ಅಮರಾವತಿ( ಆಂಧ್ರಪ್ರದೇಶ): ಅಮರಾವತಿ ಪ್ರದೇಶದ ಹಳ್ಳಿಗಳಲ್ಲಿ, ರೈತರು ಮತ್ತು ಅವರ ಕುಟುಂಬಗಳು 22ನೇ ದಿನವೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದು, ರಾಜ್ಯ ರಾಜಧಾನಿಯನ್ನು ವಿಶಾಖಪಟ್ಟಣಂಗೆ ಸ್ಥಳಾಂತರಿಸುವ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸರ್ಕಾರದ ಕ್ರಮವನ್ನು ವಿರೋಧಿಸಿದರು.
ಮಂಗಳವಾರದಂದೂ ಪ್ರತಿಭಟನೆಯನ್ನು ಮುಂದುವರೆಸಿದ ರೈತ ಕುಟುಂಬಗಳು ಚೀನಾ ಕಾಕಾನಿ ಬಳಿ ಎನ್‌ಎಚ್ -16 ರಸ್ತೆಯನ್ನು ತಡೆ ಹಿಡಿದಿದ್ದರು.
ಇದೇ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಆಡಳಿತರೂಡ ವೈಎಸ್ಆರ್ ಕಾಂಗ್ರೆಸ್ ಶಾಸಕರ ಕಾರಿಗೆ ಕಲ್ಲುಗಳನ್ನು ತೂರಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ರಿಗಗೊಳಿಸಿದ್ದಾರೆ.
ಹಾಗೂ ರೈತರ ರಸ್ತೆ ತಡೆ ಪ್ರತಿಭಟನೆಗೆ ಜೊತೆಯಾಗಲು ಚೀನಾ ಕಾಕಾನಿಗೆ ತೆರಳಲು ಪ್ರಯತ್ನಿಸುತ್ತಿದ್ದ ಶಾಸಕರು ಸೇರಿದಂತೆ ಹಲವಾರು ಟಿಡಿಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎನ್ಎಚ್ನಲ್ಲಿದ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಅವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ, ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದ ರಾಜ್ಯ ಶಿಕ್ಷಣ ಸಚಿವ ಎ ಸುರೇಶ್ ಅವರನ್ನು ಪೊಲೀಸರು ಪ್ರತಿಭಟನಾ ನಿರತ ರೈತರಿಂದ ಬಲವಂತವಾಗಿ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದರು.