ETV Bharat / bharat

ಹ್ಯಾಂಡ್​ ಗ್ರೆನೇಡ್, ಡಿಟೋನೇಟರ್ ವಶಕ್ಕೆ: ಬಿಹಾರ ವಿಧಾನಸಭಾ ಚುನಾವಣೆಗೆ ಬೆದರಿಕೆ? - ಕೈಮುರ್​​ ಜಿಲ್ಲಾ ಪೊಲೀಸರ ವಿಚಾರಣೆ

ಹ್ಯಾಂಡ್ ಗ್ರೆನೇಡ್​​ಗಳನ್ನು ಹಾಗೂ ಡಿಟೋನೇಟರ್​ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಭಾನುವಾರ ರಾತ್ರಿ ಬಿಹಾರದ ಕೈಮುರ್​ನಲ್ಲಿ ಬಂಧಿಸಿದ್ದಾರೆ

grenades
ಹ್ಯಾಂಡ್​ ಗ್ರೆನೇಡ್
author img

By

Published : Oct 26, 2020, 6:40 PM IST

ಪಾಟ್ನಾ (ಬಿಹಾರ): ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಆತಂಕ ಸೃಷ್ಟಿಸುವ ಘಟನೆಯೊಂದು ನಡೆದಿದೆ. ಹ್ಯಾಂಡ್ ಗ್ರೆನೇಡ್​​ಗಳನ್ನು ಹಾಗೂ ಡಿಟೋನೇಟರ್​ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತನನ್ನು ದೀಪಕ್ ಕುಮಾರ್ ಎಂದು ಗುರ್ತಿಸಲಾಗಿದ್ದು, ಹತ್ತಿಯ ಬ್ಯಾಗ್​ನಲ್ಲಿ ಗ್ರೆನೇಡ್​​ ಹಾಗೂ ಡಿಟೋನೇಟರ್​ ಸಾಗಿಸುವ ವೇಳೆ ಕೈಮುರ್​​ ಜಿಲ್ಲೆಯ ಚಾಂದೌಸಿ ಬಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಇದು ವಾರಣಾಸಿ ಜಿಲ್ಲೆಗೆ ಸಮೀಪವಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೈಮುರ್ ಪೊಲೀಸ್ ವರಿಷ್ಠಾಧಿಕಾರಿ ಮೊಹ್ಮದ್ ದಿಲ್​ನಾಜ್ ಅಹಮದ್ ಆರೋಪಿಯು ಹತ್ತಿ ಬಟ್ಟೆಯಲ್ಲಿ ಗ್ರೆನೇಡ್​ ಸಾಗಿಸುತ್ತಿದ್ದನು. ಉತ್ತರ ಪ್ರದೇಶ ಹಾಗೂ ಬಿಹಾರದ ಗಡಿಯಲ್ಲಿ ಆತನನ್ನು ಸಶಸ್ತ್ರ ಸೀಮಾ ಬಲ (ಎಸ್​ಎಸ್​ಬಿ) ಸೆರೆ ಹಿಡಿದಿದೆ. ಕೈಮುರ್​​ ಪೊಲೀಸರು ಈಗ ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ವಿದ್ವಂಸಕ ಕೃತ್ಯಗಳನ್ನು ತಡೆಯುವ ಸಲುವಾಗಿ ಸಶಸ್ತ್ರ ಸೀಮಾ ಬಲವನ್ನು ನಿಯೋಜಿಸಲಾಗಿದೆ ಎಂದು ಮೊಹ್ಮದ್ ದಿಲ್​ನಾಜ್ ಅಹಮದ್ ಸ್ಪಷ್ಟನೆ ನೀಡಿದ್ದಾರೆ.

ಅಕ್ಟೋಬರ್ 28ರಿಂದ ಪ್ರಾರಂಭವಾಗುವ ವಿಧಾನಸಭಾ ಚುನಾವಣೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪ್ರಯತ್ನ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೈಮುರ್​ನಲ್ಲಿ ಮೊದಲ ಹಂತದ ಚುನಾವಣೆಗಳು ನಡೆಯಲಿದ್ದು, ವಿಚಾರಣೆ ತೀವ್ರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.