ETV Bharat / bharat

"ದಯವಿಟ್ಟು ನಿಮ್ಮ ಮಾಜಿ ಗೆಳೆಯನಿಗೆ ಫುಡ್ ಆರ್ಡರ್ ಮಾಡುವುದನ್ನು ನಿಲ್ಲಿಸಿ": ಪ್ರೇಮಿಗಳ ಜಗಳಕ್ಕೆ ತಲೆ ಕೆಡಿಸಿಕೊಂಡ ಜೊಮ್ಯಾಟೊ

ಭೋಪಾಲ್​ನ ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನಿಗೆ ಫುಡ್ ಆರ್ಡರ್ ಮಾಡುವುದನ್ನು ನಿಲ್ಲಿಸುವಂತೆ ಜೊಮ್ಯಾಟೊ ಟ್ವೀಟ್ ಮಾಡಿದ್ದು, ಇದು ವೈರಲ್ ಆಗಿದೆ.

zomato tweet
ಜೊಮ್ಯಾಟೋ
author img

By

Published : Aug 3, 2023, 1:23 PM IST

ಮಧ್ಯಪ್ರದೇಶ : ಭೋಪಾಲ್​ನಲ್ಲಿ ಅಚ್ಚರಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಯುವತಿಯೊಬ್ಬರು ತನ್ನ ಮಾಜಿ ಗೆಳೆಯನಿಗೆ ಆಹಾರವನ್ನು ಆರ್ಡರ್ ಮಾಡಿದ್ದರಿಂದ ತೊಂದರೆಗೀಡಾದ ಜೊಮ್ಯಾಟೊ ಕಂಪನಿಯು ಬೇಸತ್ತು ಟ್ವೀಟ್ ಮಾಡುವ ಮೂಲಕ " ದಯವಿಟ್ಟು ತಮ್ಮ ಗೆಳೆಯನಿಗೆ ಕ್ಯಾಶ್ ಆನ್ ಡೆಲಿವರಿ ಫುಡ್ ಆರ್ಡರ್​ ಮಾಡುವುದನ್ನು ನಿಲ್ಲಿಸುವಂತೆ" ಕೇಳಿಕೊಂಡಿದೆ. ಕಂಪನಿಯ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

  • Ankita from Bhopal please stop sending food to your ex on cash on delivery. This is the 3rd time - he is refusing to pay!

    — zomato (@zomato) August 2, 2023 " class="align-text-top noRightClick twitterSection" data=" ">

ಹೌದು, ಭೋಪಾಲ್‌ನ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನಿಗೆ ಕಿರುಕುಳ ನೀಡಲು ವಿಶಿಷ್ಟವಾದ ಮಾರ್ಗವನ್ನು ಕಂಡು ಕೊಂಡಿದ್ದಾಳೆ. ಆದರೆ, ಯುವತಿಯ ವಿಧಾನದಿಂದ ಆನ್‌ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊ ಅಸಮಾಧಾನಗೊಂಡಿದೆ. ಅಂತಿಮವಾಗಿ, ಟ್ವೀಟ್ ಮಾಡಿ "ಅಂಕಿತಾ ಅವರೆ, ದಯವಿಟ್ಟು ನಿಮ್ಮ ಗೆಳೆಯನಿಗೆ ಕ್ಯಾಶ್ ಆನ್ ಡೆಲಿವರಿ ಆಹಾರವನ್ನು ಆರ್ಡರ್​ ಮಾಡುವುದನ್ನು ನಿಲ್ಲಿಸಿ. ಏಕೆಂದರೆ, ಅವನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾನೆ" ಎಂದು ಮನವಿ ಮಾಡಿದೆ. ಕ್ಯಾಶ್ ಆನ್ ಡೆಲಿವರಿ ಎಂದರೆ ಆರ್ಡರ್ ಡೆಲಿವರಿಯಾದಾಗ ಅದನ್ನು ಸ್ವೀಕರಿಸುವ ವ್ಯಕ್ತಿ ಹಣ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ಸ್ವಿಗ್ಗಿ , ಜೊಮ್ಯಾಟೋ ದರ ; ONDC ಜೊತೆ ಒಪ್ಪಂದಕ್ಕೆ ಮುಂದಾದ ಬೆಂಗಳೂರು ಹೊಟೇಲ್​ ಅಸೋಸಿಯೇಷನ್​

ಭೋಪಾಲ್‌ನ ಅಂಕಿತಾ ಎಂಬುವರು ಇದನ್ನು ಒಂದಲ್ಲ ಮೂರು ಬಾರಿ ಮಾಡಿದ್ದಾರೆ. ಪ್ರತಿ ಬಾರಿ ಜೊಮ್ಯಾಟೊದಿಂದ ಆಹಾರವನ್ನು ಆರ್ಡರ್ ಮಾಡಿದಾಗ ಆಕೆಯ ಮಾಜಿ ಗೆಳೆಯ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾನೆ. ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ನಡುವಿನ ಜಗಳದ ನಡುವೆ ಆನ್ ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಟೊ ತಲೆ ಕೆಡಿಸಿಕೊಂಡಿದೆ. ಅಂತಿಮವಾಗಿ, ಯುವತಿಯ ಹೆಸರನ್ನು ಬಹಿರಂಗಪಡಿಸುವ ಮೂಲಕ ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ : ಮಹಿಳೆ ವಿರುದ್ಧ ಜೊಮ್ಯಾಟೊ ಡೆಲಿವರಿ ಬಾಯ್ ದೂರು : ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ FIR

Zomato ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ : ಈಗಿನ ದಿನಗಳಲ್ಲಿ ಜೊಮ್ಯಾಟೊ ಹೆಚ್ಚು ಸುದ್ದಿಯಲ್ಲಿದೆ. ಬರೀ ಆಹಾರ ವಿತರಣೆಯಲ್ಲಿ ಮಾತ್ರವಲ್ಲದೇ, ಟ್ವಿಟರ್ ಮೂಲಕವೂ ಅನೇಕ ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತದೆ. ಜೊಮ್ಯಾಟೊ ಮಾಡಿದ ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ವೀಟ್‌ ಬಳಕೆದಾರರಿಂದ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. ಅಷ್ಟೇ ಅಲ್ಲದೆ, ಸಾವಿರಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಮಾಡಿದ್ದಾರೆ. 10,000 ಕ್ಕೂ ಹೆಚ್ಚು ಜನರು ಲೈಕ್ಸ್​ ಮಾಡಿದ್ದಾರೆ. ಅನೇಕ ಮಂದಿ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ಅಂಕಿತಾಗೆ ಕ್ಯಾಶ್ ಆನ್ ಡೆಲಿವರಿಯಲ್ಲಿ ಆಹಾರವನ್ನು ಕಳುಹಿಸಬೇಕು ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ : ಫುಡ್​ ಡೆಲಿವರಿಗೆ ಬಂದ ಜೊಮ್ಯಾಟೊ ಬಾಯ್​.. ಯುವಕನ ಖಾಸಗಿ ಅಂಗಕ್ಕೆ ಕಚ್ಚಿತು ಶ್ವಾನ !

ಇದನ್ನೂ ಓದಿ : ದಲಿತ ಡೆಲಿವರಿ ಬಾಯ್​ನಿಂದ ಆಹಾರ ಪಡೆಯದೇ ನಿಂದಿಸಿದ ಗ್ರಾಹಕ.. ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.