ETV Bharat / bharat

ಬಿಜೆಪಿ ನಾಯಕರೊಂದಿಗೆ ನಿತೀಶ್​ ಸಂಪರ್ಕ? ಗಾಳಿಸುದ್ದಿಗೆ ತುಪ್ಪ ಸುರಿದ ಬಿಹಾರ ಸಿಎಂ - ಪಿಎಂ ಮೋದಿಗೆ ಧನ್ಯವಾದ ಅರ್ಪಣೆ! - ನಿತೀಶ್ ಕುಮಾರ್

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಿಎಂ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದು, ಬಿಹಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

Bihara cm Nitish Kumar  praises pm Narendra Modi
ಪಿಎಂ ಮೋದಿ ಬಗ್ಗೆ ನಿತೀಶ್ ಕುಮಾರ್ ಗುಣಗಾನ
author img

By ETV Bharat Karnataka Team

Published : Oct 20, 2023, 7:09 AM IST

Updated : Oct 20, 2023, 8:06 AM IST

ಪಾಟ್ನಾ (ಬಿಹಾರ): ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಪಕ್ಷ ಬದಲಾಯಿಸಲಿದ್ದಾರೆ ಎಂಬ ಸುದ್ದಿ ಕೆಲ ಸಮಯದಿಂದ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹಗಳೂ ಇವೆ. ಅದಾಗ್ಯೂ, ಮೋತಿಹಾರಿಯ ಮಹಾತ್ಮ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಹೇಳಿಕೆ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆ ವೇಳೆ, ಸಿಎಂ ನಿತೀಶ್ ಕುಮಾರ್ ತಮ್ಮ ಭಾಷಣದಲ್ಲಿ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ.

ಪಿಎಂ ಮೋದಿ ಬಗ್ಗೆ ಗುಣಗಾನ: ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, 2007ರಲ್ಲಿ ಕೇಂದ್ರ ಸರ್ಕಾರ ಅನೇಕ ರಾಜ್ಯಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ಭೂಮಿ ಒದಗಿಸುವ ಬಗ್ಗೆಯೂ ಚಿಂತನೆ ನಡೆದಿತ್ತು. 2009ರಲ್ಲಿ, ಕೇಂದ್ರ ಸರ್ಕಾರ ಕೇಂದ್ರ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು ಅಂಗೀಕರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೂ ವಿಶ್ವವಿದ್ಯಾಲಯ ಕೊಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಇದಕ್ಕಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತೇವೆ ಎಂದು ತಿಳಿಸಿದ್ದಾರೆ.

"ನಾವು ಬದುಕಿರುವವರೆಗೂ ನಿಮ್ಮನ್ನು ಗೌರವಿಸುತ್ತೇವೆ. ವಿಶ್ವವಿದ್ಯಾಲಯವನ್ನು ಚಂಪಾರಣ್‌ನಲ್ಲಿ ನಿರ್ಮಿಸಲು ನಾವು ಕೇಳಿಕೊಂಡಿದ್ದೇವೆ. ಮಹಾತ್ಮ ಗಾಂಧೀಜಿ ಇಲ್ಲಿಗೆ ಬಂದಿದ್ದರು. ಅವರು ಚಂಪಾರಣ್‌ನಲ್ಲಿಯೂ ಹೋರಾಟ ಮಾಡಿದ್ದಾರೆ. ಹಾಗಾಗಿ ಇಲ್ಲಿಯೇ ನಿರ್ಮಾಣ ಆದರೆ ಒಳ್ಳೆಯದು. ನಮಗೆ ಚಂಪಾರಣ್​ನ ಪೂರ್ವ ಪಶ್ಚಿಮದಲ್ಲಿ ಮಾತ್ರ ಗೌರವವಿದೆ. 2014ರಲ್ಲಿ ಅನುಮೋದನೆ ನೀಡಲಾಯಿತು. 2016ರಿಂದ ಕೆಲಸ ಪ್ರಾರಂಭವಾಯಿತು. ಈ ಬಗ್ಗೆ ನನಗೆ ಬಹಳ ಸಂತೋಷವಿದೆ "- ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ.

ಇದನ್ನೂ ಓದಿ: ಆಧ್ಯಾತ್ಮಿಕ ನಾಯಕ ಬಂಗಾರು ಅಡಿಗಲರ್ ನಿಧನ- ಸಂತಾಪ ಸೂಚಿಸಿದ ಸಿಎಂ ಸ್ಟಾಲಿನ್

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ಕಾರ್ಯಕ್ರಮದ ವೇದಿಕೆಯಲ್ಲೇ ನಿತೀಶ್‌ ಕುಮಾರ್‌ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ರಾಷ್ಟ್ರಮಟ್ಟದಲ್ಲಿ ಚಂಪಾರಣ್‌ಗೆ ಮಹತ್ವ ಸಿಗಬೇಕು ಎಂದರು. ನರೇಂದ್ರ ಮೋದಿ ಅವರಿಗೆ ವೇದಿಕೆಯಲ್ಲಿ ಧನ್ಯವಾದ ಅರ್ಪಿಸಿದ ಅವರು, ನಾವು ಬದುಕಿರುವವರೆಗೂ ಅವರನ್ನು ಗೌರವಿಸುತ್ತಲೇ ಇರುತ್ತೇವೆ ಎಂದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಈ ಹಿಂದೆ ನಾವು ಕಾಂಗ್ರೆಸ್‌ನಿಂದಲೂ ಕೇಳಿದ್ದೆವು. ಆದರೆ, ಚಂಪಾರಣ್‌ನಲ್ಲಿ ಮಾಡಲು ಸಾಧ್ಯವಿಲ್ಲ ಎಂದರು. ನೀವು(ಕಾಂಗ್ರೆಸ್) ಮಹಾತ್ಮ ಗಾಂಧಿ ಅವರನ್ನು ಮರೆಯುತ್ತಿದ್ದೀರಿ. ಗಯಾ ಮತ್ತು ಚಂಪಾರಣ್‌ನಲ್ಲಿ ವಿಶ್ವವಿದ್ಯಾಲಯ ತೆರೆಯುವಂತೆಯೂ ಕೇಳಿದ್ದೆವು. ಆದರೆ, ಆ ಸಂದರ್ಭ ಅದು ಆಗಲಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ 26,000 ರನ್‌ ಗಳಿಕೆ!

Last Updated : Oct 20, 2023, 8:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.