ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸಿ ಎಂದು ಎಮ್ಮೆ ಮಾಲೀಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಆನೆಗೆ ಪಟಾಕಿ ತುಂಬಿದ್ದ ಅನಾನಸ್ ನೀಡಿದ ಕಿಡಿಗೇಡಿಗಳು..ನೀರಿನಲ್ಲೇ ದಾರುಣ ಸಾವು!

Last Updated : Oct 15, 2022, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.