ಬಾಲಸೋರ್(ಒಡಿಶಾ): ಅಜ್ಜಿಯೊಬ್ಬಳು 7 ವರ್ಷದ ಮೊಮ್ಮಗನ ಮೇಲೆ ಮೃಗೀಯ ವರ್ತನೆ ತೋರಿವ ಘಟನೆ ಬಾಲಸೋರ್ ಜಿಲ್ಲೆಯ ಗಂಗಾಧರ್ಪುರ್ ಎಂಬಲ್ಲಿ ನಡೆದಿದೆ.
ಮೊಮ್ಮಗ ಕೀಟಲೆ ಮಾಡಿದ್ದಕ್ಕೆ ರೋಚ್ಚಿಗೆದ್ದ ಅಜ್ಜಿ ಪುಟ್ಟ ಬಾಲಕ ಎಂಬುದನ್ನ ನೋಡದೆ ಕಾಲಿನಲ್ಲಿ ಮಗುವನ್ನ ತುಳಿಯುತ್ತ ರಾಕ್ಷಸಿಯಂತೆ ವರ್ತಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಯನ್ನ ವಿಚಾರಣೆ ನಡೆಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಬಾಲಕ ತರಲೆ ಮಾಡುತ್ತಿದ್ದ ಕಾರಣಕ್ಕೆ ಈ ರೀತಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಬಾಲಕನ ತಂದೆ ಮತ್ತು ತಾಯಿ ಮುಂಬೈನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಬಾಲಕ ಒಡಿಶಾದಲ್ಲಿ ತನ್ನ ಅಜ್ಜಿ ಜೊತೆ ವಾಸವಾಗಿದ್ದ. ಸದ್ಯ ಅಜ್ಜಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಾಲಕ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದ್ದಾನೆ.