ETV Bharat / bharat

ಈರುಳ್ಳಿ ಬಿಕ್ಕಟ್ಟು ತಲೆದೋರಲು ಕಾರಣಗಳೇನು? - ಈರುಳ್ಳಿ ಬಿಕ್ಕಟ್ಟು ತಲೆದೋರಲು ಕಾರಣಗಳೇನು?

ಈರುಳ್ಳಿ ಬೆಲೆ ಏರಿಕೆಯಾದಂತೆ ಜನ ಕಣ್ಣೀರು ಸುರಿಸುತ್ತಿದ್ದಾರೆ. ಪ್ರತಿ ಕಿಲೋಗ್ರಾಂಗೆ ಈರುಳ್ಳಿ ಬೆಲೆ 100 ರೂ.ಗಿಂತ ಹೆಚ್ಚಿರುವುದರಿಂದ ಜನ ಸಾಕಷ್ಟು ಸಮಸ್ಯೆ ಮತ್ತು ತೊಂದರೆ ಎದುರಿಸುತ್ತಿದ್ದಾರೆ. ಈರುಳ್ಳಿ ಸಮಸ್ಯೆ ದೇಶದೆಲ್ಲೆಡೆ ಮತ್ತು ನೆರೆಯ ರಾಷ್ಟ್ರಗಳಲ್ಲಿಯೂ ಇದೆ. ಈ ಬಿಕ್ಕಟ್ಟು ಏಕೆ ಉಲ್ಬಣಿಸಿತು? ಈರುಳ್ಳಿ ಬೆಲೆ ಏಕೆ ಭಯ ಉಂಟುಮಾಡುತ್ತದೆ? ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಎದ್ದಿವೆ.

onion
ಈರುಳ್ಳಿ
author img

By

Published : Dec 4, 2019, 8:24 PM IST

ನಮ್ಮ ದೇಶದಲ್ಲಿ ಈರುಳ್ಳಿ ಕೃಷಿ

ನಮ್ಮ ದೇಶದಲ್ಲಿ ವರ್ಷಕ್ಕೆ 1.20 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಉತ್ಪಾದಿಸಲಾಗುತ್ತದೆ. ಪ್ರತಿ ವರ್ಷ ಒಟ್ಟು 19.40 ದಶಲಕ್ಷ ಟನ್ ಹಾಗೂ, ಹೆಕ್ಟೇರಿಗೆ ಸರಾಸರಿ 16 ಟನ್ ಈರುಳ್ಳಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಹಾಗೂ ತೆಲಂಗಾಣ ಈರುಳ್ಳಿ ಉತ್ಪಾದಿಸುವ ಪ್ರಮುಖ ರಾಜ್ಯಗಳು. ಮಹಾರಾಷ್ಟ್ರವೊಂದರಲ್ಲೇ ಮುಂಗಾರಿನ ವೇಳೆಗೆ 76,279 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಇತ್ತ, ಕರ್ನೂಲ್ ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಾಲ್ ಈರುಳ್ಳಿ ಬೆಲೆ ರೂ. 10,150 ದಾಟಿತ್ತು.

ಏಕೆ ಸಮಸ್ಯೆ?

ಈರುಳ್ಳಿ ಕೃಷಿಯಲ್ಲಿ ತೊಡಗಿರುವ ರಾಜ್ಯಗಳಲ್ಲಿ ಮಧ್ಯಮದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಸಾಮಾನ್ಯ ಮಳೆಗೆ ಹೋಲಿಸಿದರೆ, ಮಹಾರಾಷ್ಟ್ರದಲ್ಲಿ ಒಂದೂವರೆ ಪಟ್ಟು, ಗುಜರಾತ್​ನಲ್ಲಿ ಎರಡು ಪಟ್ಟು, ಮಧ್ಯಪ್ರದೇಶದಲ್ಲಿ ಶೇ. 70 ಹಾಗೂ ತೆಲಂಗಾಣದಲ್ಲಿ ಶೇ. 65 ರಷ್ಟು ಮಳೆಯಾಗಿದೆ.

ಪರಿಣಾಮ, ಬೆಳೆಗೆ ಭಾರಿ ನಷ್ಟ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಪರಿಣಾಮ ರೈತರು ವಿವಿಧೆಡೆ ಎರಡು ಬಾರಿ ಈರುಳ್ಳಿ ಬಿತ್ತನೆ ಮಾಡಬೇಕಾಯಿತು. ಬೆಳೆಗಳು ಉಳಿದರೂ ತಡವಾಗಿ ಬಿತ್ತಿದ ಕೆಲ ಪ್ರದೇಶಗಳಲ್ಲಿ ಇಳುವರಿ ದೊರೆಯಲಿಲ್ಲ. ಸಾಮಾನ್ಯವಾಗಿ, ಅಕ್ಟೋಬರ್ ಮೊದಲ ವಾರದಿಂದ ಮಾರುಕಟ್ಟೆಯಲ್ಲಿರಬೇಕಿದ್ದ ಈರುಳ್ಳಿ ಇನ್ನೂ ರೈತರ ಜಮೀನುಗಳಲ್ಲೇ ಉಳಿದಿದೆ. ಅದೇ ಸಮಯದಲ್ಲಿ, ಈರುಳ್ಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿ ಬೆಲೆಗಳಲ್ಲಿ ಏರಿಕೆಯಾಯಿತು.

ಸರ್ಕಾರದ ಪಾತ್ರವೇನು?

ನವೆಂಬರ್ ಮೊದಲ ವಾರದವರೆಗೆ ನಮ್ಮ ದೇಶ ರೂ. 3,467 ಕೋಟಿಯಷ್ಟು ಈರುಳ್ಳಿ ರಫ್ತು ಮಾಡಿದೆ. ಈಗ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಜನರ ಅಗತ್ಯಗಳನ್ನು ಪೂರೈಸಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಜನವರಿಯವರೆಗೆ ರಫ್ತು ನಿಷೇಧಿಸಿದೆ.

ಇದು ಭಾರತದ ಈರುಳ್ಳಿಯನ್ನು ಅವಲಂಬಿಸಿರುವ ರಾಷ್ಟ್ರಗಳಿಗೆ ಸಮಸ್ಯೆ ತಂದೊಡ್ಡುತ್ತಿದೆ. ರಫ್ತಿಗೆ ಬದಲಾಗಿ, ನಮ್ಮ ದೇಶ ಈಗ ಅಫ್ಘಾನಿಸ್ತಾನ, ಟರ್ಕಿ, ಇರಾನ್ ಮತ್ತು ಈಜಿಫ್ಟ್​ನಿಂದ ಲಕ್ಷಾಂತರ ಟನ್‌ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದೆ.

ನೆರೆಯ ದೇಶಗಳಲ್ಲಿ ಪರಿಸ್ಥಿತಿ

ಬಾಂಗ್ಲಾದೇಶದ ಪ್ರಧಾನಿ ಈರುಳ್ಳಿ ಬೆಳೆಯುವುದನ್ನು ನಿಷೇಧಿಸಿದರು. ಪರಿಣಾಮ ಬೆಲೆ 30 ಟಾಕಾ (25 ರೂ) ಇದ್ದ ಕಿಲೋ ಈರುಳ್ಳಿ ಬೆಲೆ 260 ಟಾಕಾಗೆ (218. ರೂ.) ಏರಿತು.

ಮ್ಯಾನ್ಮಾರ್​ನಲ್ಲಿ ಕಳೆದ ವರ್ಷ 450 ಕ್ಯಾಟ್ ಇದ್ದ (1.6 ಕಿಲೋ) ಈರುಳ್ಳಿ ಈ ವರ್ಷ 850 ಕ್ಯಾಟ್​ನಷ್ಟು ಏರಿಕೆ ಆಗಿದೆ. ಒಂದು ಕ್ಯಾಟ್ ಭಾರತದ 0.47 ರೂಪಾಯಿಗೆ ಸಮ.

ನೇಪಾಳದಲ್ಲಿ ಒಂದು ಕಿಲೋ ಈರುಳ್ಳಿ ಬೆಲೆ ನವೆಂಬರ್‌ನಲ್ಲಿ 100 ನೇಪಾಳಿ ರೂಪಾಯಿಯಷ್ಟಿತ್ತು. ಈಗ ಅದು ರೂ. 150 ದಾಟಿದೆ. ಪರಿಣಾಮ ಭಾರತದ ಗಡಿ ರಾಜ್ಯವಾದ ಬಿಹಾರದಿಂದ ಈರುಳ್ಳಿ ಕಳ್ಳ ಸಾಗಣೆ ಮಾಡಲಾಯಿತು. ಒಂದು ನೇಪಾಳಿ ರೂಪಾಯಿ ಭಾರತದ 0.62 ರೂಪಾಯಿಗೆ ಸಮ.

ಪಾಕಿಸ್ತಾನದಲ್ಲಿ ಒಂದು ಕಿಲೋ ಈರುಳ್ಳಿ ಬೆಲೆ 70 ಪಾಕಿಸ್ತಾನಿ ರೂಪಾಯಿಗಳಿಗೆ ಸಮ. ಏರುತ್ತಿರುವ ಬೆಲೆ ನಿಯಂತ್ರಿಸಲು ಅಲ್ಲಿನ ಸರ್ಕಾರಕ್ಕೆ ಅಡ್ಡಿ ಆತಂಕಗಳು ಎದುರಾಗಿವೆ. ಸಮಸ್ಯೆಯನ್ನು ಎದುರಿಸುತ್ತಿದೆ.

ಶ್ರೀಲಂಕಾದಲ್ಲಿ ಕಿಲೋ ಈರುಳ್ಳಿ ಬೆಲೆ ತುಂಬಾ ಹೆಚ್ಚಾಗಿದೆ. ಕಳೆದ ವರ್ಷ 95 ಶ್ರೀಲಂಕಾ ರೂಪಾಯಿಯಷ್ಟಿದ್ದ ಈ ತರಕಾರಿ ಈಗ 158 ರೂಪಾಯಿ ದಾಟಿದೆ (ಭಾರತದ 62 ರೂ.)

ಬಳಕೆ: ಭಾರತದ ಪ್ರತಿಯೊಬ್ಬ ನಾಗರಿಕ ಸರಾಸರಿ 19 ಕಿಲೋಗ್ರಾಂಗಳಷ್ಟು ಈರುಳ್ಳಿ ಬಳಕೆ ಮಾಡುತ್ತಿದ್ದಾರೆ.

Intro:Body:

123

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.