ETV Bharat / bharat

ಹಿಮಾಚಲದಲ್ಲಿ ಕಾಂಗ್ರೆಸ್​ ಮೇಲುಗೈ.. ಬಿಜೆಪಿಗೆ ಮುಳುವಾದ ಬಂಡಾಯ - ಈಟಿವಿ ಭಾರತ ಕನ್ನಡ

ಈ ಬಾರಿ ಟಿಕೆಟ್​ ಸಿಗದ ಬಿಜೆಪಿಯ ಹಲವು ನಾಯಕರುಗಳು ಬಂಡಾಯದ ಬಾವುಟ ಹಾರಿಸಿ ಸ್ವತಂತ್ರರಾಗಿ ಕಣಕ್ಕಿಳಿದಿದ್ದಾರೆ.

bjp-rebels-in-himachal-election-results-2022
ಹಿಮಾಚಲದಲ್ಲಿ ಕಾಂಗ್ರೆಸ್​ ಮೇಲುಗೈ.. ಬಿಜೆಪಿಗೆ ಮುಳುವಾದ ಬಂಡಾಯ
author img

By

Published : Dec 8, 2022, 12:31 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಮತ ಎಣಿಕೆಯ ಆರಂಭದಲ್ಲಿ ಬಿಜೆಪಿಯು ಗೆಲುವಿನತ್ತ ಮುಖ ಮಾಡುವುದರಲ್ಲಿತ್ತು. ಅದಕ್ಕೆಂದೇ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿತ್ತು. ಆದರೆ ಇದೀಗ ಬಿಜೆಪಿ ಬಂಡಾಯಗಾರರೇ ಇದನ್ನು ಹಾಳು ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಬಾರಿ ಟಿಕೆಟ್​ ಸಿಗದ ಬಿಜೆಪಿಯ ಹಲವು ನಾಯಕರುಗಳು ಬಂಡಾಯದ ಬಾವುಟ ಹಾರಿಸಿ ಸ್ವತಂತ್ರರಾಗಿ ಕಣಕ್ಕಿಳಿದಿದ್ದಾರೆ. ಮತ ಎಣಿಕೆಯ ಆರಂಭದಿಂದಲೂ ಪ್ರಮುಖವಾಗಿ 8 ಜನ ನಾಯಕರು ಬಿಜೆಪಿಯ ಗೆಲುವಿನ ಆಟಕ್ಕೆ ಬ್ರೇಕ್​ ಹಾಕಿದ್ದಾರೆ.

ಇವರಲ್ಲಿ ಪ್ರಮುಖ ನಾಯಕರುಗಳೆಂದರೆ ಹಮೀರ್​ ಜಿಲ್ಲೆಯ ಬಾರ್ಸರ್ ಕ್ಷೇತ್ರದಿಂದ ಸಂಜೀವ್ ಶರ್ಮಾ, ಕುಲು ಜಿಲ್ಲೆಯ ಬಂಜಾರ್ ಕ್ಷೇತ್ರದಿಂದ ಹಿತೇಶ್ವರ್ ಸಿಂಗ್, ಕಿನ್ನೌರ್​ನಿಂದ ತೇಜ್ವಂತ್ ನೇಗಿ, ಸೋಲನ್​ನ ನಲಗಢ್ ಕ್ಷೇತ್ರದಿಂದ ಕೆ.ಎಲ್ ಠಾಕೂರ್​, ಕುಲು ಕ್ಷೇತ್ರದಿಂದ ರಾಮ್​ ಸಿಂಗ್ ಸೇರಿದಂತೆ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಕ್ಷೇತ್ರದಿಂದ ವಿಪಿನ್ ನೆಹ್ರಿಯಾ, ಕಂಗ್ರಾದಿಂದ ಕುಲ್ಬಾಶ್ ಚೌಧರಿ ಮತ್ತು ಫತೇಪುರ್ ಕ್ಷೇತ್ರದಿಂದ ಪರ್ಮಾರ್ ಬಿಜೆಪಿ ವಿರುದ್ಧ ಮೇಲು ಸಾಧಿಸುತ್ತಿದ್ದಾರೆ.

ಕಾಂಗ್ರೆಸ್​ ಮತ್ತು ಬಿಜೆಪಿಯಲ್ಲಿ ಬಂಡಾಯವೆದ್ದವರು ತಮ್ಮ ಪಕ್ಷದ ವಿರುದ್ಧವೇ ಬಾವುಟ ಹಾರಿಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಒಟ್ಟು ಬಂಡಾಯಗಾರರ ಪೈಕಿ 21 ಮಂದಿ ಬಿಜೆಪಿಗರು ಮತ್ತು 7 ಮಂದಿ ಕಾಂಗ್ರೆಸ್ಸಿಗರಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಮಲಕ್ಕೆ ಹಿನ್ನಡೆ: ಬಿಜೆಪಿಗೆ 2 ಸ್ಥಾನಗಳಲ್ಲಿ ಜಯ, ಸಿಎಂ ಠಾಕೂರ್​ಗೆ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.