ರಾಂಪುರ(ಉತ್ತರಪ್ರದೇಶ): ಯುಪಿಯ ರಾಂಪುರದಲ್ಲಿ ಹಿಂದೂ ಯುವ ವಾಹಿನಿ ಮತ್ತು ಬಿಜೆಪಿ ಮುಖಂಡರು, ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮುಗಿಸಿ ಬಂದ ಮುಸ್ಲಿಮರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಭಾವೈಕ್ಯತೆ ಮೆರೆದರು. ಇದೇ ಮೊದಲ ಬಾರಿಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಹಿಂದೂ ಯುವ ವಾಹಿನಿಯ ಪದಾಧಿಕಾರಿಗಳು ಈದ್ಗಾಕ್ಕೆ ಆಗಮಿಸಿ ಪುಷ್ಪವೃಷ್ಟಿ ಮಾಡಿ ಈದ್ ಶುಭಾಶಯಗಳನ್ನು ಸಲ್ಲಿಸಿದರು.
ಹಿಂದೂ ಯುವ ವಾಹಿನಿ ಜಿಲ್ಲಾಧ್ಯಕ್ಷ ಹರದ್ವಾರಿ ಸಿಂಗ್ ಯಾದವ್ ಈಟಿವಿ ಭಾರತ್ ಜೊತೆ ಮಾತನಾಡಿ, ಈದ್ ಸಂದರ್ಭದಲ್ಲಿ ನಾವು ಮುಸ್ಲಿಮರನ್ನು ಪುಷ್ಪವೃಷ್ಟಿ ಮಾಡಿ ಸ್ವಾಗತಿಸುತ್ತಿದ್ದೇವೆ. ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬಾಳಬೇಕು ಎಂಬ ಸಂದೇಶವನ್ನು ಸಾರಲು ಬಯಸುತ್ತೇವೆ. ಪರಸ್ಪರ ಪ್ರೀತಿಯಿಂದ ಮಾತ್ರ ದೇಶದಲ್ಲಿ ಮತೀಯವಾದವನ್ನು ತೊಡೆದು ಹಾಕಲು ಸಾಧ್ಯ ಎಂದರು.
ಬಿಜೆಪಿ ಮುಖಂಡ ಭರತ್ ಭೂಷಣ್ ಗುಪ್ತಾ ಮಾತನಾಡಿ, ನಾವೆಲ್ಲರೂ ಸಹೋದರರು. ಒಟ್ಟಿಗೆ ವಾಸಿಸುತ್ತಿದ್ದೇವೆ. ಪರಸ್ಪರ ಪ್ರೀತಿ, ಸಹೋದರತ್ವ ಎಂದಿಗೂ ಕೊನೆಗೊಳ್ಳಬಾರದು. ಈ ಸಂದೇಶದೊಂದಿಗೆ ನಾವು ಇಂದು ಈದ್ಗಾವನ್ನು ತಲುಪಿ ಅವರ ಮೇಲೆ ಪುಷ್ಪವೃಷ್ಟಿ ಮಾಡಿದ್ದೇವೆ ಎಂದರು.
ಓದಿ: ರಾಜಸ್ಥಾನದಲ್ಲಿ ಕಲ್ಲು ತೂರಾಟ... ಇದೊಂದು ಪೂರ್ವಭಾವಿ ಯೋಜನೆ ಎಂದ ಕೇಂದ್ರ ಸಚಿವ