ETV Bharat / bharat

ರಾಹುಲ್​ ಗಾಂಧಿ ಹೇಳಿಕೆ ಉತ್ತರ-ದಕ್ಷಿಣ ಭಾರತ ವಿಭಜನೆಯ ವಿವಾದ ಸೃಷ್ಟಿಸಿದೆ: ಬಿಜೆಪಿ ಕಿಡಿ

ಕೇರಳದ ವಯನಾಡು ಸಂಸದೀಯ ಕ್ಷೇತ್ರವನ್ನು ತಮ್ಮ ಹಿಂದಿನ ಅಮೇಥಿ ಸ್ಥಾನಕ್ಕೆ ಹೋಲಿಸಿ ಕೇವಲವಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಂಧಿಯವರು "ಉತ್ತರ-ದಕ್ಷಿಣ" ವಿಭಜನೆಯನ್ನು ಸೃಷ್ಟಿಸಿದ್ದಾರೆ ಎಂದು ಉತ್ತರ ಭಾರತದಲ್ಲಿ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸುತ್ತಿದೆ.

south divide
ಬಿಜೆಪಿ ಕಿಡಿ
author img

By

Published : Feb 24, 2021, 8:23 AM IST

ನವದೆಹಲಿ: ಕಾಂಗ್ರೆಸ್​ ಸಂಸದ​ ರಾಹುಲ್​ ಗಾಂಧಿ ಕೇರಳದಲ್ಲಿ ನಿಂತು ಒಡೆದಾಳುವ ನೀತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್​, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಮತದಾನದ ಕೇರಳದಲ್ಲಿ 'ಐಶ್ವರ್ಯ ಕೇರಳ ಯಾತ್ರೆ' ಮುಕ್ತಾಯ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್​, ಕಳೆದ 15 ವರ್ಷಗಳಿಂದ ಉತ್ತರ ಭಾರತದಲ್ಲಿ ಸಂಸದನಾಗಿರುವ ನಾನು ಬೇರೆ ರೀತಿಯ ರಾಜಕೀಯಕ್ಕೆ ಒಗ್ಗಿಕೊಂಡಿದ್ದೆ. ಆದರೆ ಕೇರಳಕ್ಕೆ ಆಗಮಿಸಿದ ನನಗೆ ಉತ್ಸಾಹ ಹೆಚ್ಚಿಸಿ, ನನ್ನನ್ನು ಉಲ್ಲಾಸವನ್ನುಂಟು ಮಾಡಿದೆ. ಇಲ್ಲಿನ ಜನರು ಸಮಸ್ಯೆಗಳನ್ನು ಆಳವಾಗಿ ತಿಳಿದುಕೊಂಡಿದ್ದಾರೆ ಮತ್ತು ಪರಿಹಾರ ಹುಡುಕುತ್ತಿದ್ದಾರೆ ಎಂದಿದ್ದರು. ಈ ಹೇಳಿಕೆ ಮೂಲಕ ಗಾಂಧಿ ಕುಟುಂಬಕ್ಕೆ ರಾಜಕೀಯ ಭದ್ರ ಬುನಾದಿ ಹಾಕಿದ ಅಮೇಥಿ ಹಾಗೂ ಉತ್ತರ ಭಾರತವನ್ನು ತೆಗಳಿದ್ದಾರೆ ಎಂದು ಬಿಜೆಪಿ ನಾಯಕರು ರಾಹುಲ್​ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗಾಂಧಿಯವರು "ಉತ್ತರದ ವಿರುದ್ಧ ವಿಷವನ್ನು ಹೊರಹಾಕುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಈಶಾನ್ಯ ರಾಜ್ಯಗಳಿಗೆ ತೆರಳಿದ್ದಾಗ, ಭಾರತದ ಪಶ್ಚಿಮ ಭಾಗದ ವಿರುದ್ಧ ವಿಷ ಹೊರಹಾಕಿದ್ದರು. ಇಂದು ದಕ್ಷಿಣದಲ್ಲಿ ಅವರು ಉತ್ತರದ ವಿರುದ್ಧ ವಿಷವನ್ನು ಚೆಲ್ಲುತ್ತಿದ್ದಾರೆ. ವಿಭಜನೆ ಮತ್ತು ಆಡಳಿತ ರಾಜಕೀಯ ಕೆಲಸ ಮಾಡುವುದಿಲ್ಲ, ರಾಹುಲ್ ಗಾಂಧಿ ಜಿ! ”ಎಂದು ನಡ್ಡಾ ಟ್ವೀಟ್ ಮೂಲಕ ಕುಟುಕಿದ್ದಾರೆ.

  • A few days back he was in the Northeast, spewing venom against the western part of India.

    Today in the South he is spewing venom against the North.

    Divide and rule politics won’t work, @RahulGandhi Ji!

