ETV Bharat / bharat

ಗಾಜಿಯಾಬಾದ್‌ನಲ್ಲಿ ನೇಣು ಬಿಗಿದು ನಾಯಿಯನ್ನು ಕೊಂದ ಪಾಪಿಗಳು! ವಿಡಿಯೋ

ನಾಯಿಯನ್ನು ನೇಣು ಬಿಗಿದು ಕೊಂದಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾರ್ವಜನಿಕರು ವಿಕೃತಿ ಮೆರೆದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Dog hanged to death in Ghaziabad
ನಾಯಿಯ ಕೊರಳಿಗೆ ಹಗ್ಗ ಕಟ್ಟಿ ಎಳೆಯುತ್ತಿರುವುದು
author img

By

Published : Nov 14, 2022, 10:24 AM IST

Updated : Nov 14, 2022, 4:45 PM IST

ಗಾಜಿಯಾಬಾದ್: ನಾಯಿಯೊಂದನ್ನು ಕಬ್ಬಿಣದ ಸರಪಳಿಯಿಂದ ನೇಣು ಹಾಕಿರುವುದು ಮಾತ್ರವಲ್ಲದೆ, ಇಬ್ಬರು ಯುವಕರು ನಾಯಿಯ ಕೊರಳಿಗೆ ಹಗ್ಗವನ್ನು ಕಟ್ಟಿ ಎರಡೂ ಕಡೆಯಿಂದ ಎಳೆಯುತ್ತಿರುವ ಅತ್ಯಂತ ಹೇಯ ದುಷ್ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇಂಥ ಕ್ರೌರ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗಾಜಿಯಾಬಾದ್​ ಜನರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲೈಚಿಪುರ್‌ನಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ದೃಶ್ಯದಲ್ಲಿ ಮೂವರು ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರು ನಾಯಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದರೆ ಇನ್ನೊಬ್ಬ ಪಕ್ಕದಲ್ಲೇ ನಿಂತು ನೋಡುತ್ತಿದ್ದಾನೆ. ನಾಯಿಯನ್ನು ಈ ರೀತಿ ಕೊಂದಿರುವುದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ಸಾರ್ವಜನಿಕರ ಒತ್ತಾಯದ ಬಳಿಕ ಟ್ರಾನಿಕಾ ಸಿಟಿ ಪೊಲೀಸರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಗಾಜಿಯಾಬಾದ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾರಿಗೆ ನಾಯಿ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಆರೋಪ: ಸರ್ಕಾರಿ ಆಸ್ಪತ್ರೆ ವೈದ್ಯನ ವಿರುದ್ಧ ಪ್ರಕರಣ

Last Updated : Nov 14, 2022, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.