ETV Bharat / bharat

ಬಳಕೆದಾರರಿಗೆ ಮನವೊಲಿಸುವ ಯತ್ನ: ವಾಟ್ಸಪ್​ನಿಂದ 'ಸ್ಟೇಟಸ್' ಸಂಧಾನ - ವಾಟ್ಸಪ್​ನ ಬಳಕೆದಾರ ನೀತಿ

ಹೊಸ ಗೌಪ್ಯತಾ ನೀತಿಯನ್ನು ಜಾರಿಗೊಳಿಸುವುದಾಗಿ ಹೇಳಿದ್ದ ವಾಟ್ಸಪ್ ನಾಲ್ಕು ಸ್ಟೇಟಸ್​ಗಳನ್ನು ಹಂಚಿಕೊಂಡಿದ್ದು, ಈ ಮೂಲಕ ವಾಟ್ಸಪ್ ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ಇರುವ ಅನುಮಾನಗಳನ್ನು ನಿವಾರಿಸಲು ಪ್ರಯತ್ನಿಸಿದೆ.

WhatsApp shares WhatsApp status to give assurance on user privacy
ಬಳಕೆದಾರರಿಗೆ ಮನವೊಲಿಸುವ ಯತ್ನ
author img

By

Published : Jan 17, 2021, 3:54 PM IST

ನವದೆಹಲಿ: ಇತ್ತೀಚೆಗೆ ತನ್ನ ಬಳಕೆದಾರರ ಗೌಪ್ಯತಾ ನೀತಿಯಲ್ಲಿ ಬದಲಾವಣೆ ಮಾಡುವುದಾಗಿ ಹೇಳಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ವಾಟ್ಸಪ್ ಈಗ ಬಳಕೆದಾರರಿಗೆ ಸ್ಟೇಟಸ್ ಕಳಿಸುವ ಮೂಲಕ ಬಳಕೆದಾರರ ಗೌಪ್ಯತಾ ನೀತಿಯನ್ನು ರಕ್ಷಿಸುವುದಾಗಿ ಹೇಳಿಕೊಂಡಿದೆ.

WhatsApp status
ವಾಟ್ಸಪ್​ನಿಂದ ಸ್ಟೇಟಸ್​

ಭಾನುವಾರ ತನ್ನ ವಾಟ್ಸಪ್​ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ನಾಲ್ಕು ಸ್ಟೇಟಸ್​ಗಳನ್ನು ಹಂಚಿಕೊಂಡಿದ್ದು, ಈ ಮೂಲಕ ವಾಟ್ಸಪ್ ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ಇರುವ ಅನುಮಾನಗಳನ್ನು ನಿವಾರಿಸಲು ಪ್ರಯತ್ನಿಸಿದೆ.

ವಾಟ್ಸಪ್ ತನ್ನ ಬಳಕೆದಾರರ ಜೊತೆಗೆ ಹಂಚಿಕೊಂಡಿರುವ ನಾಲ್ಕು ಸ್ಟೇಟಸ್​ಗಳು ಇಂತಿವೆ.

  • ನಾವು ನಿಮ್ಮ ಗೌಪ್ಯತೆ ರಕ್ಷಿಸಲು ಬದ್ಧರಾಗಿದ್ದೇವೆ.
  • ನಿಮ್ಮ ವೈಯಕ್ತಿಕ ಸಂಭಾಷಣೆಯನ್ನು ವಾಟ್ಸಪ್ ಓದಲು ಸಾಧ್ಯವಿಲ್ಲ.
  • ನೀವು ಹಂಚಿಕೊಂಡ ಸ್ಥಳವನ್ನು ವಾಟ್ಸಪ್ ನೋಡುವುದಿಲ್ಲ.
  • ನಿಮ್ಮ ಸಂಪರ್ಕಗಳನ್ನು ಫೇಸ್​ಬುಕ್​ನೊಂದಿಗೆ ಹಂಚಿಕೊಳ್ಳುವುದಿಲ್ಲ.

ಈ ರೀತಿಯ ಸ್ಟೇಟಸ್​ಗಳನ್ನು ವಾಟ್ಸಪ್​ ತನ್ನ ಬಳಕೆದಾರರೊಂದಿಗೆ ಹಂಚಿಕೊಂಡಿದೆ. ಕಳೆದ ವಾರ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಸೇವಾ ನಿಯಮಗಳು ಮತ್ತು ಸಾರ್ವಜನಿಕ ಗೌಪ್ಯತೆ ವಿಚಾರದಲ್ಲಿ ಬದಲಾವಣೆ ತರುವುದಾಗಿ ಹೇಳಿತ್ತು. ಈ ನೀತಿಯನ್ನು ಫೆಬ್ರವರಿ 8ರಿಂದ ಜಾರಿಗೆ ತರುವುದಾಗಿ ಹೇಳಿತ್ತು.

ಇದನ್ನೂ ಓದಿ: ಖಾಸಗಿ ಗೌಪ್ಯತೆ ಕುರಿತು ನಮ್ಮೊಂದಿಗೆ ಮುಕ್ತವಾಗಿ ಚರ್ಚಿಸಿ: ವಾಟ್ಸಾಪ್​ ಮುಖ್ಯಸ್ಥ ಆಹ್ವಾನ

ವಾಟ್ಸಪ್ ಈ ರೀತಿ ಹೇಳಿಕೊಂಡ ನಂತರ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಬಳಕೆದಾರರೊಂದಿಗೆ ಸ್ಟೇಟಸ್ ಹಂಚಿಕೊಳ್ಳುವ ಮೂಲಕ ಟೆಲಿಗ್ರಾಮ್, ಸಿಗ್ನಲ್ ಮುಂತಾದ ಮೆಸೇಜಿಂಗ್ ಆ್ಯಪ್​ಗಳಿಗೆ ಪಲಾಯನವಾಗುತ್ತಿದ್ದ ಬಳಕೆದಾರರ ಮನವೊಲಿಸಲು ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.