ಪೂರ್ವ ಗೋದಾವರಿ( ಆಂಧ್ರಪ್ರದೇಶ): ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಯುವಕನೊಬ್ಬ ಕೋಳಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾನೆ. ಕೋಳಿಗೆ ವಿಶೇಷವಾದ ಗೌನ್ ಹೊಲಿಸಿ ಮತ್ತು ಅದರ ಕುತ್ತಿಗೆಗೆ ಸರ ಹಾಕಿ, ಕೇಕ್ ಕತ್ತರಿಸಿ ಬರ್ತ್ಡೇ ಮಾಡಿದ್ದಾನೆ.
ಇಲ್ಲಿನ ಅನಪರ್ತಿ ಮಂಡಲದ ಪೀರಾ ರಾಮಚಂದ್ರಾಪುರ ಗ್ರಾಮದ ಉದಯ ಭಾಸ್ಕರ್ ಎಂಬ ಯುವಕ ಎರಡು ವರ್ಷಗಳ ಹಿಂದೆ ತಮ್ಮ ಸಂಬಂಧಿಕರಿಂದ 5 ಕೋಳಿ ಮೊಟ್ಟೆಗಳನ್ನು ತಂದು ವೆಂಟಿಲೇಷನ್ ಮೂಲಕ ಮರಿ ಮಾಡಿಸಿದ್ದ. ಆದರೆ, ಐದು ಮರಿಗಳಲ್ಲಿ ಒಂದು ಕೋಳಿ ಮರಿ ಮಾತ್ರ ಬದುಕುಳಿದಿದೆ. ಅದಕ್ಕೆ 'ಮೋಟು' ಎಂಬ ಹೆಸರಿಟ್ಟು ಪ್ರೀತಿಯಿಂದ ಸಾಕುತ್ತಿದ್ದಾನೆ.
ಕಳೆದ ವರ್ಷ ಚೆನ್ನೈನಲ್ಲಿ 'ಮೋಟು' ಕೋಳಿಯ ಮೊದಲ ಜನ್ಮದಿನವನ್ನು ಉದಯ ಭಾಸ್ಕರ್ ಆಚರಿಸಿದ್ದ. ಈ ವರ್ಷ ತನ್ನ ಹುಟ್ಟೂರು ರಾಮಚಂದ್ರಾಪುರಕ್ಕೆ ಬಂದಿದ್ದರಿಂದ ಅಲ್ಲಿಯೇ ಗೆಳೆಯರೊಂದಿಗೆ ಎರಡನೇ ಹುಟ್ಟುಹಬ್ಬ ಆಚರಿಸಿದ್ದಾನೆ. ಈ ಬರ್ತ್ ಡೇ ಆಚರಣೆಗೆ ಬಂದಿದ್ದ ಗೆಳೆಯರು 'ಮೋಟು' ಕೋಳಿಯ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಮೇ 11ರಂದು ಈ ಆಚರಣೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಕೋಳಿಯ ಬರ್ತ್ಡೇ ಸೆಲೆಬ್ರೇಷನ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ಚಾಮರಾಜನಗರದ ಜಮೀನಿನಲ್ಲಿ ಕ್ವಿಂಟಾಲ್ ತೂಕದ ಹೆಬ್ಬಾವು ಸೆರೆ- ಟ್ರ್ಯಾಕ್ಟರ್ನಲ್ಲಿ ಕಾಡಿಗೆ ರವಾನೆ