ETV Bharat / bharat

ಶಿಕ್ಷಣ ಇಲಾಖೆ ಅವ್ಯವಸ್ಥೆ ನೋಡಿ:1 ಕೊಠಡಿ, ಒಂದೇ ಬೋರ್ಡ್​​; ಐವರು ಶಿಕ್ಷಕರಿಂದ 1 ರಿಂದ 8ನೇ ಕ್ಲಾಸ್​​​​​ ವಿದ್ಯಾರ್ಥಿಗಳಿಗೆ ಬೋಧನೆ! - ಒಂದೇ ಕೊಠಡಿಯಲ್ಲಿ ವಿವಿಧ ತರಗತಿ ವಿದ್ಯಾರ್ಥಿಗಳು

ಒಂದೇ ಕೊಠಡಿಯಲ್ಲಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ - ಪ್ರವಚನ ಹೇಳಲಾಗ್ತಿದೆ. ಬಿಹಾರದ ಮಸೌರಿಯಲ್ಲಿರುವ ಶಾಲೆಯ ಸ್ಥಿತಿ ಇದು.

Bihar education system
Bihar education system
author img

By

Published : Jul 25, 2022, 6:48 PM IST

Updated : Jul 25, 2022, 7:19 PM IST

ಪಾಟ್ನಾ(ಬಿಹಾರ): ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರಗಳು ಕೋಟ್ಯಂತರ ರೂಪಾಯಿ ಅನುದಾನ ಮೀಸಲು ಇಡುತ್ತವೆ. ಆದರೆ, ಕೆಲವೊಂದು ರಾಜ್ಯಗಳಲ್ಲಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಅಂತಹ ಶಾಲೆಯೊಂದು ಬಿಹಾರದಲ್ಲಿ ಇದೆ. ಒಂದೇ ಕೊಠಡಿಯಲ್ಲಿ 8 ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗ್ತಿದೆ.

ಬಿಹಾರದ ಮಸೌರಿಯಲ್ಲಿರುವ ಶಾಲೆಯ ಸ್ಥಿತಿ ಇದು. ಇಲ್ಲಿ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳಿದ್ದಾರೆ. ಆದರೆ, ಎಲ್ಲರಿಗೂ ಒಂದೇ ಕೊಠಡಿಯಲ್ಲಿ ಪಾಠ ಮಾಡಲಾಗ್ತಿದೆ . ಒಟ್ಟು 142 ವಿದ್ಯಾರ್ಥಿಗಳಿಗೆ ಒಂದೇ ಬ್ಲಾಕ್​ ಬೋರ್ಡ್​​ನಲ್ಲಿ ಐವರು ಶಿಕ್ಷಕರು ಬೋಧನೆ ಮಾಡುತ್ತಾರೆ. ಎಂಟು ತರಗತಿ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಪಾಠ ನಡೆಯುವುದರಿಂದ ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಕರೂ ಸಹ ತೊಂದರೆಗೊಳಗಾಗಿದ್ದಾರೆ.

ಈ ಶಾಲೆಯಲ್ಲಿ ಒಟ್ಟು 5 ಕೊಠಡಿಗಳಿವೆ. ಆದರೆ, ಎಲ್ಲವೂ ಶಿಥಿಲಾವಸ್ಥೆಯಲ್ಲಿವೆ. ಒಂದು ಕೊಠಡಿ ಮಾತ್ರ ಉತ್ತಮ ಸ್ಥಿತಿಯಲ್ಲಿರುವ ಕಾರಣ ಪಾಠ ಮಾಡಲಾಗ್ತಿದೆ. ಈ ಶಾಲೆಯಲ್ಲಿ ಒಟ್ಟು 142 ವಿದ್ಯಾರ್ಥಿಗಳ ದಾಖಲಾತಿ ಇದೆ. ಒಂದೇ ಕೋಣೆ ಇರುವ ಕಾರಣ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಗೈರಾಗುತ್ತಾರೆ. ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ವ್ಯಾಸಂಗ ಮಾಡಲು ಕಷ್ಟವಾಗ್ತಿದೆ ಎಂದು ಹೇಳ್ತಿದ್ದಾರೆ.

1 ಕೊಠಡಿ, ಒಂದೇ ಬೋರ್ಡ್​​; ಐವರು ಶಿಕ್ಷಕರಿಂದ 1ರಿಂದ 8ನೇ ಕ್ಲಾಸ್​​​​​ ವಿದ್ಯಾರ್ಥಿಗಳಿಗೆ ಬೋಧನೆ

ಇದನ್ನೂ ಓದಿರಿ: ಅಂಧತ್ವ ಮೆಟ್ಟಿ ನಿಂತ ಬಾಲೆ.. CBSE 12ನೇ ತರಗತಿಯಲ್ಲಿ 496 ಅಂಕಗಳಿಸಿ ದೇಶಕ್ಕೆ ಮೊದಲ ಸ್ಥಾನ

ಶಿಕ್ಷಣ ಇಲಾಖೆಗೆ ಪತ್ರ ಬರೆದು ಸುಸ್ತಾಗಿರುವ ಮುಖ್ಯೋಪಾಧ್ಯಾಯರು: ಶಾಲಾ ಕೊಠಡಿ ಸರಿ ಮಾಡುವಂತೆ ಅನೇಕ ಸಲ ಶಿಕ್ಷಣ ಇಲಾಖೆಗೆ ಮುಖ್ಯೋಪಾಧ್ಯಾಯರು ಪತ್ರ ಬರೆದಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಸ್ಪಷ್ಟನೆ ಅಧಿಕಾರಿಗಳಿಂದ ಬಂದಿಲ್ಲ. ಕಳಪೆ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಪ್ರತಿದಿನ ಶಾಲೆ ಕಡೆ ಹೆಜ್ಜೆ ಹಾಕುವುದು ಸಹ ಮರೆತು ಬಿಟ್ಟಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಈ ಹಿಂದೆ ಕೂಡ ಬಿಹಾರದ ಶಾಲೆವೊಂದರಲ್ಲಿ ಒಂದೇ ಕೊಠಡಿಯಲ್ಲಿ ಎರಡು ವಿಷಯಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುತ್ತಿರುವ ವಿಡಿಯೋ ಸಹ ವೈರಲ್​​ ಆಗಿತ್ತು. ಒಂದೇ ಬೋರ್ಡ್​​ನಲ್ಲಿ ತಮ್ಮ ಮಕ್ಕಳಿಗೆ ಪಾಠ ಹೇಳುತ್ತಿರುವುದು ಪುನೈಚಕ್​​ನ ಶಾಲೆಯಲ್ಲಿ ಕಂಡು ಬಂದಿತ್ತು.

Last Updated : Jul 25, 2022, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.