ETV Bharat / bharat

ಗಡಿಯಲ್ಲಿ ತೀವ್ರವಾದ ಪಾಕ್ ಕಿತಾಪತಿ: ಐವರು ಯೋಧರು ಹುತಾತ್ಮ

pakistan ceasefire
ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ
author img

By

Published : Nov 13, 2020, 3:11 PM IST

Updated : Nov 13, 2020, 10:44 PM IST

15:07 November 13

ಬಾರಾಮುಲ್ಲಾದಲ್ಲಿ ಮಾತ್ರವಲ್ಲದೇ ಪಾಕ್​ ಗಡಿ ಭಾಗದ ಹಲವು ಜಿಲ್ಲೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಪಾಕಿಸ್ತಾನ

ಕದನ ವಿರಾಮ ಉಲ್ಲಂಘನೆ

ಶ್ರೀನಗರ (ಜಮ್ಮು ಕಾಶ್ಮೀರ): ಗಡಿ ನಿಯಂತ್ರಣ ರೇಖೆಯ ಬಳಿಯ ಬಾರಾಮುಲ್ಲಾ ಹಾಗೂ ಹಲವೆಡೆ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಐವರು ಯೋಧರು ಹುತಾತ್ಮರಾಗಿ ಹಾಗೂ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ.

ಬಾರಾಮುಲ್ಲಾದಲ್ಲಿ ಮಾತ್ರವಲ್ಲದೇ ಪಾಕ್​ ಗಡಿ ಭಾಗದ ಹಲವು ಜಿಲ್ಲೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ, ಬಂಡಿಪೋರಾದ ಸೌರೇಜ್, ಕುಪ್ವಾರಾದ ಕೆರನ್ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕುಪ್ವಾರದಲ್ಲಿ ಮೊದಲ ಬಾರಿಗೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ನಮ್ಮ ಯೋಧರು ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಸಣ್ಣ ಶಸ್ತ್ರಗಳು ಹಾಗೂ ಫಿರಂಗಿ ಮೂಲಕ ದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಉಪಟಳ ಹೆಚ್ಚಾಗುತ್ತಿರುವ ಕಾರಣದಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಹಲವು ಪ್ರದೇಶಗಳಲ್ಲಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿ, ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

ಕೆಲವು ಜನವಸತಿ ಪ್ರದೇಶಗಳ ಮೇಲೆಯೂ ಶೆಲ್​ಗಳ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದ್ದು, ಭಾರತೀಯ ಸೇನೆಯೂ ಕೂಡಾ ತಕ್ಕ ಪ್ರತಿಕ್ರಿಯೆ ನೀಡಿದೆ.

Last Updated : Nov 13, 2020, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.