ETV Bharat / bharat

ರಸ್ತೆ ಅಪಘಾತ ಕಂಡ ವಿದ್ಯಾರ್ಥಿ ಹೃದಯಾಘಾತದಿಂದ ಸಾವು; ಗಾಯಾಳು ಸವಾರ ಪ್ರಾಣಾಪಾಯದಿಂದ ಪಾರು! - Student died of Heart Attack in telangana

ರಸ್ತೆ ಅಪಘಾತವೊಂದನ್ನು ನೋಡಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಿಕಾರಾಬಾದ್​ ಸಮೀಪದಲ್ಲಿ ನಡೆದಿದೆ.

BOY DIED OF HEART ATTACK AFTER SEEING A ROAD ACCIDENT IN TELANGANA
ರಸ್ತೆ ಅಪಘಾತವನ್ನು ನೋಡಿದ ವಿದ್ಯಾರ್ಥಿ ಹೃದಯಾಘಾತದಿಂದ ಮೃತ
author img

By

Published : Mar 22, 2022, 3:44 PM IST

ವಿಕಾರಾಬಾದ್(ತೆಲಂಗಾಣ): ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲೊಬ್ಬ ವಿದ್ಯಾರ್ಥಿ ರಸ್ತೆ ಅಪಘಾತವೊಂದನ್ನು ಕಣ್ಣಾರೆ ಕಂಡು ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ಘಟನೆ ತೆಲಂಗಾಣದ ವಿಕಾರಾಬಾದ್​ನಲ್ಲಿ ನಡೆದಿದೆ.

ವಿಕಾರಾಬಾದ್​ನ ಬಶೀರಾಬಾದ್​ನ ವಲಯದ ನಿವಾಸಿಯಾದ ಸುದರ್ಶನ್ ​​ಗೌಡ್ ಎಂಬುವವರ​ ಪುತ್ರ ಯಶ್ವಂತ್​ ಗೌಡ್​​ (16) ಮೃತಪಟ್ಟ ವಿದ್ಯಾರ್ಥಿ. ಯಶ್ವಂತ್​ ಗೌಡ್ ವಿಕಾರಾಬಾದ್​ನ ಖಾಸಗಿ ಕಾಲೇಜೊಂದರಲ್ಲಿ ಮೊದಲ ವರ್ಷದ ಇಂಟರ್​ಮೀಡಿಯೇಟ್ ಓದುತ್ತಿದ್ದ ಎಂದು ತಿಳಿದುಬಂದಿದೆ.

ಸೋಮವಾರ ಬಶೀರಾಬಾದ್​​ನಿಂದ ಜೀವಾಂಗಿ ಎಂಬ ಗ್ರಾಮದಿಂದ ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವ ಬೈಕ್ ಸ್ಕಿಡ್ ಆಗಿ ಉರುಳಿಬಿದ್ದಿದ್ದಾನೆ. ಇದನ್ನು ನೋಡಿದ ಯಶ್ವಂತ್​ ಗೌಡ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಮೂರ್ಛೆ ತಪ್ಪಿ ಬಿದ್ದಿದ್ದಾನೆ. ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಶ್ವಂತ್​ನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೊಳಗಾದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸದ್ಯ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಕ್ರಮವಾಗಿ ದೈವಸ್ಥಾನ ಪ್ರವೇಶಿಸಿ ಅಂಗಣ ಸುತ್ತ ರಕ್ತ ಹರಿಸಿದ್ದ ವ್ಯಕ್ತಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.