ETV Bharat / bharat

ಬಿಜೆಪಿ-ಶಿವಸೇನೆ ನಡುವಿನ ನಂಟು ಅಮೀರ್​ ಖಾನ್​-ಕಿರಣ್​ ರಾವ್ ಅವರಂತೆ: ಸಂಜಯ್​​ ರಾವತ್ - ಅಮೀರ್​ ಖಾನ್​- ಕಿರಣ್​ ರಾವ್

ಬಿಜೆಪಿ-ಶಿವಸೇನೆ ನಡುವಿನ ಸಂಬಂಧ ಭಾರತ-ಪಾಕಿಸ್ತಾನದಂತೆ ಅಲ್ಲ, ಬದಲಾಗಿ ಅಮೀರ್ ಖಾನ್​- ಕಿರಣ್​ರಾವ್ ಅವರಂತೆ ಎಂದು ಸಂಜಯ್​ ರಾವತ್​ ಹೇಳಿದ್ದಾರೆ.

Sanjay Raut
Sanjay Raut
author img

By

Published : Jul 5, 2021, 4:31 PM IST

ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿನ ಶಿವಸೇನೆ-ಬಿಜೆಪಿ ನಡುವಿನ ರಾಜಕೀಯ ಬೆಳವಣಿಗೆ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಶಿವಸೇನೆ ವಕ್ತಾರ ಸಂಜಯ್​ ರಾವತ್​ ನೀಡಿರುವ ಹೇಳಿಕೆ ಇದೀಗ ಕುತೂಹಲ ಕೆರಳಿಸಿದೆ.

ಆಡಳಿತ ಪಕ್ಷದಲ್ಲಿರುವ ಶಿವಸೇನೆ ಹಾಗೂ ವಿರೋಧ ಪಕ್ಷದಲ್ಲಿರುವ ಬಿಜೆಪಿ ಕುರಿತು ಮಾತನಾಡಿರುವ ರಾವತ್,​ ಅಮೀರ್ ಖಾನ್​​- ಕಿರಣ್​ ರಾವ್​ ಸಂಬಂಧಕ್ಕೆ ಹೋಲಿಕೆ ಮಾಡಿದ್ದಾರೆ. ಎರಡು ಪಕ್ಷಗಳ ರಾಜಕೀಯ ವಿಚಾರ ಬೇರೆಯಾಗಿದ್ದು, ಆದರೆ ಸ್ನೇಹ ಮಾತ್ರ ಯಾವಾಗಲೂ ಒಂದೇ ಆಗಿರುತ್ತದೆ ಎಂದು ಅವರು ಹೇಳಿದರು

  • We are not India-Pakistan. Look at Aamir Khan and Kiran Rao, it is like them. Our (Shiv Sena, BJP) political ways are different but the friendship will remain intact: Shiv Sena leader Sanjay Raut on BJP's Devendra Fadnavis' 'we are not enemies' remark pic.twitter.com/OUPdztS9Od

    — ANI (@ANI) July 5, 2021 " class="align-text-top noRightClick twitterSection" data=" ">

ಕಳೆದ ಎರಡು ದಿನಗಳ ಹಿಂದೆ ಶಿವಸೇನೆ-ಬಿಜೆಪಿ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ಶಿವಸೇನೆ-ಬಿಜೆಪಿ ಶತ್ರುಗಳಲ್ಲ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಸಂಜಯ್​ ರಾವತ್​ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ಗುರು​ ರಾಹುಲ್‌ ದ್ರಾವಿಡ್‌​ ಬಗ್ಗೆ ಪೃಥ್ವಿ ಶಾ ಗುಣಗಾನ ಹೀಗಿತ್ತು..

ಎನ್​ಸಿಪಿ-ಶಿವಸೇನೆ ರಾಜ್ಯದಲ್ಲಿ ಆಡಳಿತ ಅವಧಿ ಪೂರ್ಣಗೊಳಿಸಲಿದ್ದು, ಇದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಎಂದು ಇದೇ ವೇಳೆ ಅವರು ಹೇಳಿಕೊಂಡಿದ್ದಾರೆ. 2019ರ ವಿಧಾನಸಭೆ ಚುನಾವಣೆ ವೇಳೆ ಮೈತ್ರಿ ಮಾಡಿಕೊಂಡು ಬಿಜೆಪಿ-ಶಿವಸೇನೆ ಚುನಾವಣಾ ಅಖಾಡಕ್ಕಿಳಿದಿದ್ದವು. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆ ಉಲ್ಟಾ ಹೊಡೆದಿದ್ದ ಶಿವಸೇನೆ ರಾಜ್ಯದಲ್ಲಿ ಎನ್​​ಸಿಪಿ ಜೊತೆ ಮೈತ್ರಿಮಾಡಿಕೊಂಡು ಸರ್ಕಾರ ರಚನೆ ಮಾಡಿದೆ.

ಕಳೆದ 15 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿರುವ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕಿರಣ್​ ರಾವ್​ ಕಳೆದ ಮೂರು ದಿನಗಳ ಹಿಂದೆ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.