ETV Bharat / bharat

'ಹುಡುಗ ವಾಟ್ಸ್​​​​​ಆ್ಯಪ್‌ನಲ್ಲಿದ್ದಂಗೆ ಇಲ್ಲ'... ಮದುವೆ ಬೇಡವೇ ಬೇಡ ಎಂದು ಹೊರಟೇ ಹೋದಳು ವಧು! - ಬಿಹಾರ ಸುದ್ದಿ

ವಾಟ್ಸ್​​​​​ಆ್ಯಪ್​​ನಲ್ಲಿರುವ ಫೋಟೋಗೂ ವರನ ನಿಜ ರೂಪಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ವಧು ಮದುವೆಗೆ ನಿರಾಕರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

Bride refuses to marry groom in Bihar
ಮದುವೆ ಬೇಡ ಎಂದು ಮಂಟಪದಿಂದೆದ್ದ ವಧು
author img

By

Published : Mar 5, 2021, 1:09 PM IST

ಪಶ್ಚಿಮ ಚಂಪಾರಣ್ (ಬಿಹಾರ): ಎರಡೂ ಕುಟುಂಬಸ್ಥರು ಮದುವೆ ಸಂಭ್ರಮದಲ್ಲಿರುವಾಗ ವರನ ಮುಖ ನೋಡಿದ ವಧು ನನಗೆ ಈ ಮದುವೆ ಬೇಡ ಎಂದು ವಿವಾಹ ಮಂಟದದಿಂದ ಎದ್ದು ನಡೆದಿದ್ದಾಳೆ.

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನೌತಾನ್ ಬ್ಲಾಕ್ ಪ್ರದೇಶದ ದೇವಾಲಯದಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಬಂಧು - ಬಳಗದೊಂದಿಗೆ ಸಾವಿರಾರು ಜನರು ನೆರೆದಿದ್ದರು. ಇದಕ್ಕೂ ಮುನ್ನ ನೇರವಾಗಿ ವರನನ್ನು ನೋಡಿರದ ಆಕೆಗೆ ವಾಟ್ಸ್​​​​​ಆ್ಯಪ್‌ ಮೂಲಕ ಮಧುಮಗನ ಫೋಟೋ ಕಳುಹಿಸಲಾಗಿತ್ತು ಅಷ್ಟೇ.

ಮುರಿದು ಬಿತ್ತು ಮದುವೆ

ಇದನ್ನೂ ಓದಿ: ವಾಟ್ಸ್​​​​​ಆ್ಯಪ್‌ನಿಂದ ಗುಡ್​ನ್ಯೂಸ್​: ಡೆಸ್ಕ್​ಟಾಪ್​ ಆ್ಯಪ್ ಮೂಲಕವೂ ವಿಡಿಯೋ, ವಾಯ್ಸ್​ ಕಾಲ್ ಸೌಲಭ್ಯ​!

ತಾಳಿ ಕಟ್ಟುವ ವೇಳೆ ವರನ ಮುಖ ನೋಡಿದ ವಧುಗೆ ಶಾಕ್​ ಆಗಿದೆ. ವಾಟ್ಸ್​​​​​ಆ್ಯಪ್​​ನಲ್ಲಿರುವ ಫೋಟೋಗೂ ಈತನ ನಿಜ ರೂಪಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಆರೋಪಿಸಿದ ಯುವತಿ ಮಂಟಪದಿಂದ ಎದ್ದು ಮದುವೆಗೆ ನಿರಾಕರಿಸಿದ್ದಾಳೆ.

ಯುವತಿಯ ನಡೆ ನೋಡಿ ವರನ ಕಡೆಯವರು ಗಲಾಟೆ ಮಾಡಿದ್ದಾರೆ. ವಧುವಿನ ಪೋಷಕರು ಮನವೊಲಿಸಲು ಪ್ರಯತ್ನಿಸಿದರೂ ಆಕೆ ಒಪ್ಪಲಿಲ್ಲ. ಎರಡೂ ಕುಟುಂಬಗಳ ನಡುವೆ ಜಗಳ ತಾರಕಕ್ಕೇರಿದೆ. ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದು, ವರನ ಕಡೆಯವರು ಹಾಗೇಯೇ ಹಿಂದಿರುಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.