ETV Bharat / bharat

ಮುಂಬೈನಲ್ಲಿ 'ವ್ಯಾಕ್ಸಿನ್ ಮುಗಿದಿದೆ​': ಫಲಕ ನೋಡಿ ಹಿಂದಿರುಗುತ್ತಿರುವ ಜನರು - ಬಿಕೆಸಿ ಜಂಬೋ ಲಸಿಕಾ ಕೇಂದ್ರದ ಡೀನ್ ರಾಜೇಶ್ ದೇರೆ

ಕೋವಿಶೀಲ್ಡ್ ಲಸಿಕೆ ಖಾಲಿಯಾದ ಕಾರಣ ಮುಂಬೈನ ಬಿಕೆಸಿ ಜಂಬೋ ವ್ಯಾಕ್ಸಿನೇಷನ್ ಕೇಂದ್ರದ ಹೊರಗೆ 'ವ್ಯಾಕ್ಸಿನ್​ ಔಟ್​ ಆಫ್​ ಸ್ಟಾಕ್​' ಎಂಬ ಫಲಕಗಳನ್ನನು ಹಾಕಲಾಗಿದೆ.

BKC vaccination centre in Mumbai
ಮುಂಬೈನ ಬಿಕೆಸಿ ಜಂಬೋ ವ್ಯಾಕ್ಸಿನೇಷನ್ ಕೇಂದ್ರದ ಹೊರಗೆ 'ವ್ಯಾಕ್ಸಿನ್​ ಔಟ್​ ಆಫ್​ ಸ್ಟಾಕ್​' ಫಲಕ
author img

By

Published : Apr 20, 2021, 11:56 AM IST

ಮುಂಬೈ (ಮಹಾರಾಷ್ಟ್ರ): ಮುಂಬೈನ ಬಿಕೆಸಿ ಜಂಬೋ ವ್ಯಾಕ್ಸಿನೇಷನ್ ಕೇಂದ್ರದ ಹೊರಗೆ 'ವ್ಯಾಕ್ಸಿನ್​ ಔಟ್​ ಆಫ್​ ಸ್ಟಾಕ್​' ಎಂಬ ಫಲಕಗಳನ್ನು ಹಾಕಿದ್ದು, ಲಸಿಕೆ ಪಡೆಯಲು ಬಂದ ಜನರು ಹಾಗೆಯೇ ವಾಪಸ್ಸಾಗುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಕೆಸಿ ಜಂಬೋ ಲಸಿಕಾ ಕೇಂದ್ರದ ಡೀನ್ ರಾಜೇಶ್ ದೇರೆ, ನಾವು ಕೋವಿಶೀಲ್ಡ್ ಲಸಿಕೆಯ 350-400 ಡೋಸ್​ಗಳನ್ನು ಪಡೆದಿದ್ದೆವು, ಅದನ್ನು ನೀಡಿದ್ದೇವೆ. ಲಸಿಕೆ ಖಾಲಿಯಾಗಿರುವುದು ನಿನ್ನೆ ರಾತ್ರಿ ನಮ್ಮ ಗಮನಕ್ಕೆ ಬಂದಿದೆ. ಇಂದು ಸಂಜೆಯೊಳಗೆ ಲಸಿಕೆ ತಲುಪಲಿದೆ ಎಂದು ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ಹೀಗಾದಲ್ಲಿ ನಾವು ನಾಳೆ ವ್ಯಾಕ್ಸಿನೇಷನ್ ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಮುಂಬೈನ ಬಿಕೆಸಿ ಜಂಬೋ ವ್ಯಾಕ್ಸಿನೇಷನ್ ಕೇಂದ್ರದ ಹೊರಗೆ 'ವ್ಯಾಕ್ಸಿನ್​ ಔಟ್​ ಆಫ್​ ಸ್ಟಾಕ್​' ಫಲಕ

ಇದನ್ನೂ ಓದಿ: ಮುಂಬೈನಿಂದ ವಿಶಾಖಪಟ್ಟಣಂಗೆ ಹೊರಟ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು

ಸುಮಾರು 2000 ಕೋವಾಕ್ಸಿನ್ ಡೋಸ್​ಗಳು ಲಭ್ಯವಿದ್ದು, ಎರಡನೇ ಡೋಸ್​ ಹಾಕಿಸಿಕೊಳ್ಳುವವರಿಗೆ ಮಾತ್ರ ಸದ್ಯ ನೀಡಲಾಗುತ್ತಿದೆ ಎಂದು ರಾಜೇಶ್ ದೇರೆ ತಿಳಿಸಿದ್ದಾರೆ.

ಇತ್ತ ಲಸಿಕಾ ಕೇಂದ್ರದ ಹೊರಗಡೆ ಪೊಲೀಸರು ವ್ಯಾಕ್ಸಿನ್​ ಖಾಲಿಯಾಗಿರುವ ಕುರಿತು ಮೈಕ್​ ಹಿಡಿದು ಸಾರ್ವಜನಿಕರಿಗೆ ಮಾಹಿತಿ ಮುಟ್ಟಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.