    People have rejected this politics. See what happened in Gujarat today! https://t.co/KbxZSJ4sdt

    — Jagat Prakash Nadda (@JPNadda) February 23, 2021 " class="align-text-top noRightClick twitterSection" data=" ">

ರಾಹುಲ್​ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​, ದೇಶದಲ್ಲಿ "ಉತ್ತರ-ದಕ್ಷಿಣ" ವಿಭಜನೆಯನ್ನು ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

"ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ನೆಲಕಚ್ಚಿದೆ. ರಾಹುಲ್​ಜೀ ಈ ಹಿಂದೆ ಉತ್ತರ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಿದ್ದರು, ಈಗ ಅವರು ದಕ್ಷಿಣ ದಿಕ್ಕಿಗೆ ಹೋಗಿದ್ದಾರೆ. ನಮಗೆ ಮತ್ತು ಜನರಿಗೆ ಇಡೀ ದೇಶ ಒಂದೇ. ಕಾಂಗ್ರೆಸ್ ದೇಶವನ್ನು ಉತ್ತರ ಮತ್ತು ದಕ್ಷಿಣಕ್ಕೆ ವಿಭಜಿಸಲು ಬಯಸಿದೆ. ಆದ್ರೆ "ಜನರು ಹೀಗಾಗಲು ಬಿಡುವುದಿಲ್ಲ" ಎಂದು ಚೌಹಾಣ್​ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

  • जहाँ-जहाँ पाँव पड़े राहुल गांधी के, तहाँ-तहाँ कांग्रेस का बंटाधार!

    राहुल जी ने पहले उत्तर भारत को कांग्रेस मुक्त कर दिया, अब दक्षिण को चले हैं!

    हमारे और जनता के लिए पूरा देश एक है। कांग्रेस भारत को उत्तर और दक्षिण में बाँटना चाहती है, जनता ऐसे प्रयासों को सफल नहीं होने देगी। pic.twitter.com/6HBzvn10KI

    — Shivraj Singh Chouhan (@ChouhanShivraj) February 23, 2021 " class="align-text-top noRightClick twitterSection" data=" ">

ವಿದೇಶಾಂಗ ಸಚಿವ ಎಸ್.ಜೈಶಂಕರ್ ಎಂದಿಗೂ ಒಂದು ಪ್ರದೇಶವನ್ನು ಬೇರೆ ಮಾಡಬೇಡಿ, ನಮ್ಮನ್ನು ಎಂದಿಗೂ ವಿಭಜಿಸಬೇಡಿ" ಎಂದು ಹೇಳಿದ್ದಾರೆ. "ನಾನು ದಕ್ಷಿಣದಿಂದ ಬಂದವನು. ಈಗ ವಿದೇಶಾಂಗ ಸಚಿವನಾಗಿದ್ದೇನೆ. ಇಲ್ಲಿ ಹುಟ್ಟಿ, ಇಲ್ಲಿಯೇ ವಿದ್ಯಾವಂತನಾಗಿದ್ದೇನೆ ಮತ್ತು ಉತ್ತರ ಭಾರತದಲ್ಲಿ ಕೆಲಸ ಮಾಡಿದ್ದೇನೆ. ನಾನು ಇಡೀ ಭಾರತವನ್ನು ಪ್ರತಿನಿಧಿಸಿದ್ದೇನೆ. ಭಾರತ ದೇಶ ಒಂದೇ , ನಮ್ಮನ್ನು ಎಂದಿಗೂ ವಿಭಜಿಸಬೇಡಿ" ಅಂತಾ ಜೈಶಂಕರ್​ ಟ್ವೀಟ್​ ಮಾಡಿದ್ದಾರೆ.

  • I hail from the South.

    I am an MP from a Western state.

    I was born, educated and worked in the North.

    I represented all of India before the World.

    India is one.
    Never run down a region; never divide us.

    — Dr. S. Jaishankar (@DrSJaishankar) February 23, 2021 " class="align-text-top noRightClick twitterSection" data=" ">

ರಾಜಕಾರಣಕ್ಕಾಗಿ ಪ್ರಾದೇಶಿಕತೆಯೆಂಬ ಕತ್ತಿಯಿಂದ ದೇಶವನ್ನು ವಿಭಾಗಿಸಲು ಪ್ರಯತ್ನಿಸಬೇಡಿ. ಭಾರತವು ಒಂದು ಮತ್ತು ಯಾವಾಗಲೂ ಒಂದಾಗಿರುತ್ತದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ರಾಹುಲ್​ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

  • श्रीमान राहुल जी,

    श्रद्धेय अटल जी ने कहा था कि 'भारत जमीन का टुकड़ा नहीं, जीता जागता राष्ट्रपुरुष है'

    कृपया आप इसे अपनी ओछी राजनीति की पूर्ति के लिए 'क्षेत्रवाद' की तलवार से काटने का कुत्सित प्रयास न करें।

    भारत एक था, एक है, एक ही रहेगा।

    भारत माता की जय

    — Yogi Adityanath (@myogiadityanath) February 23, 2021 " class="align-text-top noRightClick twitterSection" data=" ">

ಇದನ್ನೂ ಓದಿ:ಟ್ಯಾಂಕರ್​​ ಮತ್ತು ಕಾರ್​ ನಡುವೆ ಭೀಕರ ಅಪಘಾತ: ಏಳು ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.