ETV Bharat / bharat

ಯುಎಸ್​​ ಕ್ಯಾಪಿಟಲ್​ ಮುತ್ತಿಗೆ ಪ್ರಕರಣ: ಟ್ರಂಪ್ ಜೊತೆ ಮಾತನಾಡುವೆ ಎಂದ ಸಚಿವ ಅಠಾವಳೆ!

author img

By

Published : Jan 9, 2021, 6:41 PM IST

ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡವನ್ನು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಪ್ರತಿಕ್ರಿಯೆ ನೀಡಿದ್ದಾರೆ.

Ramdas Athawale
Ramdas Athawale

ನಾಸಿಕ್​: ನವೆಂಬರ್​ 3ರಂದು ಹೊರಬಂದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ವಿರುದ್ಧವಾಗಿ ಡೊನಾಲ್ಡ್​ ಟ್ರಂಪ್​ ಬೆಂಬಲಿಗರು ಕ್ಯಾಪಿಟಲ್​ ಹಿಲ್​ ಮೇಲೆ ದಾಳಿ ನಡೆಸಿದ್ದು, ಇದನ್ನ ಕೇಂದ್ರ ಸಚಿವ ರಾಮದಾಸ್ ಅಠಾವಳೆ ತೀವ್ರವಾಗಿ ಖಂಡಿಸಿದ್ದಾರೆ.

ಟ್ರಂಪ್​ ಬಗ್ಗೆ ನನಗೆ ಸಾಕಷ್ಟು ಗೌರವವಿತ್ತು. ಆದರೆ, ಯುಎಸ್​ ಅಧ್ಯಕ್ಷೀಯ ಚುನಾವಣೆ ನಂತರ ಅವರು ನಡೆದುಕೊಂಡಿರುವ ವರ್ತನೆಯಿಂದ ಹಾಗೂ ಸಾರ್ವಜನಿಕ ಆದೇಶ ಅವಮಾನಿಸಿದ್ದು, ಆ ಗೌರವ ಕರಗಿ ಹೋಗಿದೆ ಎಂದಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡೆದುಕೊಂಡ ರೀತಿ ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಹೀಗಾಗಿ ಅವರನ್ನ ರಿಪಬ್ಲಿಕನ್​ ಎಂದು ಕರೆಯುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ರಿಪಬ್ಲಿಕನ್​ ಪಾರ್ಟಿ್​ ಆಫ್​ ಇಂಡಿಯಾದ ನಾಯಕ ಅಠಾವಳೆ ಹೇಳಿದ್ದಾರೆ.

ಓದಿ: ಸಂಕ್ರಾಂತಿಗೆ ಕೇಂದ್ರದ ಭರ್ಜರಿ ಗಿಫ್ಟ್​: ಜ.16ರಿಂದ ದೇಶಾದ್ಯಂತ ಕೊರೊನಾ ಲಸಿಕೆ ಹಂಚಿಕೆ

ಟ್ರಂಪ್​ ಸೋಲನ್ನು ಒಪ್ಪಿಕೊಳ್ಳಬೇಕು. ಜತೆಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡಬೇಕು. ಆದರೆ, ಜನರ ಆದೇಶ ಅಗೌರವಿಸಿ, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಅಠಾವಳೆ ಹೇಳಿದ್ದಾರೆ. ಸಾಧ್ಯವಾದರೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.