ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ, ರಷ್ಯಾ ಪರ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ರಷ್ಯಾದಿಂದ ಅಂತರ ಕಾಪಾಡಿಕೊಳ್ಳುವಂತೆ ಭಾರತಕ್ಕೆ ಸಲಹೆ ನೀಡಿದೆ.
ಭಾರತವು ಈಗಲೂ ನಿಜವಾಗಿಯೂ ನಮ್ಮ ಭದ್ರತಾ ಪಾಲುದಾರ ರಾಷ್ಟ್ರವಾಗಿದೆ. ನಾವು ಆ ಪಾಲುದಾರಿಕೆಯನ್ನು ಗೌರವಿಸುತ್ತೇವೆ. ರಷ್ಯಾ ಎದುರಿಸುತ್ತಿರುವ ತೀವ್ರ ಟೀಕೆಗಳಿಂದ ಮುಂದೆ ಏನಾಗುತ್ತದೆ ಎಂದು ನಾವು ಭಾವಿಸಬಹುದು. ಭಾರತವು ರಷ್ಯಾದಿಂದ ಮತ್ತಷ್ಟು ದೂರವಿರಲು ಇದು ಉತ್ತಮ ಸಮಯವಾಗಿದೆ ಎಂದು ಅಮೆರಿಕದ ದಕ್ಷಿಣ ಏಷ್ಯಾದ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ
ಬುಧವಾರ ಸೆನೆಟ್ ಉಪಸಮಿತಿಯಲ್ಲಿ ಮಾತನಾಡಿದ್ದ ಡೊನಾಲ್ಡ್ ಲು ರಷ್ಯಾದ ಆಕ್ರಮಣವನ್ನು ಖಂಡಿಸುವ ಸಾಮೂಹಿಕವಾಗಿ ಖಂಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧಿಕಾರಿಗಳು ಭಾರತದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ವಿಚಾರವಾಗಿ ಭಾರತ ತಟಸ್ಥ ನಿಲುವು ತೆಗೆದುಕೊಂಡಿದ್ದು, ಈ ನಿಲುವು ರಷ್ಯಾ ಪರವಾಗಿತ್ತು. ಭದ್ರತಾ ಮಂಡಳಿಯಲ್ಲಿ ಮತ್ತು ಸಾಮಾನ್ಯ ಸಭೆಯಲ್ಲಿ ಮತದಾನದಿಂದ ಭಾರತ ದೂರ ಉಳಿದಿತ್ತು. ಇದು ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಉಕ್ರೇನ್ ಅಣುಸ್ಥಾವರಕ್ಕೆ ಬೆಂಕಿ: ರಷ್ಯಾ ಸೇನಾ ಕಾರ್ಯಾಚರಣೆ ನಿಲ್ಲಿಸಲು ಬೈಡನ್ ಒತ್ತಾಯ
ಉಕ್ರೇನ್ - ರಷ್ಯಾ ಯುದ್ಧದ ಬಿಕ್ಕಟ್ಟಿನ ಮಧ್ಯೆ ಕ್ವಾಡ್ ನಾಯಕರ ವರ್ಚುಯಲ್ ಶೃಂಗಸಭೆ ಗುರುವಾರ ನಡೆದಿದ್ದು, ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಭಾಗವಹಿಸಿದ್ದರು.