ಹೈದರಾಬಾದ್( ತೆಲಂಗಾಣ): ಭಾರಿ ಹಣ ಮತ್ತು ಗುತ್ತಿಗೆ ನೀಡುವ ಮೂಲಕ ಬಿಜೆಪಿ ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಟಿಆರ್‌ಎಸ್ ಶಾಸಕ ಬಾಲ್ಕ ಸುಮನ್ ಆರೋಪಿಸಿದ್ದಾರೆ. ಶಾಸಕರನ್ನು ಖರೀದಿಸಲು ಬಂದಿದ್ದ ಮೂವರನ್ನು ನಗರದ ನಾಗರಶಿವೂರಿನ ಫಾರ್ಮ್‌ಹೌಸ್‌ನಲ್ಲಿ ಪೊಲೀಸರು ಬಂಧಿಸಿದ ಬಳಿಕ ಚಂದೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪ್ರತಿ ಶಾಸಕರಿಗೆ ರೂ 100 ಕೋಟಿ ಮತ್ತು ಗುತ್ತಿಗೆ ನೀಡಲಾಗಿತ್ತು. ಬಿಜೆಪಿ ಮುಖಂಡರು ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸುತ್ತಿರುವಾಗ ನಮ್ಮ ಶಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬಿಜೆಪಿ ಹಲವು ಷಡ್ಯಂತ್ರಗಳನ್ನು ಮಾಡಿರುವ ಬಿಜೆಪಿಯವರು ತೆಲಂಗಾಣ ಮಾರಾಟಕ್ಕಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ತೆಲಂಗಾಣದ ಮಕ್ಕಳು ಕೆಸಿಆರ್ ನೇತೃತ್ವದಲ್ಲೇ ಮುಂದುವರಿಯಲಿದ್ದಾರೆ ಎಂದಿದ್ದಾರೆ.
ಮುನುಗೋಡಿನಲ್ಲಿ ಸೋಲುತ್ತೇವೆ ಎನ್ನುವ ಭಯದಿಂದ ಬಿಜೆಪಿ ನಾಯಕರು ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಅನೇಕ ದುಷ್ಕೃತ್ಯಗಳನ್ನು ಮಾಡುತ್ತಿದೆ. ರಾಜಗೋಪಾಲ್ ರೆಡ್ಡಿ ಅವರಂತೆ ಟಿಆರ್‌ಎಸ್ ಶಾಸಕರು ಎಂದಿಗೂ ನಡೆದುಕೊಳ್ಳುವುದಿಲ್ಲ. ಟಿಆರ್‌ಎಸ್ ದುರ್ಬಲಗೊಳಿಸಲು ಬಿಜೆಪಿ ದೊಡ್ಡ ಷಡ್ಯಂತ್ರ ಮಾಡುತ್ತಿದೆ. ಬಿಜೆಪಿಯ ಷಡ್ಯಂತ್ರವನ್ನು ಜನರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಒಡ್ಡುತ್ತಿರುವ ಆಮಿಷಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ತೆಲಂಗಾಣದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು. ಕೆಸಿಆರ್ ಕೇಂದ್ರ ರಾಜಕಾರಣದಲ್ಲಿ ತಮ್ಮ ಛಾಪು ತೋರಿಸುತ್ತಾರೆ ಎನ್ನುವ ಭಯ ಮೋದಿ ಅವರಿಗೆ ಇದೆ. ಮೋದಿ ಅವರನ್ನು ಕೆಸಿಆರ್ ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂಬ ಭಯ ದೆಹಲಿಯ ಹಿರಿಯರಿಗೆ ಇದೆ ಎಂದು ಬಾಲ್ಕ ಸುಮನ್ ಆರೋಪಿಸಿದ್ದಾರೆ.
ಇದನ್ನೂ ಓದಿ: 47 ನಾಯಕರ ಉನ್ನತ ಸಮಿತಿ ರಚಿಸಿದ ಖರ್ಗೆ: ಕರ್ನಾಟಕದ ಮೂವರಿಗೆ ಅವಕಾಶ, ತರೂರ್ಗಿಲ್ಲ ಸ್ಥಾನ