ಒಂಗೋಲೆ: ವಯಸ್ಸು ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬುದಕ್ಕೆ ವಿದೇಶಿ ಜೋಡಿಗಳು ಮಾದರಿಯಾಗಿದ್ದಾರೆ. ಇಲ್ಲಿರುವ ಜೋಡಿಗಳು ತಮ್ಮ 60ರ ವಯಸ್ಸಿನಲ್ಲಿ ಬ್ಯಾಗ್ ಕಟ್ಟಿಕೊಂಡು ವಿದೇಶ ಯಾತ್ರೆ ಕೈಗೊಂಡಿದ್ದಾರೆ. ವಿವಿಧ ದೇಶಗಳ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಬಯಕೆಯಿಂದ 15 ವಿದೇಶಿ ಜೋಡಿಗಳು ಟ್ರಾವೆಲ್ ಏಜೆನ್ಸಿಯ ಮೂಲಕ ವಿಶ್ವ ಪರ್ಯಟನೆ ಆರಂಭಿಸಿದ್ದಾರೆ. ಈ ವರ್ಷದ ಆಗಸ್ಟ್ 1 ರಂದು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಪ್ರವಾಸ ಶುರು ಮಾಡಿದ ಇವರ ಟಾರ್ಗೆಟ್ ಒಟ್ಟು 18 ರಾಷ್ಟ್ರಗಳಿಗೆ ಭೇಟಿ ನೀಡುವುದಾಗಿದೆ.
ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿ ಜುಲೈ 31, 2023 ರಂದು ಪ್ರವಾಸ ಕೊನೆಗೊಳಿಸಲಿದ್ದಾರಂತೆ. ಈಗಾಗಲೇ ಜಾರ್ಜಿಯಾ, ಅರ್ಮೇನಿಯಾ, ಇರಾನ್ ಮತ್ತು ಪಾಕಿಸ್ತಾನ ಸುತ್ತಿ ಈಗ ಭಾರತಕ್ಕೆ ಆಗಮಿಸಿದ್ದಾರೆ. ಇದೀಗ ಭಾರತಕ್ಕೆ ಬಂದಿರುವ ಇವರು ದೆಹಲಿ, ಮುಂಬೈ ಮತ್ತು ಗೋವಾ ಸಂಪರ್ಕಿಸಿದ ನಂತರ ಹೈದರಾಬಾದ್‌ಗೆ ತೆರಳುವ ರಾತ್ರಿ ಬುಧವಾರ ಒಂಗೋಲೆಯಲ್ಲಿ ತಂಗಿದ್ದಾರೆ.
ಬಿಎಂಆರ್ ಸಂಸ್ಥೆಯ ಪ್ರತಿನಿಧಿ ಬೊಮ್ಮಿಶೆಟ್ಟಿ ಶಂಕರ ರಾವ್ ಅವರು ಕೂಡ ಅತಿಥಿಗಳಾಗಿ ಆಗಮಿಸಿದ್ದರು. ಇವರೆಲ್ಲರಿಗೂ ಇಲ್ಲಿನ ರೋಟರಿ ಕ್ಲಬ್ ಪ್ರತಿನಿಧಿಗಳು ಗುಲಾಬಿ ನೀಡಿ ಸ್ವಾಗತಿಸಿದರು. ಇಲ್ಲಿನ ಆಚಾರ-ವಿಚಾರಗಳನ್ನು ಕಂಡು ಭಾರತೀಯರ ಪ್ರೀತಿಗೆ ಮನಸೋತಿರುವುದಾಗಿ ತಂಡದ ಸದಸ್ಯರಾದ ಆನ್ಫೆನ್, ವಿಲಿಯಮ್ಸ್ ವೋಲ್ಫ್, ಉಲ್ರಿಕ್ ಸಂತಸ ವ್ಯಕ್ತಪಡಿಸಿದರು.
ಭಾರತದಿಂದ ನೇಪಾಳ, ಭೂತಾನ್, ಮ್ಯಾನ್ಮಾರ್, ವಿಯೆಟ್ನಾಂ, ಕಾಂಬೋಡಿಯಾ, ಮಲೇಷ್ಯಾ, ಸಿಂಗಾಪುರ ಮತ್ತು ಇಂಡೋನೇಷ್ಯಾ ಮೂಲಕ ಪ್ರವಾಸ ಸಾಗಲಿದೆ ಎಂದು ತಿಳಿಸಿದ್ದಾರೆ. ಪ್ರತಿ ದಂಪತಿಯು 1 ಕೋಟಿ ರೂ ಮೊತ್ತದ ಕ್ಯಾರವಾನ್ನ ಮೂಲಕ ದಿನಕ್ಕೆ 150 ಕಿ.ಮೀ.ನಿಂದ 200 ಕಿ.ಮೀ. ಅನ್ನು ತಾವೇ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಈ ವಾಹನವು ಮಲಗುವ ಕೋಣೆ, ಸ್ನಾನಗೃಹ, ಅಡುಗೆಮನೆ ಮತ್ತು ಇಂಟರ್ನೆಟ್ ಮತ್ತು GPRS ನಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.
ಇದನ್ನೂ ಓದಿ: ಸೂರತ್ನಲ್ಲಿ ದೇಶದ ಮೊದಲ ಮಲ್ಟಿಲೆವೆಲ್ ರೈಲ್ವೆ ನಿಲ್ದಾಣದ ಕಾಮಗಾರಿ ಆರಂಭ