ಚೆನ್ನೈ: ಟೀಂ ಇಂಡಿಯಾ ವಿರುದ್ಧ ನಿನ್ನೆ ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಬರೋಬ್ಬರಿ 8 ವಿಕೆಟ್ಗಳ ಗೆಲುವು ದಾಖಲು ಮಾಡುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಆದರೆ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ತಂಡದ ಕ್ಯಾಪ್ಟನ್ ಕಿರನ್ ಪೋಲಾರ್ಡ್ಗೆ ಶೇ.80ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಅವಧಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡು ನಾಲ್ಕು ಓವರ್ ಎಸೆದ ಕಾರಣಕ್ಕಾಗಿ ಈ ದಂಡ ಹಾಕಲಾಗಿದೆ ಎಂದು ಐಸಿಸಿ ತಿಳಿಸಿದೆ. ಐಸಿಸಿ ಮ್ಯಾಚ್ ರೆಫ್ರಿ ವೆಸ್ಟ್ ಇಂಡೀಸ್ ತಂಡಕ್ಕೆ ಸಂಭಾವಣೆ ಕಡಿತದ ದಂಡ ವಿಧಿಸಿದ್ದಾರೆ.
ಐಸಿಸಿ ನೀತಿ ಸಂಹಿತೆ 2.22ರ ಅನ್ವಯ ಈ ದಂಡ ಹಾಕಲಾಗಿದ್ದು, ಪ್ಲೇಯರ್ ಶೇ 20ರಷ್ಟು ಹಾಗೂ ತಂಡ ಶೇ.80ರಷ್ಟು ದಂಡ ತೆರಬೇಕಾಗಿದೆ. ಈ ಪಂದ್ಯವನ್ನ ವೆಸ್ಟ್ ಇಂಡೀಸ್ 8ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಶಿಮ್ರಾನ್ ಹೆಟ್ಮಾಯರ್(139), ಶೈ ಹೋಪ್ ಅಜೇಯ (102)ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ.