ETV Bharat / bharat

ಚುನಾವಣೆ ಗೆಲ್ಲಲು ಬಿಜೆಪಿ 'ಶತ'ಮುಖ ಪ್ರಯತ್ನ.. 100 ಹೊಸ ಅಭ್ಯರ್ಥಿಗಳಿಗೆ ಟಿಕೆಟ್​​​​​!!

author img

By

Published : Oct 12, 2021, 3:17 PM IST

"2022 ರಲ್ಲಿ ಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಮುಖಗಳನ್ನು ಬದಲಿಸಿ, ನೂರು ಹೊಸ ಮುಖಗಳನ್ನು ಕಣಕ್ಕಿಳಿಸುವ ಯೋಜನೆ ಇದೆ" ಎಂದು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಮಂಗಳವಾರ ಹಿಮ್ಮತ್ ನಗರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ 'ಶತ'ಮುಖ ಪ್ರಯತ್ನ

ಗಾಂಧಿನಗರ (ಗುಜರಾತ್): ಗುಜರಾತ್​ನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ನೂರು ಹೊಸ ಮುಖಗಳನ್ನು ಕಣಕ್ಕಿಳಿಸಲಿದೆ ಎಂದು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಮಂಗಳವಾರ ಹಿಮ್ಮತ್ ನಗರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.

ಮುಂದಿನ ವರ್ಷದ ಅಂತ್ಯದ ವೇಳೆಗೆ ಗುಜರಾತ್ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಪೇಜ್ ಪ್ರೆಸಿಡೆಂಟ್ (Panna Pramukh) ಕಾರ್ಡ್ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "2022 ರಲ್ಲಿ ಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಮುಖಗಳನ್ನು ಬದಲಿಸಿ, ನೂರು ಹೊಸ ಮುಖಗಳನ್ನು ಕಣಕ್ಕಿಳಿಸುವ ಯೋಜನೆ ಇದೆ.

ಟಿಕೆಟ್​ಗಳಿಗಾಗಿ ಯಾರೂ ನನ್ನನ್ನು ಸಂಪರ್ಕಿಸಬಾರದು ಎಂದು ನಾನು ಹೇಳುತ್ತೇನೆ. ಏಕೆಂದರೆ ಈ ನಿರ್ಧಾರವನ್ನು ಉನ್ನತ ಮಟ್ಟದಿಂದ ತೆಗೆದುಕೊಳ್ಳಲಾಗಿದೆ ಮತ್ತು ಯಾರಾದರೂ ಅತೃಪ್ತರಾಗಿದ್ದರೆ, ಅವರು ದೆಹಲಿಗೆ ಹೋಗಬಹುದು" ಎಂದು ಇದೇ ವೇಳೆ ಅವರು ಹೇಳಿದ್ದಾರೆ.

"ಕೇಸರಿ ಪಕ್ಷದಲ್ಲಿನ ವಿಷಯಗಳ ಯೋಜನೆಯಲ್ಲಿ ಕಾರ್ಯಕರ್ತರು ಬಹಳ ಮಹತ್ವದ ಸ್ಥಾನವನ್ನು ಹೊಂದಿದ್ದಾರೆ. ನಾವು ಕಾರ್ಯಕರ್ತರಿಂದ ಯಾವುದೇ ದೂರುಗಳನ್ನು ಸ್ವೀಕರಿಸಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕಾರ್ಯಕರ್ತರ ಬೇಡಿಕೆಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಪ್ರಸ್ತಾಪಗಳನ್ನು ಪೂರೈಸಬೇಕಿದೆ ಎಂದಿದ್ದಾರೆ.

ಗುಜರಾತ್ ರಾಜ್ಯ ವಿಧಾನಸಭೆ ಒಟ್ಟು ಬಲಾಬಲ 182 ಕ್ಷೇತ್ರಗಳನ್ನು ಒಳಗೊಂಡಿದೆ. ಅದರಲ್ಲಿ ಬಿಜೆಪಿ 112 ಸ್ಥಾನಗಳನ್ನು ಹೊಂದಿದ್ದರೆ, ವಿರೋಧ ಪಕ್ಷ ಕಾಂಗ್ರೆಸ್ 65 ಸ್ಥಾನ ಹಾಗೂ ಭಾರತೀಯ ಬುಡಕಟ್ಟು ಪಕ್ಷ (BTP) 2 ಸ್ಥಾನಗಳನ್ನು ಹೊಂದಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ಒಂದು ಸ್ಥಾನ ಹಾಗೂ ಪಕ್ಷೇತರರಾಗಿ ಗೆದ್ದಿರುವ ಜಿಗ್ನೇಶ್ ಮೇವಾನಿ ಇದ್ದಾರೆ.

ಓದಿ: ಮಕ್ಕಳಿಗೂ ಕೊವ್ಯಾಕ್ಸಿನ್​: 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್​ ಲಸಿಕೆ ನೀಡಲು ಶಿಫಾರಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.