ETV Bharat / bharat

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿಯ ಪತ್ನಿಗೆ ಬಿಜೆಪಿ ಟಿಕೆಟ್​

author img

By

Published : Apr 9, 2021, 10:05 AM IST

Updated : Apr 9, 2021, 12:00 PM IST

ಉತ್ತರ ಪ್ರದೇಶದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಿಜೆಪಿಯ ಉಚ್ಛಾಟಿತ ಶಾಸಕನ ಪತ್ನಿಗೆ ಬಿಜೆಪಿ ಮಣೆ ಹಾಕಿದೆ.

BJP nominates rape convict Kuldeep Sengar's wife
ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಅಪರಾಗೆ ಬಿಜೆಪಿ ಟಿಕೆಟ್​ ಘೋಷಣೆ

ಲಖನೌ (ಉತ್ತರ ಪ್ರದೇಶ): ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ 2018ರ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಪತ್ನಿ ಸಂಗೀತಾ ಅವರಿಗೆ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡಿದೆ.

ಅತ್ಯಾಚಾರದ ಗಂಭೀರ ಪ್ರಕರಣದಲ್ಲಿ ಕುಲದೀಪ್ ಸೆಂಗಾರ್ ಭಾಗಿಯಾಗಿದ್ದು ಪಕ್ಷದಿಂದ ಉಚ್ಛಾಟಿತರಾಗಿದ್ದರು. ಇದೀಗ ಮಾಜಿ ಶಾಸಕನ ಪತ್ನಿಗೆ ಟಿಕೆಟ್​ ನೀಡಲು ಕಮಲ ಪಾಳಯ ಉತ್ಸುಕತೆ ತೋರಿದೆ.

ಪ್ರಸ್ತುತ ಉನ್ನಾವೊದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಸಂಗೀತಾ, ಫತೇಪುರ್ ಚೌರಾಸಿ ತ್ರಿತಾಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಉತ್ತರ ಪ್ರದೇಶ ಪಂಚಾಯತ್ ಚುನಾವಣೆ 2021 ಏಪ್ರಿಲ್ 15 ರಿಂದ ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಅಪರಾಧಿಯ ಪತ್ನಿಗೆ ಬಿಜೆಪಿ ಟಿಕೆಟ್​
ಅಪರಾಧಿಯ ಪತ್ನಿಗೆ ಬಿಜೆಪಿ ಟಿಕೆಟ್​

ಇದನ್ನೂ ಓದಿ: ಉನ್ನಾವೊ ಅತ್ಯಾಚಾರ ಕೇಸ್​: ಬಿಜೆಪಿ ಶಾಸಕ ಅಮಾನತು

ಕುಲದೀಪ್ ಸೆಂಗಾರ್ ವಿರುದ್ಧ ಕೇಸ್:

ಕಳೆದ ವರ್ಷ ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.

ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸೆಂಗಾರ್‌ಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿತ್ತು.

ಇದನ್ನೂ ಓದಿ: ದೆಹಲಿ ಹೈ ಕೋರ್ಟ್ ತೀರ್ಪು ಪ್ರಶ್ನಿಸಿದ ಉನ್ನಾವೊ ಅತ್ಯಾಚಾರ ಆರೋಪಿ ಕುಲದೀಪ್​ ಸಿಂಗ್​ ಸೆಂಗರ್

Last Updated : Apr 9, 2021, 12:00 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.