ETV Bharat / bharat

Budget 2022: ಈ ಸಲವೂ ಕಾಗದ ರಹಿತ ಬಜೆಟ್​, ಮೊಬೈಲ್​​ ಅಪ್ಲಿಕೇಶನ್​​ನಲ್ಲೂ ಲಭ್ಯ

Union Budget 2022: ಕೇಂದ್ರ ಬಜೆಟ್ 2022 ಮಂಡನೆಗೆ ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಸಲವೂ ಕಾಗದ ರಹಿತ ಬಜೆಟ್ ಮಂಡನೆಯಾಗಲಿದೆ.

author img

By

Published : Jan 27, 2022, 11:00 PM IST

Union Budget 2022
Union Budget 2022

ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲು ದಿನಗಣನೇ ಆರಂಭಗೊಂಡಿದ್ದು, ಫೆ. 1ರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆಯವ್ಯಯ ಮಂಡನೆ ಮಾಡಲಿದ್ದಾರೆ. ಈ ಹಿಂದಿನ ಬಜೆಟ್​​ಗಳಿಗೆ ಹೋಲಿಕೆ ಮಾಡಿದಾಗ ಈ ಸಲದ ಕೇಂದ್ರ ಬಜೆಟ್ ಕೆಲವೊಂದಿಷ್ಟು ಹೊಸ ವಿಷಯಗಳಿಗೆ ನಾಂದಿಯಾಗಲಿದೆ.

ಯೂನಿಯನ್ ಬಜೆಟ್​​ 2022ರ ತಯಾರಿಕೆ ಪ್ರಕ್ರಿಯೆ ಈಗಾಗಲೇ ಅಂತಿಮ ಹಂತ ತಲುಪಿದ್ದು, ಇದೇ ಕಾರಣಕ್ಕಾಗಿ ಇಂದು ಸಿಬ್ಬಂದಿಗಳಿಗೆ ಸಿಹಿ ಹಂಚಿಕೆ ಮಾಡಲಾಯಿತು. ಕೋವಿಡ್​​-19 ಕಾರಣದಿಂದಾಗಿ ಪ್ರತಿ ವರ್ಷ ನಡೆಯುತ್ತಿದ್ದ ಹಲ್ವಾ ಸಮಾರಂಭದ ಬದಲಿಗೆ ಸಿಹಿತಿಂಡಿ ವಿತರಣೆ ಮಾಡಲಾಗಿದೆ.

  • Union Budget 2022-23 will be presented by Union Finance Minister Nirmala Sitharaman on Feb 1 in Paperless form: Union Finance Minister pic.twitter.com/X8sVm18f9V

    — ANI (@ANI) January 27, 2022 " class="align-text-top noRightClick twitterSection" data=" ">

ಕಳೆದ ವರ್ಷದಂತೆ ಈ ಸಲದ ಬಜೆಟ್​ ಕೂಡ ಕಾಗದ ರಹಿತವಾಗಿ ಮಂಡನೆಯಾಗಲಿದೆ. ಆದರೆ, ಡಿಜಿಟಲ್​ ರೂಪಕ್ಕೆ ಮತ್ತಷ್ಟು ಪುಷ್ಠಿ ನೀಡುವ ನಿಟ್ಟಿನಲ್ಲಿ ಮೊಬೈಲ್​ ಅಪ್ಲಿಕೇಶನ್​​​ ತಯಾರಿಸಲಾಗಿದೆ. 'ಯೂನಿಯನ್​ ಬಜೆಟ್​' ಹೆಸರಿನಲ್ಲಿ ಮೊಬೈಲ್​ ಅಪ್ಲಿಕೇಶನ್​ ಲಭ್ಯವಿದ್ದು, ರಾಷ್ಟ್ರೀಯ ಮಾಹಿತಿ, ಎಲೆಕ್ಟ್ರಾನಿಕ್ಸ್​ ಮತ್ತು ಐಟಿ ಸಚಿವಾಲಯ ಇದನ್ನ ಅಭಿವೃದ್ಧಿಪಡಿಸಿದೆ. ಸಂಸತ್​​ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಇದು ಲಭ್ಯವಾಗಲಿದೆ.

ಇದನ್ನೂ ಓದಿರಿ: ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷ ಕಾಂಗ್ರೆಸ್​ಗೆ ದಿಢೀರ್​​​ ಶಾಕ್​​.. ಒಂದೇ ದಿನ NCP ಸೇರಿದ 28 ಕಾರ್ಪೊರೇಟರ್ಸ್​​​

ವೆಬ್​​ ಪೋರ್ಟಲ್​ ಮೂಲಕ ಎಲ್ಲ ದಾಖಲೆ ಡೌನ್​​ಲೋಡ್​ ಮಾಡಬಹುದಾಗಿದ್ದು, ಇಂಗ್ಲಿಷ್​ ಮತ್ತು ಹಿಂದಿಯಲ್ಲಿ ಮೊಬೈಲ್​ ಅಪ್ಲಿಕೇಶನ್ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ Android ಮತ್ತು iOS ಮೊಬೈಲ್​ ಹೊಂದಿರುವ ಬಳಕೆದಾರರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡನೆಯಾಗುತ್ತಿರುವ 10ನೇ ಬಜೆಟ್ ಇದ್ದಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿರುವ 4ನೇ ಆಯವ್ಯಯವಾಗಿದೆ.

ಈ ಸಲದ ಬಜೆಟ್​ ಮೇಲೆ ಉದ್ಯಮಿಗಳು, ಸಾಮಾನ್ಯ ಜನರು ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಆರೋಗ್ಯ ವಲಯ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ. ಕರ್ನಾಟಕಕ್ಕೂ ಹೆಚ್ಚಿನ ಆರ್ಥಿಕ ನೆರವು ಹರಿದು ಬರುವ ಸಾಧ್ಯತೆ ಇದ್ದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುವ ಸಾಧ್ಯತೆ ಇದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.