ಲಕ್ನೋ: ದೇಶಾದ್ಯಂತ ಕೊರೊನಾ ಹೆಚ್ಚಳವಾಗುತ್ತಿದ್ದು, ಲಸಿಕೆ ಕೊರತೆ ಕಂಡು ಬರುತ್ತಿದೆ. ಆದ್ರೆ ಗೋ ಮೂತ್ರ ಸೇವನೆಯಿಂದ ಕೊರೊನಾ ಮುಕ್ತರಾಗಬಹುದು ಎಂದು ಬಿಜೆಪಿಯ ಶಾಸಕರೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕರಾದ ಸುರೇಂದ್ರ ಸಿಂಗ್ ಅವರು ಕೊರೊನಾಗೆ ಗೋ ಮೂತ್ರ ರಾಮಬಾಣ ಎಂದು ಹೇಳಿ, ತಾವೇ ಸ್ವತಃ ಗೋ ಮೂತ್ರ ಸೇವಿಸಿದ್ದಾರೆ. ಜೊತೆಗೆ ಜನರೂ ಸೇವಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಲ್ಲಿ ಗೋ ಮೂತ್ರ ಹಾಕಿಕೊಂಡು ಸೇವಿಸಬೇಕು. ಇದರಿಂದ ಕೊರೊನಾ ಅಷ್ಟೇ ಯಾವುದೇ ಮಹಾಮಾರಿ ಬಂದ್ರ ಆರೋಗ್ಯವಾಗಿರಬಹುದು ಎಂದು ಶಾಸಕರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ತಾವು ಗೋ ಮೂತ್ರ ಸೇವಿಸುವ ವಿಡಿಯೋ ಹಾಕಿರುವ ಶಾಸಕರು, ಎಲ್ಲರೂ ತಮ್ಮ ಮನವಿಯನ್ನು ಸ್ವೀಕರಿಸಬೇಕೆಂದು ಕೇಳಿಕೊಂಡಿದ್ದಾರೆ.